ಏರ್ ಕಂಡಿಷನರ್ ಸ್ಫೋಟದ ಘಟನೆಗಳು ಇತ್ತೀಚಿಗೆ ಹೆಚ್ಚುತ್ತಿವೆ. ಇದೀಗ ಇಂತಹುದೇ ಮತ್ತೊಂದು ದುರ್ಘಟನೆ ವರದಿಯಾಗಿದೆ.
2/ 8
ಕೇವಲ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಚೆನ್ನೈ ನಗರದ ವ್ಯಕ್ತಿಯೋರ್ವ ಎಸಿ ಸ್ಪೋಟಗೊಂಡು ಮೃತಪಟ್ಟಿದ್ದಾರೆ.
3/ 8
28 ವರ್ಷದ ಪಿ.ಶ್ಯಾಮ್ ಎಂಬುವವರೇ ಮೃತಪಟ್ಟ ದುರ್ದೈವಿ. ಶ್ಯಾಮ್ ರೂಮ್ ಒಮದರಲ್ಲಿ ಇದ್ದಾಗ ಈ ಎಸಿ ಸ್ಫೋಟಗೊಂಡಿದೆ.
4/ 8
ಶ್ಯಾಮ್ ಅವರ ಅಪ್ಪ ಮತ್ತು ಸಹೋದರ ಮನೆಯ ಮೇಲ್ಮಹಡಿಯ ಮೇಲಿದ್ದರು. ಶ್ಯಾಮ್ ಮನೆಯ ಕೆಳಮಹಡಿಯ ರೂಂ ಒಂದರಲ್ಲಿದ್ದ. ಇದೇ ಸಂದರ್ಭದಲ್ಲಿ ಎಸಿ ಸ್ಫೋಟಗೊಂಡಿದೆ.
5/ 8
ಏನೋ ಸ್ಫೋಟದ ಸದ್ದು ಕೇಳಿ ಮನೆಯ ಮೇಲ್ಮಹಡಿಯಿಂದ ಅಪ್ಪ ಮತ್ತು ಸಹೋದರ ಕೆಳಕ್ಕೆ ಬಂದು ನೋಡುವಷ್ಟರಲ್ಲಿ ರೂಮ್ನಿಂದ ಹೊಗೆ ಬರುತ್ತಿತ್ತು.
6/ 8
ರೂಮ್ ಬಾಗಿಲನ್ನು ಒಡೆದು ನೋಡಿದಾಗ ಎಸಿ ಸ್ಫೋಟಗೊಂಡಿದ್ದು ಕಾಣಿಸಿದೆ. ಅಲ್ಲದೇ ಶ್ಯಾಮ್ ಅದಾಗಲೇ ಮೃತಪಟ್ಟ ಸ್ಥಿತಿಯಲ್ಲಿದ್ದರು.
7/ 8
ಏರ್ ಕಂಡಿಷನರ್ ಸ್ಫೋಟದ ಅಪಘಾತಗಳನ್ನು ತಡೆಯಲು ಏನು ಮಾಡಬೇಕು? ಇಲ್ಲಿದೆ ವಿವರ. ಹವಾನಿಯಂತ್ರಣಗಳನ್ನು ಬಳಸುವ ಮೊದಲು ಪ್ರತಿ ವರ್ಷವೂ ಸೇವೆ ಸಲ್ಲಿಸಬೇಕು. ಎಸಿ ದುರಸ್ತಿ ಅಥವಾ ರಿಪೇರಿಗೆ ಅಧಿಕೃತ ವೃತ್ತಿಪರರನ್ನು ಮಾತ್ರ ಕರೆಯಬೇಕು. ಎಸಿ ಗ್ಯಾಸ್ ಸೋರಿಕೆಯ ಸಂದರ್ಭದಲ್ಲಿ ಕಂಪನಿಯ ವೃತ್ತಿಪರರನ್ನು ತಕ್ಷಣವೇ ಕರೆಯಬೇಕು.
8/ 8
ಉತ್ತಮ ದರ್ಜೆಯ ಬಿಡಿಭಾಗಗಳನ್ನು ಮಾತ್ರ ಬಳಸಬೇಕು. ಅಧಿಕೃತ ಸೇವಾ ಕೇಂದ್ರಗಳಿಂದ ಮಾತ್ರ ಎಸಿ ಗ್ಯಾಸ್ ರೀಫಿಲ್ ಮಾಡಬೇಕು. ಎಸಿಗಳೊಂದಿಗೆ ಉತ್ತಮ ಗುಣಮಟ್ಟದ ತಂತಿಗಳು, ಸ್ಟೆಬಿಲೈಸರ್ಗಳನ್ನು ಬಳಸಬೇಕು.