ಎಟಿಎಂನಿಂದ ಟ್ರಾನ್ಸಕ್ಷನ್ ಮಾಡುವಾಗ ತಾಂತ್ರಿಕ ತೊಂದರೆಗೆ ಹಲವು ಬಾರಿ ಒಳಗಾಗುತ್ತೀರಿ. ಅದರಲ್ಲೂ ಹಣ ಠೇವಣಿ ಇಡುವಂತಹ ಎಟಿಎಂಗಳಲ್ಲಿ ಈ ಸಮಸ್ಯೆ ಕಾಣಿಸುವುದು ಸಾಮಾನ್ಯ. ಎಟಿಎಂನಿಂದ ಹಣ ಬರದೇ, ನಿಮ್ಮ ಅಕೌಂಟ್ನಿಂದ ದುಡ್ಡು ಕಡಿತಗೊಂಡರೆ ಇನ್ಮುಂದೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಏಕೆಂದರೆ ಬ್ಯಾಂಕುಗಳು ನಿಮಗೆ ಸುಲಭವಾಗಿ ಹಣ ಮರಳಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮಾಡಬೇಕಿರುವುದು ಇಷ್ಟೇ.
ಎಟಿಎಂಗಳಲ್ಲಿ ನಿಮ್ಮ ಟ್ರಾನ್ಸಕ್ಷನ್ ವಿಫಲವಾದರೆ ಎಟಿಎಂನಿಂದ ಹೊರಡುವ ಮುನ್ನ ವಹಿವಾಟಿನ ಸ್ಲಿಪ್ ಅನ್ನು ತೆಗೆದುಕೊಳ್ಳಿ. ಈ ಸ್ಲಿಪ್ನಲ್ಲಿ ಎಟಿಎಂ ಮಾಹಿತಿ, ಸ್ಥಳ, ಸಮಯ ಮತ್ತು ರೆಸ್ಪಾನ್ಸ್ ಕೋಡ್ ಐಡಿಗಳನ್ನು ಮುದ್ರಿಸಲಾಗಿರುತ್ತದೆ. ಈ ಸ್ಲಿಪ್ ಅನ್ನು ಲಗತ್ತಿಸಿ ನಿಮ್ಮ ಬ್ಯಾಂಕ್ ಶಾಖೆಗೆ ದೂರು ನೀಡಿ. ಇನ್ನು ಎಟಿಎಂನಿಂದ ಸ್ಲಿಪ್ ಬರದಿದ್ದರೆ, ನೀವು ಹೇಳಿಕೆಯ ಮೂಲಕ ದೂರು ನೀಡಬಹುದು. ಈ ದೂರನ್ನು ಪರಿಶೀಲಿಸಿ ಬ್ಯಾಂಕ್ ನಿಮ್ಮ ಹಣವನ್ನು ಹಿಂತಿರುಗಿಸಲಿದೆ.