ಭಾರತದಲ್ಲಿ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದ ರೂಪುರೇಷೆಗಳ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಎಂದಿನಂತೆ ಈ ಬಾರಿ ಕೂಡ ಮತದಾನಕ್ಕೆ ಎಲೆಕ್ಟ್ರಾನಿಕ್ ಮತಯಂತ್ರ (EVM) ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ.
2/ 10
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡಿರುವ ಭಾರತದಲ್ಲಿ ಮೊದಲ ಬಾರಿಗೆ ಇವಿಎಂ ಬಳಸಿರುವುದು 1982ರಲ್ಲಿ. ಕೇರಳದ ಪರೂರ್ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂದರ್ಭದಲ್ಲಿ ಇವಿಎಂ ಮತಯಂತ್ರವನ್ನು ಬಳಸಲಾಗಿತ್ತು.
3/ 10
ಇದಾದ ಬಳಿಕ 1999 ರ ಲೋಕಸಭಾ ಚುನಾವಣೆ ವೇಳೆ ಸೀಮಿತ ಕ್ಷೇತ್ರದಲ್ಲಿ ಇವಿಎಂ ಮತಯಂತ್ರಗಳ ಪ್ರಯೋಗ ಮಾಡಲಾಯಿತು. 2004 ರ ಲೋಕಸಭಾ ಚುನಾವಣೆ ನಂತರ ನಡೆದ ಪ್ರತಿಯೊಂದು ವಿಧಾನಸಭಾ ಚುಣಾವಣೆಯಲ್ಲೂ ಇವಿಎಂ ಅನ್ನು ಜಾರಿಗೆ ತರಲಾಯಿತು.
4/ 10
ಇವೆಲ್ಲಕ್ಕಿಂತ ಆಸಕ್ತಿದಾಯಕ ವಿಷಯವೆಂದರೆ, ವಿಶ್ವದ 195 ರಾಷ್ಟ್ರಗಳಲ್ಲಿ ಕೇವಲ 20 ದೇಶಗಳಲ್ಲಿ ಮಾತ್ರ ಇವಿಎಂ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಈ 20 ದೇಶಗಳಲ್ಲಿ 6 ದೇಶಗಳು ಎಲೆಕ್ಟ್ರಾನಿಕ್ ಮತಯಂತ್ರದ ಬಳಕೆಯ ಪ್ರಾರಂಭಿಕ ಹಂತದಲ್ಲಿದೆ. ಅಂದರೆ ಈ ದೇಶಗಳು ಚುನಾವಣೆಗೆ ಸಂಪೂರ್ಣವಾಗಿ ಇವಿಎಂ ಅನ್ನು ನೆಚ್ಚಿಕೊಂಡಿಲ್ಲ.
5/ 10
ಭಾರತವನ್ನು ಹೊರತುಪಡಿಸಿ, ಬ್ರೆಝಿಲ್, ಫಿಲಿಫೈನ್ಸ್, ಬೆಲ್ಜಿಯಂ, ಎಸ್ಟೋನಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ವೆನೆಜುವೆಲಾ, ಜೋರ್ಡಾನ್, ಮಾಲ್ಡೀವ್ಸ್, ನಮೀಬಿಯಾ, ನೇಪಾಳ, ಭೂತಾನ್, ಈಜಿಪ್ಟ್ ದೇಶಗಳಲ್ಲಿ ಮತ ಚಲಾವಣೆಗೆ ಇವಿಎಂ ಗಳನ್ನು ಬಳಸಲಾಗುತ್ತಿದೆ.
6/ 10
ಇನ್ನು ಅನೇಕ ದೇಶಗಳಲ್ಲಿ ಇವಿಎಂಗಳನ್ನು ಬಳಕೆಗೆ ತರಲಾಗಿದ್ದರೂ, ಬಳಿಕ ನಿಷೇಧಿಸಲಾಯಿತು. ಭದ್ರತೆ ಮತ್ತು ಅಪನಂಬಿಕೆಯ ಕಾರಣದಿಂದ ಜರ್ಮನಿ, ನೆದರ್ಲ್ಯಾಂಡ್ಸ್, ಇಟಲಿ ಮತ್ತು ಅಮೆರಿಕ ದೇಶಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಕ್ಕೆ ಗುಡ್ ಬೈ ಹೇಳಲಾಯಿತು.
7/ 10
ಐರ್ಲೆಂಡ್ನಲ್ಲಿ ಚುನಾವಣೆಗಾಗಿ ಇವಿಎಂ ಬಳಸದಂತೆ ನಿರ್ಬಂಧಿಸಲಾಗಿದೆ. 2006 ರಲ್ಲಿ ನೆದರ್ಲ್ಯಾಂಡ್ಸ್ನಲ್ಲಿ ಇವಿಎಂ ಮೇಲೆ ನಿಷೇಧ ಹೇರಲಾಯಿತು. ಹಾಗೆಯೇ 2009 ರಲ್ಲಿ ಜರ್ಮನಿ ಸರ್ವೋಚ್ಚ ನ್ಯಾಯಾಲಯ ಮತದಾನಕ್ಕೆ ಇವಿಎಂ ಬಳಕೆ ಅಸಂವಿಧಾನಿಕ ಎಂದು ತೀರ್ಪು ನೀಡಿತ್ತು. ಈ ಮೂಲಕ ಚುನಾವಣೆಗೆ ಇವಿಎಂ ಬಳಸದಂತೆ ಸರ್ಕಾರಕ್ಕೆ ತಾಕೀತು ಮಾಡಿತು.
8/ 10
ಇಟಲಿಯಲ್ಲೂ ಚುನಾವಣಾ ಫಲಿತಾಂಶಗಳ ಮೇಲೆ ಇವಿಎಂ ಪರಿಣಾಮ ಬೀರುತ್ತಿದೆ ಎಂದು ನಿಷೇಧಿಸಲಾಯಿತು. ಆದರೆ ಇಂಗ್ಲೆಂಡ್ ಮತ್ತು ಫ್ರಾನ್ಸ್ನಲ್ಲಿ ಚುನಾವಣೆಗೆ ಇವಿಎಂ ಬಳಸಲು ಯಾವತ್ತೂ ಮುಂದಾಗಿರಲಿಲ್ಲ. ಇವಿಎಂ ಬಳಸದ ರಾಷ್ಟ್ರಗಳಲ್ಲಿ ಈಗಲೂ ಮತಪತ್ರಗಳ ಮೂಲಕ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
9/ 10
ಭಾರತದಲ್ಲೂ ಇವಿಎಂ ಯಂತ್ರಗಳ ಮೇಲೆ ಅಪಸ್ವರಗಳು ಕೇಳಿ ಬಂದಿದ್ಧವು. ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಹ್ಯಾಕ್ ಮಾಡಿ ಚುನಾವಣೆ ಗೆಲ್ಲಲಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿದ್ದವು. ಆದರೆ ಇದನ್ನು ಅಲ್ಲೆಗೆಳೆದಿರುವ ಚುನಾವಣಾ ಆಯೋಗ, ಯಾವುದೇ ಪ್ರಯೋಗಕ್ಕೂ ಸಿದ್ಧ ಎಂದು ತಿಳಿಸಿತ್ತು. ಅಲ್ಲದೆ ಪ್ರಯೋಗಿಕವಾಗಿ ಇವಿಎಂ ಬಳಕೆ ಸುರಕ್ಷಿತ ಎಂಬುದನ್ನು ತೋರಿಸಿತ್ತು.
10/ 10
ಭಾರತದಲ್ಲಿ ಬಳಕೆ ಮಾಡುತ್ತಿರುವ ಇವಿಎಂ ಯಂತ್ರಗಳನ್ನು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಹೈದರಾಬಾದ್ ಎಲೆಕ್ಟ್ರಾನಿಕ್ ಕಾರ್ಪ್ನಲ್ಲಿ ನಿರ್ಮಿಸಲಾಗುತ್ತದೆ. ಅಲ್ಲದೆ ಈ ಮತಯಂತ್ರಗಳನ್ನು ನೇಪಾಳ, ನಮೀಬಿಯಾ, ಕೀನ್ಯಾ ಮತ್ತು ಭೂತಾನ್ ದೇಶಗಳು ತಮ್ಮ ಚುನಾವಣೆಯಲ್ಲಿ ಬಳಸುತ್ತಿರುವುದು ವಿಶೇಷ.
First published:
110
ಭಾರತದಲ್ಲಿ 1982 ರಲ್ಲೇ EVM ಬಳಕೆ..! ಮತಯಂತ್ರ ಬಳಸುತ್ತಿರುವ ದೇಶಗಳ ಪಟ್ಟಿ ಇಲ್ಲಿದೆ