Haridwar: ಮಸೀದಿಯಲ್ಲಿ ಹಿಂದೂ ಯುವತಿಯಿಂದ ​ನಮಾಜ್, ಹೈಕೋರ್ಟ್​ನಿಂದಲೇ ಭದ್ರತೆ!

ಹರಿದ್ವಾರ್: ಹರಿದ್ವಾರದ ಪಿರಾನ್‌ ಕಲಿಯಾರ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮನವಿ ಮಾಡಿದ್ದ ಹಿಂದೂ ಮಹಿಳೆಗೆ ಅವಕಾಶ ಕಲ್ಪಿಸಿ ಉತ್ತರಾಖಂಡ ಹೈಕೋರ್ಟ್‌ ಆದೇಶ ಹೊರಡಿಸಿದೆ.

  • News18 Kannada
  • |
  •   | Uttarakhand (Uttaranchal), India
First published:

  • 17

    Haridwar: ಮಸೀದಿಯಲ್ಲಿ ಹಿಂದೂ ಯುವತಿಯಿಂದ ​ನಮಾಜ್, ಹೈಕೋರ್ಟ್​ನಿಂದಲೇ ಭದ್ರತೆ!

    ಮಧ್ಯ ಪ್ರದೇಶದ ನಿವಾಸಿಯಾಗಿರುವ 22 ವರ್ಷದ ಯುವತಿ ‘ತನಗೆ ದರ್ಗಾ ಇಷ್ಟವಾಗಿರೋದ್ರಿಂದ ನನಗೆ ಹರಿದ್ವಾರದ ಪಿರಾನ್ ಕಲಿಯಾರ್ ಮಸೀದಿಯಲ್ಲಿ ನಮಾಜ್ ಮಾಡಲು ಅವಕಾಶ ನೀಡಬೇಕು’ ಎಂದು ಆಕೆಯ ಗೆಳೆಯನೊಂದಿಗೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು.

    MORE
    GALLERIES

  • 27

    Haridwar: ಮಸೀದಿಯಲ್ಲಿ ಹಿಂದೂ ಯುವತಿಯಿಂದ ​ನಮಾಜ್, ಹೈಕೋರ್ಟ್​ನಿಂದಲೇ ಭದ್ರತೆ!

    ಯುವತಿಯ ಈ ನಿರ್ಧಾರದಿಂದ ಸಿಟ್ಟಿಗೆದ್ದಿದ್ದ ಬಲಪಂಥೀಯ ಸಂಘಟನೆಗಳು ಆಕೆಯ ವಿರುದ್ಧ ಮುಗಿಬಿದ್ದಿದ್ದವು. ಅಲ್ಲದೇ ನಮಾಜ್‌ಗೆ ಮುಂದಾದರೆ ಮುಂದಾಗುವ ಅನಾಹುತಕ್ಕೆ ನಾವು ಹೊಣೆಯಲ್ಲ ಎಂದು ಆಕೆಗೆ ಜೀವ ಬೆದರಿಕೆ ಹಾಕಿದ್ದವು.

    MORE
    GALLERIES

  • 37

    Haridwar: ಮಸೀದಿಯಲ್ಲಿ ಹಿಂದೂ ಯುವತಿಯಿಂದ ​ನಮಾಜ್, ಹೈಕೋರ್ಟ್​ನಿಂದಲೇ ಭದ್ರತೆ!

    ಇದೆಲ್ಲವನ್ನು ಗಮನಿಸಿರುವ ಉತ್ತರಾಖಂಡ ಹೈಕೋರ್ಟ್‌, ಯುವತಿಗೆ ಹರಿದ್ವಾರದ ಪಿರಾನ್ ಕಲಿಯಾರ್ ಮಸೀದಿಯಲ್ಲಿ ನಮಾಜ್ ಮಾಡಲು ಅವಕಾಶ ಕಲ್ಪಿಸುವುದರ ಜೊತೆಗೆ ಆಕೆಗೆ ಪೊಲೀಸ್ ಭದ್ರತೆಯನ್ನೂ ಒದಗಿಸುವಂತೆ ಆದೇಶ ಮಾಡಿದೆ.

    MORE
    GALLERIES

  • 47

    Haridwar: ಮಸೀದಿಯಲ್ಲಿ ಹಿಂದೂ ಯುವತಿಯಿಂದ ​ನಮಾಜ್, ಹೈಕೋರ್ಟ್​ನಿಂದಲೇ ಭದ್ರತೆ!

    ನಮಾಜ್ ಮಾಡಲು ಮುಂದಾಗಿದ್ದ ಹಿಂದೂ ಯುವತಿಗೆ ಬಲಪಂಥೀಯ ಸಂಘಟನೆಗಳು ಬೆದರಿಕೆ ಹಾಕಿದ ಹಿನ್ನೆಲೆ ‘ತಾನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿಲ್ಲ ಅಥವಾ ಮದುವೆಯಾಗಿಲ್ಲ. ಆದರೆ ನನಗೆ ದರ್ಗಾದಲ್ಲಿ ನಮಾಜ್ ಸಲ್ಲಿಸಲು ಇಷ್ಟ’ ಎಂದು ಹೇಳಿದ್ದರು.

    MORE
    GALLERIES

  • 57

    Haridwar: ಮಸೀದಿಯಲ್ಲಿ ಹಿಂದೂ ಯುವತಿಯಿಂದ ​ನಮಾಜ್, ಹೈಕೋರ್ಟ್​ನಿಂದಲೇ ಭದ್ರತೆ!

    ಯುವತಿ ಮತ್ತು ಆಕೆಯ ಗೆಳೆಯ ಇಬ್ಬರೂ ಹರಿದ್ವಾರದ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಎರಡು ವರ್ಷಗಳಿಂದ ಜತೆಯಾಗಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    MORE
    GALLERIES

  • 67

    Haridwar: ಮಸೀದಿಯಲ್ಲಿ ಹಿಂದೂ ಯುವತಿಯಿಂದ ​ನಮಾಜ್, ಹೈಕೋರ್ಟ್​ನಿಂದಲೇ ಭದ್ರತೆ!

    ಅರ್ಜಿದಾರರ ವಕೀಲ ಶೀತಲ್ ಸೆಲ್ವಾಲ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದು, ‘ನ್ಯಾಯಮೂರ್ತಿಗಳಾದ ಮನೋಜ್ ಕುಮಾರ್ ತಿವಾರಿ ಮತ್ತು ಪಂಕಜ್ ಪುರೋಹಿತ್ ಅವರ ವಿಭಾಗೀಯ ಪೀಠವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಭದ್ರತೆ ಒದಗಿಸಲು ಅರ್ಜಿದಾರರಿಗೆ ಪತ್ರ ಬರೆಯುವಂತೆ ಸೂಚಿಸಿದೆ ಎಂದು ಹೇಳಿದ್ದಾರೆ.

    MORE
    GALLERIES

  • 77

    Haridwar: ಮಸೀದಿಯಲ್ಲಿ ಹಿಂದೂ ಯುವತಿಯಿಂದ ​ನಮಾಜ್, ಹೈಕೋರ್ಟ್​ನಿಂದಲೇ ಭದ್ರತೆ!

    ಇನ್ನು ಈ ಪ್ರಕರಣದ ವಿಚಾರಣೆಯನ್ನು ಉತ್ತರಾಖಂಡ ಹೈಕೋರ್ಟ್‌ ಮುಂದೂಡಿದ್ದು, ಮುಂದಿನ ವಿಚಾರಣೆ ಮೇ 22 ರಂದು ನಡೆಯಲಿದೆ ಎಂದು ಹೈಕೋರ್ಟ್‌ ಹೇಳಿದೆ.

    MORE
    GALLERIES