Cow Cess: ಎಣ್ಣೆ ಪ್ರಿಯರಿಗೆ ಶಾಕ್‌! ಪ್ರತಿ ಮದ್ಯದ ಬಾಟಲ್ ಮೇಲೆ 10 ರೂಪಾಯಿ ‘ಗೋ ತೆರಿಗೆ’ ವಿಧಿಸಲು ಸರ್ಕಾರ ನಿರ್ಧಾರ

ಮದ್ಯಪಾನ ಮಾಡುವವರ ಸಂಖ್ಯೆ ಪ್ರತೀ ವರ್ಷ ಹೆಚ್ಚುತ್ತಲೇ ಇದೆ. ಭಾರತ ದೇಶದಲ್ಲಿ ಕೋಟ್ಯಂತರ ಮಂದಿ ಮದ್ಯಪಾನ ಮಾಡುವವರು ಇದ್ದು, ಬಹುತೇಕ ರಾಜ್ಯಗಳಲ್ಲಿ ಎಣ್ಣೆಯಿಂದಲೇ ಆದಾಯ ತುಂಬುತ್ತಿದೆ. ಸರ್ಕಾರ ಎಣ್ಣೆಯ ದರ ಅದೆಷ್ಟೇ ಹೆಚ್ಚಳ ಮಾಡುತ್ತಾ ಹೋದರೂ, ಮದ್ಯಪಾನ ಮಾಡುವವರ ಸಂಖ್ಯೆಯೇನೂ ಕಮ್ಮಿಯಾಗಿಲ್ಲ. ಈ ಮಧ್ಯೆ ಮತ್ತೊಮ್ಮೆ ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

First published:

 • 17

  Cow Cess: ಎಣ್ಣೆ ಪ್ರಿಯರಿಗೆ ಶಾಕ್‌! ಪ್ರತಿ ಮದ್ಯದ ಬಾಟಲ್ ಮೇಲೆ 10 ರೂಪಾಯಿ ‘ಗೋ ತೆರಿಗೆ’ ವಿಧಿಸಲು ಸರ್ಕಾರ ನಿರ್ಧಾರ

  ಹೌದು.. ಬಹುತೇಕ ರಾಜ್ಯಗಳಲ್ಲಿ ಪ್ರತೀ ವರ್ಷ ಮದ್ಯದ ದರ ಹೆಚ್ಚಳ ಮಾಡುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಇದೀಗ ಮತ್ತೆ ಮದ್ಯದ ಮೇಲೆ 10 ರೂಪಾಯಿ ತೆರಿಗೆ ವಿಧಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.

  MORE
  GALLERIES

 • 27

  Cow Cess: ಎಣ್ಣೆ ಪ್ರಿಯರಿಗೆ ಶಾಕ್‌! ಪ್ರತಿ ಮದ್ಯದ ಬಾಟಲ್ ಮೇಲೆ 10 ರೂಪಾಯಿ ‘ಗೋ ತೆರಿಗೆ’ ವಿಧಿಸಲು ಸರ್ಕಾರ ನಿರ್ಧಾರ

  ಮದ್ಯಪಾನ ಪ್ರಿಯರಿಗೆ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಶಾಕ್ ನೀಡಲು ನಿರ್ಧರಿಸಿದ್ದು, ಪ್ರತೀ ಬಾಟಲ್ ಮದ್ಯದ ಮೇಲೆ 10 ರೂಪಾಯಿ ತೆರಿಗೆ ವಿಧಿಸಲು ಬಜೆಟ್‌ನಲ್ಲಿ ನಿರ್ಧಾರ ಮಾಡಲಾಗಿದೆ.

  MORE
  GALLERIES

 • 37

  Cow Cess: ಎಣ್ಣೆ ಪ್ರಿಯರಿಗೆ ಶಾಕ್‌! ಪ್ರತಿ ಮದ್ಯದ ಬಾಟಲ್ ಮೇಲೆ 10 ರೂಪಾಯಿ ‘ಗೋ ತೆರಿಗೆ’ ವಿಧಿಸಲು ಸರ್ಕಾರ ನಿರ್ಧಾರ

  ಇನ್ನು ಪ್ರತೀ ಭಾಟಲ್ ಮದ್ಯದ ಮೇಲೆ ವಿಧಿಸುವ 10 ರೂಪಾಯಿ ತೆರಿಗೆಗೆ ಗೋ ತೆರಿಗೆ ಎಂದು ಹೆಸರಿಡಲಾಗಿದ್ದು, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ರಾಜ್ಯ ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಿದ್ದಾರೆ.

  MORE
  GALLERIES

 • 47

  Cow Cess: ಎಣ್ಣೆ ಪ್ರಿಯರಿಗೆ ಶಾಕ್‌! ಪ್ರತಿ ಮದ್ಯದ ಬಾಟಲ್ ಮೇಲೆ 10 ರೂಪಾಯಿ ‘ಗೋ ತೆರಿಗೆ’ ವಿಧಿಸಲು ಸರ್ಕಾರ ನಿರ್ಧಾರ

  ರಾಜ್ಯದ ಆರ್ಥಿಕ ಚಟುವಟಿಕೆಯಲ್ಲಿ ಜಾನುವಾರುಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಹಸು ಸಾಕಾಣಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

  MORE
  GALLERIES

 • 57

  Cow Cess: ಎಣ್ಣೆ ಪ್ರಿಯರಿಗೆ ಶಾಕ್‌! ಪ್ರತಿ ಮದ್ಯದ ಬಾಟಲ್ ಮೇಲೆ 10 ರೂಪಾಯಿ ‘ಗೋ ತೆರಿಗೆ’ ವಿಧಿಸಲು ಸರ್ಕಾರ ನಿರ್ಧಾರ

  ಮದ್ಯದ ಮೇಲೆ ‘ಗೋ ತೆರಿಗೆ’ ವಿಧಿಸುವುದರಿಂದ ವಾರ್ಷಿಕ ನೂರು ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿಯನ್ನು ಸಿಎಂ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ಹೊಂದಿದೆ ಎಂದು ಹೇಳಲಾಗಿದೆ.

  MORE
  GALLERIES

 • 67

  Cow Cess: ಎಣ್ಣೆ ಪ್ರಿಯರಿಗೆ ಶಾಕ್‌! ಪ್ರತಿ ಮದ್ಯದ ಬಾಟಲ್ ಮೇಲೆ 10 ರೂಪಾಯಿ ‘ಗೋ ತೆರಿಗೆ’ ವಿಧಿಸಲು ಸರ್ಕಾರ ನಿರ್ಧಾರ

  ಕೆಲವು ರಾಜ್ಯಗಳಲ್ಲಿ ಮದ್ಯದ ಹೊರತಾಗಿ ಬೇರೆ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಈ ತೆರಿಗೆಯನ್ನು ಮದ್ಯದ ಮೇಲೆ ವಿಧಿಸಲಾಗುವುದು ಎಂದು ಸಿಎಂ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ.

  MORE
  GALLERIES

 • 77

  Cow Cess: ಎಣ್ಣೆ ಪ್ರಿಯರಿಗೆ ಶಾಕ್‌! ಪ್ರತಿ ಮದ್ಯದ ಬಾಟಲ್ ಮೇಲೆ 10 ರೂಪಾಯಿ ‘ಗೋ ತೆರಿಗೆ’ ವಿಧಿಸಲು ಸರ್ಕಾರ ನಿರ್ಧಾರ

  ಈ ಬಜೆಟ್ ಔಪಚಾರಿಕವಾಗಿರದೆ ರಾಜ್ಯಕ್ಕೆ ಹೊಸ ದಿಕ್ಕು ನೀಡುವ ಬಜೆಟ್ ಆಗಿದೆ. ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಶೇ 50ರಷ್ಟು ಸಬ್ಸಿಡಿ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

  MORE
  GALLERIES