ಕಂಪನಿಗಳು ಪಾನೀಯಗಳನ್ನು ಮಾರಾಟ ಮಾಡಲು ಪರವಾನಗಿಗಳನ್ನು ಪಡೆಯಬಹುದು, ಆದರೆ ಅವರು ಕೆಲವು ಮಾನದಂಡಗಳನ್ನು ಪೂರೈಸಬೇಕಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಆ ಕಂಪನಿಗಳು ಕನಿಷ್ಠ 1 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಹೊಂದಿರಬೇಕು. 5 ಸಾವಿರ ಜನರಿಗೆ ಉದ್ಯೋಗ ನೀಡಿರಬೇಕು. ಅಲ್ಲದೆ ಆಲ್ಕೋಹಾಲ್ ಪಾನೀಯಗಳನ್ನು ಕಚೇರಿ ಕ್ಯಾಂಟೀನ್ ಅಥವಾ ಪ್ಯಾಂಟ್ರಿಯಲ್ಲಿ ಮಾರಾಟ ಮಾಡಬೇಕು. ವರ್ಕ್‌ಸ್ಪೇಸ್ ಕ್ಯಾಂಟೀನ್ ವಿಸ್ತೀರ್ಣದಲ್ಲಿ ಕನಿಷ್ಠ 2,000 ಚದರ ಅಡಿ ಇರಬೇಕು.
L-10F ಪರವಾನಗಿ ಎಂದು ಕರೆಯಲ್ಪಡುವ ಈ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಕಾರ್ಯವಿಧಾನವು ಬಾರ್ ಪರವಾನಗಿಗಳಂತೆಯೇ ಇರುತ್ತದೆ. ಇದಕ್ಕಾಗಿ ಪ್ರತಿ ಅರ್ಜಿದಾರರು 3 ಲಕ್ಷ ರೂಪಾಯಿಗಳನ್ನು ಭದ್ರತಾ ಠೇವಣಿ ಜೊತೆ 10 ಲಕ್ಷ ರೂಪಾಯಿ ವಾರ್ಷಿಕ ಪರವಾನಗಿ ಶುಲ್ಕ ಪಾವತಿಸಬೇಕು. ಮದ್ಯ ಪೂರೈಕೆ ಮಾಡುವ ಕಚೇರಿ ಪ್ರತ್ಯೇಕ ರಚನೆಯಾಗಬೇಕು. ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಇದು ರಸ್ತೆ ಮಾರ್ಗವಾಗಿರಬಾರದು ಅಥವಾ ಜನರು ಆಗಾಗ್ಗೆ ಬರುವ ಯಾವುದೇ ಪ್ರದೇಶಕ್ಕೆ ಸಂಪರ್ಕ ಹೊಂದಿರಬಾರದು.