ಬುಲೆಟ್​ ಖರೀದಿಸದೇ ಈ ಕೆಲಸ ಮಾಡಿದ್ರೆ, ನಿಮ್ಮ ಖಾತೆಯಲ್ಲಿರುತ್ತಿತ್ತು 7 ಕೋಟಿ ರೂ..!

1993 ರಲ್ಲಿ ಇನ್ಫೋಸಿಸ್​ ಕಂಪನಿಯ ಷೇರು ದರ  ಕೇವಲ 145 ರೂಪಾಯಿ ಆಗಿತ್ತು. ಅಂದು  10 ಸಾವಿರ ರೂ. ಹೂಡಿಕೆ ಮಾಡಿದ್ದರೆ ಇಂದು ಅದರ ಮೌಲ್ಯ ಸುಮಾರು  2 ಕೋಟಿಯಾಗಿರಲಿದೆ.

  • News18
  • |
First published:

  • 18

    ಬುಲೆಟ್​ ಖರೀದಿಸದೇ ಈ ಕೆಲಸ ಮಾಡಿದ್ರೆ, ನಿಮ್ಮ ಖಾತೆಯಲ್ಲಿರುತ್ತಿತ್ತು 7 ಕೋಟಿ ರೂ..!

    ಪ್ರತಿಯೊಬ್ಬರಿಗೂ ಐಷರಾಮಿ ಜೀವನ ನಡೆಸಬೇಕೆಂಬ ಕನಸುಗಳಿರುತ್ತದೆ. ಇದಕ್ಕಾಗಿ ಜೀವನ ಪೂರ್ತಿ ಕೆಲಸ ಮಾಡಿದರೂ ಒಂದು ಕಾರು ಖರೀದಿಸಲು ಕೂಡ ಸಾಧ್ಯವಾಗಿರುವುದಿಲ್ಲ. ಅದೇ ಸಮಯದಲ್ಲಿ ಕೆಲವರು ನಿರ್ದಿಷ್ಟ ಸಮಯದಲ್ಲಿ ಕೆಲ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗಿರುತ್ತಾರೆ. ಅಂತಹದೊಂದು ಅವಕಾಶದ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತೇವೆ. ಇಲ್ಲಿ ಸಾವಿರ ಹೂಡಿಕೆ ಮಾಡಿ ಕೋಟಿಗಳಿಸುವ ಅವಕಾಶವಿದೆ.

    MORE
    GALLERIES

  • 28

    ಬುಲೆಟ್​ ಖರೀದಿಸದೇ ಈ ಕೆಲಸ ಮಾಡಿದ್ರೆ, ನಿಮ್ಮ ಖಾತೆಯಲ್ಲಿರುತ್ತಿತ್ತು 7 ಕೋಟಿ ರೂ..!

    ಕೋಟಿ ಗಳಿಕೆಯ ಫಾರ್ಮುಲ- ಕಳೆದೆರಡು ದಿನಗಳಿಂದ ರಾಯಲ್​ ಎನ್​ಫೀಲ್ಡ್​  ಕಂಪನಿ ಬಾರೀ ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಹೊಸ ಬೈಕುಗಳು ಎಂದು ನೀವು ಅಂದುಕೊಂಡರೆ ನಿಮ್ಮ ಊಹೆ ತಪ್ಪು.  2001ರಲ್ಲಿ ಐಷರ್ ಮೋಟಾರ್ಸ್​ ಅಧೀನದಲ್ಲಿರುವ ರಾಯಲ್​ ಎನ್​ಫೀಲ್ಡ್​ನ ಷೇರು ಖರೀದಿ ಮೊತ್ತ 55 ಸಾವಿರವಾಗಿತ್ತು. ಅಂದು ಐಷರ್​ನಲ್ಲಿ ಹೂಡಿಕೆ ಮಾಡಿರುವವರು ಇಂದು ಕೋಟ್ಯಾಧಿಪತಿಗಳಾಗಿದ್ದಾರೆ. ಹಲವರು ಕಂಪನಿ ಕಡೆಯಿಂದ ಹೆಚ್ಚಿನ ಲಾಭಾಂಶ ಪಡೆದಿದ್ದಾರೆ. ಈ ಕಾರಣದಿಂದ ರಾಯಲ್​ ಎನ್​ಫೀಲ್ಡ್​ ಸದ್ದು ಮಾಡುತ್ತಿದೆ.  ಸರಿಯಾದ ಸಮಯದಲ್ಲಿ ನಾವು ಕೆಲ ಕಂಪನಿಗಳ ಷೇರು ಖರೀದಿ ಮಾಡುವುದರಿಂದ ಭವಿಷ್ಯದಲ್ಲಿ ಹೆಚ್ಚಿನ ಲಾಭಗಳಿಸಬಹುದು.

    MORE
    GALLERIES

  • 38

    ಬುಲೆಟ್​ ಖರೀದಿಸದೇ ಈ ಕೆಲಸ ಮಾಡಿದ್ರೆ, ನಿಮ್ಮ ಖಾತೆಯಲ್ಲಿರುತ್ತಿತ್ತು 7 ಕೋಟಿ ರೂ..!

    55 ಸಾವಿರದಿಂದ 7 ಕೋಟಿ: 2001ರಲ್ಲಿ ಐಷರ್ ಮೋಟರ್ಸ್ ​ ಕಂಪನಿಯ ಒಂದು ಷೇರುದರ 17.50 ರೂ. ಈ ಸಮಯದಲ್ಲಿ ನೀವು 3143 ಷೇರುಗಳನ್ನು 55 ಸಾವಿರ ರೂಪಾಯಿಗೆ ಖರೀದಿಸಿದ್ದರೆ, ಇಂದಿಗೆ ಅದರ ಒಂದು ಷೇರು ವಾಲ್ಯೂ  25 ಸಾವಿರ ರೂ. ಅಂದರೆ  2018 ರಲ್ಲಿ 3143 ಷೇರುಗಳ ಒಟ್ಟು ಮೌಲ್ಯ ಬರೋಬ್ಬರಿ  7 ಕೋಟಿ ರೂ. ಆಗಿದೆ.

    MORE
    GALLERIES

  • 48

    ಬುಲೆಟ್​ ಖರೀದಿಸದೇ ಈ ಕೆಲಸ ಮಾಡಿದ್ರೆ, ನಿಮ್ಮ ಖಾತೆಯಲ್ಲಿರುತ್ತಿತ್ತು 7 ಕೋಟಿ ರೂ..!

    ಐಷರ್ ಕಂಪನಿ ಷೇರು ಹೊಂದಲು ಅವಕಾಶವಿದೆಯೇ?: ಷೇರು ಮಾರುಕಟ್ಟೆಯ ತಜ್ಙರ ಪ್ರಕಾರ ಐಷರ್ ಕಂಪನಿಯು ಸದ್ಯ ಉತ್ತಮ ಲಾಭದಲ್ಲಿದೆ. ಹೀಗಾಗಿ ತನ್ನ ವ್ಯವಹಾರವನ್ನು ವಿಸ್ತರಿಸುವತ್ತ ಗಮನ ಹರಿಸಲಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಷೇರು ಮಾರಾಟದ ಬಗ್ಗೆ ಕಂಪನಿ ಆಸಕ್ತಿವಹಿಸಲಿದೆ. ಇಂತಹ ಸಂದರ್ಭದಲ್ಲಿ ದೀರ್ಘಕಾಲದ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ. ಇದಕ್ಕಾಗಿ ಕಂಪನಿ ಪ್ರೀಮಿಯಂ ವಿಭಾಗವನ್ನು ಕೂಡ ಪರಿಚಯಿಸಿದೆ.

    MORE
    GALLERIES

  • 58

    ಬುಲೆಟ್​ ಖರೀದಿಸದೇ ಈ ಕೆಲಸ ಮಾಡಿದ್ರೆ, ನಿಮ್ಮ ಖಾತೆಯಲ್ಲಿರುತ್ತಿತ್ತು 7 ಕೋಟಿ ರೂ..!

    ಇತರೆ ಕಂಪನಿಗಳಲ್ಲಿ ಹೂಡಿಕೆ: 1993 ರಲ್ಲಿ ಇನ್ಫೋಸಿಸ್​ ಕಂಪನಿಯ ಷೇರು ದರ  ಕೇವಲ 145 ರೂಪಾಯಿ ಆಗಿತ್ತು. ಅಂದು  10 ಸಾವಿರ ರೂ. ಹೂಡಿಕೆ ಮಾಡಿದ್ದರೆ ಇಂದು ಅದರ ಮೌಲ್ಯ ಸುಮಾರು  2 ಕೋಟಿಯಾಗಿರುತ್ತಿತ್ತು. ಇಂತಹ ದೊಡ್ಡ ಕಂಪನಿಗಳಲ್ಲಿ ದೀರ್ಘಾವಧಿಯ ಹೂಡಿಕೆ ಮಾಡಿದರೆ ಲಾಭಾಂಶ ಮತ್ತು ಬೋನಸ್​ಗಳು ಕೂಡ ಸಿಗುತ್ತದೆ. 2000 ಇಸವಿಯ ನಂತರ ಇನ್ಫೋಸಿಸ್ ಕಂಪನಿ  30 ಕ್ಕಿಂತಲೂ ಹೆಚ್ಚು ಬಾರಿ ಹೂಡಿಕೆದಾರರಿಗೆ ಲಾಭಾಂಶವನ್ನು ಪಾವತಿಸಿದೆ.

    MORE
    GALLERIES

  • 68

    ಬುಲೆಟ್​ ಖರೀದಿಸದೇ ಈ ಕೆಲಸ ಮಾಡಿದ್ರೆ, ನಿಮ್ಮ ಖಾತೆಯಲ್ಲಿರುತ್ತಿತ್ತು 7 ಕೋಟಿ ರೂ..!

    ನೀವು ಕೂಡ ಷೇರು ಖರೀದಿಸಬಹುದು: ಷೇರು ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳ ಷೇರುಗಳನ್ನು ಖರೀದಿಸುವ ಅವಕಾಶಗಳಿರುತ್ತದೆ. ಇಲ್ಲಿ ಸಾಮಾನ್ಯರು 50 ರಿಂದ 500 ರವರೆಗೂ ಷೇರು ಖರೀದಿ ಮಾಡಿಕೊಳ್ಳಬಹುದು. ಆದರೆ ಷೇರು ಮಾರುಕಟ್ಟೆಯ ಬಗ್ಗೆ ಒಂದಷ್ಟು ಮಾಹಿತಿ ಇರಬೇಕಾದದ್ದು ಅಗತ್ಯ. ಸ್ಟಾಕ್​ ಮಾರ್ಕೆಟ್​ನ ಪರಿಣಿತರ ಸಲಹೆ ಮೇರೆಗೆ ಪ್ರಾರಂಭದಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು ಖರೀದಿಸುವುದು ಉತ್ತಮ.

    MORE
    GALLERIES

  • 78

    ಬುಲೆಟ್​ ಖರೀದಿಸದೇ ಈ ಕೆಲಸ ಮಾಡಿದ್ರೆ, ನಿಮ್ಮ ಖಾತೆಯಲ್ಲಿರುತ್ತಿತ್ತು 7 ಕೋಟಿ ರೂ..!

    ನಿಮ್ಮ ಬಜೆಟ್​ಗೆ ಅನುಗುಣವಾಗಿ ಹೂಡಿಕೆ ಮಾಡಬೇಕಾಗುತ್ತದೆ. ಏಕೆಂದರೆ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗುವುದರಿಂದ ನಷ್ಟ ಅನುಭವಿಸುವ ಸಾಧ್ಯತೆಗಳು ಇರುತ್ತದೆ. ದೀರ್ಘಾವಧಿಯ ಹೂಡಿಕೆ ವೇಳೆ ಪರಿಚಿತ ಎಕ್ಸ್​ಪರ್ಟ್​ಗಳ ಸಲಹೆಗಳನ್ನು ಪಡೆಯಬಹುದು. ಹಾಗೆಯೇ ನೀವು ಹೂಡಿಕೆ ಮಾಡುವ ಕಂಪನಿಗಳ ಕುರಿತು ಮತ್ತು ಈ ಹಿಂದಿನ ಷೇರು ಲಾಭಗಳ ಮಾಹಿತಿಗಳನ್ನು ಕಲೆ ಹಾಕುವುದು ಉತ್ತಮ. ಹೆಚ್ಚಿನ ಹೂಡಿಕೆ ಮಾಡಬೇಕೆಂದಿದ್ದರೆ ಸಲಹೆಗಾರರ ನೆರವು ಪಡೆಯುವುದನ್ನು ನೆನಪಿನಲ್ಲಿಡಿ.

    MORE
    GALLERIES

  • 88

    ಬುಲೆಟ್​ ಖರೀದಿಸದೇ ಈ ಕೆಲಸ ಮಾಡಿದ್ರೆ, ನಿಮ್ಮ ಖಾತೆಯಲ್ಲಿರುತ್ತಿತ್ತು 7 ಕೋಟಿ ರೂ..!

    ಇನ್ಫೋಸಿಸ್ ಮತ್ತು ರಿಲಯನ್ಸ್​ನಂತಹ ದೊಡ್ಡ ಕಂಪನಿಗಳಲ್ಲೂ ಸಣ್ಣ ಪ್ರಮಾಣದ ಷೇರು ಖರೀದಿಗೆ ಅವಕಾಶವಿರುತ್ತದೆ. ಇಂತಹ ಸಂದರ್ಭದಲ್ಲಿ ದೀರ್ಘಕಾಲದ ಷೇರುಗಳನ್ನು ಖರೀದಿಸಿದರೆ ಹೆಚ್ಚಿನ ಲಾಭ ಸಿಗಲಿದೆ. ಅಲ್ಲದೆ ಬಂಡವಾಳದಲ್ಲಿ ನಷ್ಟ ಉಂಟಾದರೂ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗುವುದಿಲ್ಲ.

    MORE
    GALLERIES