H3N2 Outbreak: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಎಚ್​3ಎನ್​2 ವೈರಸ್​, ಮಾರ್ಚ್​ 16 ರಿಂದ 26 ರವರೆಗೆ ಶಾಲೆಗಳಿಗೆ ರಜೆ ಘೋಷಣೆ!

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು, ಗರ್ಭಿಣಿಯರು ಮತ್ತು ಆಸ್ತಮಾ, ಮಧುಮೇಹ, ಹೃದ್ರೋಗ, ದುರ್ಬಲ  ರೋಗನಿರೋಧಕ ಶಕ್ತಿ ಹೊಂದಿರುವವರು, ನರವೈಜ್ಞಾನಿಕದಂತಹ ದೀರ್ಘಕಾಲದ ಕಾಯಿಲೆಗಳಿರುವ ಜನರು H3N2 ವೈರಸ್​ನಿಂದಾಗಿ ಹೆಚ್ಚಿನ ತೊಂದರೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.

First published:

  • 18

    H3N2 Outbreak: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಎಚ್​3ಎನ್​2 ವೈರಸ್​, ಮಾರ್ಚ್​ 16 ರಿಂದ 26 ರವರೆಗೆ ಶಾಲೆಗಳಿಗೆ ರಜೆ ಘೋಷಣೆ!

    H3N2 ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ 1ರಿಂದ 8ನೇ ತರಗತಿವರೆಗಿನ ಎಲ್ಲಾ ಶಾಲೆಗಳನ್ನು ಮಾರ್ಚ್ 16 ರಿಂದ ಮಾರ್ಚ್ 26 ವರೆಗೆ ಮುಚ್ಚುವುದಾಗಿ ಸರ್ಕಾರ ಘೋಷಿಸಿದೆ.

    MORE
    GALLERIES

  • 28

    H3N2 Outbreak: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಎಚ್​3ಎನ್​2 ವೈರಸ್​, ಮಾರ್ಚ್​ 16 ರಿಂದ 26 ರವರೆಗೆ ಶಾಲೆಗಳಿಗೆ ರಜೆ ಘೋಷಣೆ!

    ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಎ.ನಮ್ಮಶಿವಾಯಂ, ಮಕ್ಕಳಲ್ಲಿ ಹೆಚ್3ಎನ್2 ಜ್ವರ ಹರಡುತ್ತಿರುವ ಹಿನ್ನೆಲೆಯಲ್ಲಿ ಒಂದನೇ ತರಗತಿಯಿಂದ 8ನೇ ತರಗತಿವರೆಗಿನ ಖಾಸಗಿ, ಸರ್ಕಾರಿ ಅನುದಾನಿತ  ಸೇರಿದಂತೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 38

    H3N2 Outbreak: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಎಚ್​3ಎನ್​2 ವೈರಸ್​, ಮಾರ್ಚ್​ 16 ರಿಂದ 26 ರವರೆಗೆ ಶಾಲೆಗಳಿಗೆ ರಜೆ ಘೋಷಣೆ!

    ವಿಶೇಷವಾಗಿ ಮಕ್ಕಳಲ್ಲಿ H3N2 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪುದುಚೇರಿ, ಕಾರೈಕಲ್, ಮಾಹೆ ಮತ್ತು ಯಾನಂನ ಎಲ್ಲಾ ನಾಲ್ಕು ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಈ ಆದೇಶವು ಜಾರಿಯಲ್ಲಿರುತ್ತದೆ ಎಂದು ಸಚಿವರು ಹೇಳಿದರು.

    MORE
    GALLERIES

  • 48

    H3N2 Outbreak: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಎಚ್​3ಎನ್​2 ವೈರಸ್​, ಮಾರ್ಚ್​ 16 ರಿಂದ 26 ರವರೆಗೆ ಶಾಲೆಗಳಿಗೆ ರಜೆ ಘೋಷಣೆ!

    ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಪುದುಚೇರಿಯಲ್ಲಿ ಮಾರ್ಚ್ 4 ರವರೆಗೆ 79 H3N2 ಸೋಂಕು ಪ್ರಕರಣಗಳು ವರದಿಯಾಗಿವೆ. ಆದರೂ ಇಲ್ಲಿಯವರೆಗೆ ಯಾವುದೇ ಸಾವು ವರದಿಯಾಗಿಲ್ಲ ಎನ್ನುವುದೇ ಸಮಾಧಾನಕರ ಸಂಗತಿಯಾಗಿದೆ.

    MORE
    GALLERIES

  • 58

    H3N2 Outbreak: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಎಚ್​3ಎನ್​2 ವೈರಸ್​, ಮಾರ್ಚ್​ 16 ರಿಂದ 26 ರವರೆಗೆ ಶಾಲೆಗಳಿಗೆ ರಜೆ ಘೋಷಣೆ!

    ಹೆಚ್ಚುತ್ತಿರುವ ಪ್ರಕರಣಗಳನ್ನು ನಿಯಂತ್ರಿಸಲು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಾಗರಿಕರು ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

    MORE
    GALLERIES

  • 68

    H3N2 Outbreak: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಎಚ್​3ಎನ್​2 ವೈರಸ್​, ಮಾರ್ಚ್​ 16 ರಿಂದ 26 ರವರೆಗೆ ಶಾಲೆಗಳಿಗೆ ರಜೆ ಘೋಷಣೆ!

    ತಮಿಳುನಾಡು, ದೆಹಲಿ, ಗುಜರಾತ್ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಚ್3ಎನ್2 ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕರ್ನಾಟಕ ಮತ್ತು ಹರಿಯಾಣದಲ್ಲಿ ಇದುವರೆಗೆ ಎಚ್3ಎನ್2  ವೈರಸ್​ನಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

    MORE
    GALLERIES

  • 78

    H3N2 Outbreak: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಎಚ್​3ಎನ್​2 ವೈರಸ್​, ಮಾರ್ಚ್​ 16 ರಿಂದ 26 ರವರೆಗೆ ಶಾಲೆಗಳಿಗೆ ರಜೆ ಘೋಷಣೆ!

    ಈ ವೈರಸ್​ ಸೋಂಕು ತಗುಲಿದವರಿಗೆ ಜ್ವರ, ಕೆಮ್ಮು ಮತ್ತು ಮೂಗು ಸೋರುವುದು ಮುಂತಾದ ಉಸಿರಾಟದ ಸಮಸ್ಯೆಗಳು ಹಾಗೆಯೇ ದೇಹದ ನೋವು, ವಾಕರಿಕೆ, ವಾಂತಿ, ಅಥವಾ ಅತಿಸಾರ ಸೇರಿದಂತೆ ಇತರ ರೋಗಲಕ್ಷಣಗಳು ಕಂಡುಬರುತ್ತವೆ.

    MORE
    GALLERIES

  • 88