Illicit Relationship: ತಾಯಿಯ ಪ್ರಿಯಕರನ ಮರ್ಮಾಂಗವನ್ನು ಕಟ್ ಮಾಡಿದ ಮಗಳು!
ಗುಂಟೂರು, ಆಂಧ್ರಪ್ರದೇಶ: ಅಕ್ರಮ ಸಂಬಂಧವೊಂದು ಕ್ರೈಂ ಸ್ಟೋರಿಯಾಗಿ ಬದಲಾಗಿದೆ. ತಾಯಿ ಪರ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಇದನ್ನು ಮಗಳು ವಿರೋಧಿಸಿದ್ದಾಳೆ. ಎಷ್ಟೇ ಹೇಳಿದರೂ ತಾಯಿ ಕೇಳದ ಕಾರಣ ಯಾರೂ ಊಹಿಸದ ನಿರ್ಧಾರಕ್ಕೆ ಮಗಳು ಬಂದು ಬಿಟ್ಟಿದ್ದಾಳೆ.
ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯ ತುಮ್ಮಲಪಾಲಂ ಮೂಲದ ರಾಮಚಂದ್ರ ರೆಡ್ಡಿ ಎರಡು ವರ್ಷಗಳ ಹಿಂದೆ ಗುಂಟೂರು ಜಿಲ್ಲೆ ತೆನಾಲಿಯಲ್ಲಿ ನೆಲೆಸಿದ್ದರು. ಈ ವೇಳೆ ಐತಾನಗರದ ಮಹಿಳೆಯ ಜತೆಗಿನ ಪರಿಚಯ ವಿವಾಹೇತರ ಸಂಬಂಧಕ್ಕೆ ಕಾರಣವಾಯಿತು. (ಸಾಂಕೇತಿಕ ಚಿತ್ರ)
2/ 7
ರಾಮಚಂದರೆಡ್ಡಿ ಅವರು ರೈಲ್ವೆ ನಿಲ್ದಾಣದ ಬಳಿಯ ಲಾಡ್ಜ್ನಲ್ಲಿ ಉಳಿದುಕೊಂಡು ಕೂಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿ ಸಂಬಂಧ ಮುಂದುವರಿಸಿದ್ದರು. ಆದರೆ, ಮಹಿಳೆಯ ಮಗಳಿಗೆ ಈ ಸಂಬಂಧ ಇಷ್ಟವಾಗಿರಲಿಲ್ಲ.
3/ 7
ಈ ವಿಚಾರವಾಗಿ ತಾಯಿಯೊಂದಿಗೆ ಆಗಾಗ ಜಗಳ ನಡೆಯುತ್ತಿತ್ತು. ಮಗಳಿಗೆ ಕೇರ್ ಮಾಡದ ತಾಯಿ, ರಾಮಚಂದ್ರರೆಡ್ಡಿ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ದಳು.
4/ 7
ಈ ನಡುವೆ ನಿನ್ನೆ ಸೋಮವಾರ ರಾತ್ರಿ ಮಹಿಳೆ ಹಾಗೂ ಆಕೆಯ ಗೆಳೆಯ ನಿದ್ದೆಗೆ ಜಾರಿದ್ದಾರೆ. ಅದೇ ವೇಳೆಗೆ ಮನೆಗೆ ಬಂದ ಮಹಿಳೆಯ ಮಗಳು ಬ್ಲೇಡ್ ನಿಂದ ರಾಮಚಂದ್ರ ರೆಡ್ಡಿಯ ಮರ್ಮಾಂಗವನ್ನು ಕತ್ತರಿಸಿದ್ದಾಳೆ. (ಪ್ರಾತಿನಿಧಿಕ ಚಿತ್ರ)
5/ 7
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ತೆನಾಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗುಂಟೂರು ಜಿಜಿಎಚ್ಗೆ ಕರೆದೊಯ್ಯಲಾಗಿದೆ. ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
6/ 7
ಇತ್ತೀಚೆಗೆ ತೆನಾಲಿ ಭಾಗದಲ್ಲಿ ಇದೇ ರೀತಿಯ ಅಪರಾಧಗಳು ಆಗಾಗ ಬೆಳಕಿಗೆ ಬರುತ್ತಿವೆ. ತೆನಾಲಿ ಮೂಲದ ರವಿಕಿರಣ್ ಎಂಬ ವ್ಯಕ್ತಿ ತನ್ನ ಪತ್ನಿಯ ಗೆಳತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈಕೆ ಈಗಾಗಲೇ ರೌಡಿಶೀಟರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.
7/ 7
ಆದರೆ ರವಿಕಿರಣ್ ತನ್ನ ರಹಸ್ಯ ತಿಳಿದರೆ ಕೊಂದುಬಿಡುತ್ತೇನೆ ಎಂಬ ಭಯದಿಂದ ಆಕೆಗೆ ಕಿರುಕುಳ ನೀಡುತ್ತಿದ್ದ. ಇಬ್ಬರೂ ಸೇರಿ ರವಿಕಿರಣ್ ನನ್ನು ಕೊಂದು ಶವವನ್ನು ನಾಲೆಗೆ ಎಸೆದಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ದೂರವಾಣಿ ಕರೆಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.