Ghosts: ಕೆಲಸಕ್ಕೆ ಅಡ್ಡಿ ಮಾಡುತ್ತಿವೆ ಎಂದು ಎರಡು ದೆವ್ವಗಳ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು
ಕೆಲಸ ಮಾಡುವ ವೇಳೆ ಮನೆಯ ಸಿಬ್ಬಂದಿಗಳು, ಮಕ್ಕಳು, ಇಲ್ಲ ಅಕ್ಕಪಕ್ಕದ ಮನೆಯವರು ತೊಂದರೆ ಮಾಡುವುದು ಸಹಜ. ಆದರೆ, ಈ ಮನುಷ್ಯನಿಗೆ ಕೆಲಸ ಮಾಡಲು ಬಿಡದೇ ಎರಡು ದೆವ್ವಗಳು ಸಿಕ್ಕಪಟ್ಟೆ ಕಿರಿಕಿರಿ ಮಾಡುತ್ತಿದೆ ಅಂತೆ. ಇದೇ ಕಾರಣಕ್ಕೆ ಈತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಭೂತಗಳ ಮೇಲೆ ದೂರು ನೀಡಿದ್ದಾನೆ.
ಅಚ್ಚರಿಯಾದರೂ ಹೌದು. ಗುಜರಾತ್ನ ಪಂಚಮಹಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
2/ 6
ಇಲ್ಲಿನ ಜಮ್ಭುಗೊದ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ಈ ದೂರು ದಾಖಲಿಸಿದ್ದಾನೆ. ಎರಡು ದೆವ್ವಗಳು ತಮ್ಮ ಹಿಂದೆ ಬಿದ್ದಿದ್ದು, ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆತ ಆರೋಪಿಸಿದ್ದಾನೆ.
3/ 6
ವ್ಯಕ್ತಿ ಸಂಪೂರ್ಣವಾಗಿ ಹೆದರಿ ಠಾಣೆಗೆ ಆಗಮಿಸಿದ್ದ, ಆತನ ಸ್ಥಿತಿ ಕಂಡ ಏನೋ ಗಂಭೀರತೆ ಇದೆ ಎಂದು ದೂರು ದಾಖಲಿಸಿಕೊಳ್ಳಲಾಗಿದೆ. ಈ ವೇಳೆ ಆತ ದೆವ್ವಗಳು ಕೊಲೆ ಬೆದರಿಕೆ ಹಾಕುತ್ತಿವೆ ಎಂದು ಆರೋಪಿಸಿದ್ದಾನೆ ಎಂದಿದ್ದಾನೆ.
4/ 6
ಗಾಬರಿಗೊಂಡ ವ್ಯಕ್ತಿಯನ್ನು ಸಮಾಧಾನ ಮಾಡಿ ಬಳಿಕ ಆತನ ಕುಟುಂಬಸ್ಥರಿಗೆ ಆತನನ್ನು ಒಪ್ಪಿಸಲಾಗಿದೆ. ಈ ವೇಳೆ ನಡೆದ ಘಟನೆಯನ್ನು ಪೊಲೀಸರು ವಿವರಿಸಿದ್ದಾರೆ.
5/ 6
ವ್ಯಕ್ತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, 10 ದಿನಗಳಿಂದ ಮಾತ್ರೆ ತೆಗೆದುಕೊಂಡಿರಲಿಲ್ಲ. ಇದೇ ಹಿನ್ನಲೆ ಈ ರೀತಿ ವರ್ತನೆ ತೋರಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
6/ 6
ವ್ಯಕ್ತಿಯ ಮಾನಸಿಕ ಸ್ಥಿತಿ ತಿಳಿದ ಬಳಿಕ ಆತನಿಗೆ ಉತ್ತಮ ಚಿಕಿತ್ಸೆ ಕೊಡಿಸುವಂತೆ ಪೊಲೀಸರು ಕುಟುಂಬಸ್ಥರಿಗೆ ತಿಳಿಸಿ ಬಂದಿದ್ದಾರೆ.