ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜೆಎ ಪರ್ಮಾರ್ ಅವರು ಜಿಗ್ನೇಶ್ ಮೇವಾನಿ ಮತ್ತು ಎನ್‌ಸಿಪಿ ಕಾರ್ಯಾಧ್ಯಕ್ಷೆ ರೇಷ್ಮಾ ಪಟೇಲ್ ಹಾಗೂ ಮೇವಾನಿಯ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಕೆಲವು ಸದಸ್ಯರು ಸೇರಿದಂತೆ ಒಂಬತ್ತು ಮಂದಿಯನ್ನು ಕಾನೂನುಬಾಹಿರ ಸಭೆಯ ಭಾಗವಹಿಸಿದ್ದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143 ರ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದ್ದು, ಎಲ್ಲಾ ಅಪರಾಧಿಗಳಿಗೆ ತಲಾ 1000 ದಂಡ ವಿಧಿಸಿದೆ