ಆಹಾರ ಮತ್ತು ಔಷಧ ನಿಯಂತ್ರಣ ಆಡಳಿತ (ಎಫ್‌ಡಿಸಿಎ) ಗುಜರಾತ್‌ನ ಉಂಝಾದಲ್ಲಿರುವ ಗೋಡೌನ್‌ನಿಂದ 30,260 ಕೆಜಿ ನಕಲಿ ಜೀರಿಗೆ ಮತ್ತು ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡಿದೆ. ಆರೋಪಿಗಳು ನಕಲಿ ಜೀರಿಗೆಯನ್ನು ನಿಜವಾದ ಜೀರಿಗೆ ಬೆರೆಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ. ಗ್ರಾಹಕರು ನಕಲಿ ವಸ್ತುಗಳ ಉಪಸ್ಥಿತಿಯನ್ನು ಪತ್ತೆಹಚ್ಚುವುದನ್ನು ತಡೆಯಲು ಇದನ್ನು ಮಿಕ್ಸ್ ಮಾಡಲಾಗುತ್ತಿತ್ತು ಎಂದು ಎಫ್‌ಡಿಸಿಎ ಆಯುಕ್ತರು ತಿಳಿಸಿದ್ದಾರೆ. ಉಂಝಾ ಮಸಾಲೆಗಳ ಅತಿದೊಡ್ಡ ಮಾರುಕಟ್ಟೆ ಮತ್ತು ರಫ್ತು ಕೇಂದ್ರವಾಗಿದೆ. ಉಂಝಾ ಜೀರಿಗೆ, ಫೆನ್ನೆಲ್ ಬೀಜಗಳು, ಇಸಾಬ್ಗೋಲ್ ಮತ್ತು ಸಾಸಿವೆಗಳಂತಹ ಮಸಾಲೆಗಳಿಗೆ ಅತಿದೊಡ್ಡ ಮಾರುಕಟ್ಟೆ ಮತ್ತು ರಫ್ತು ಕೇಂದ್ರವಾಗಿದೆ. ಎಫ್‌ಡಿಸಿಎ, ಗಾಂಧಿನಗರದ ಫ್ಲೈಯಿಂಗ್ ಸ್ಕ್ವಾಡ್, ಸ್ಥಳೀಯ ಎಫ್‌ಡಿಸಿಎ ಅಧಿಕಾರಿಗಳು ಮತ್ತು ಗುಜರಾತ್ ಪೊಲೀಸರು ದಾಳಿ ನಡೆಸಿದ್ದಾರೆ. ದಿಲೀಪ್ ಪಟೇಲ್ ಅವರಿಗೆ ಸೇರಿದ ಗಂಗಾಪುರ-ರಾಮ್‌ಪುರ ರಸ್ತೆಯಲ್ಲಿರುವ ಗೋಡೌನ್ ಮೇಲೆ ದಾಳಿ ನಡೆದಿದೆ.