ಈ ವಿಚಾರ ಹೇಳಿದ ಮೇಲೆ ಜಗಳ ಮತ್ತಷ್ಟು ಹೆಚ್ಚಾಗಿದೆ. ಎರಡೂ ಕುಟುಂಬದವರ ನಡುವೆ ಹೊಡೆದಾಟ ಶುರುವಾಗಿದೆ. ಇದನ್ನೆಲ್ಲಾ ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳಗಿನ ಜಾವ 4 ಗಂಟೆಲ್ಲಿ ಸ್ಥಳಕ್ಕೆ ಬಂದು ಎರಡೂ ಕಡೆಯ ಮುಖಂಡರ ಜೊತೆ ಮಾನಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕೊನೆಗೆ ಎರಡೂ ಕಡೆಯವರೂ ರಾಜೇಶ್ ಹಾಗೂ ಪುತುಲ್ ಕುಮಾರಿಗೆ ವಿವಾಹ ಮಾಡಲು ನಿರ್ಧರಿಸಿದ್ದಾರೆ. ಇದಕ್ಕೆ ವಧು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಕೊನೆ ಅದೇ ಮಂಟಪದಲ್ಲಿ ವಿವಾಹ ಮಾಡಿ ಕಳುಹಿಸಲಾಗಿದೆ.