Srinagar: ಭದ್ರತಾ ಪಡೆ ಮೇಲೆ ಗ್ರೆನೇಡ್ ದಾಳಿ ನಡೆಸಿದ ಭಯೋತ್ಪಾದಕರು; ಎರಡು ಅಂಗಡಿಗಳಿಗೆ ಹಾನಿ
ಶ್ರೀನಗರದ ನೌಹಟ್ಟಾ, ಖ್ವಾಜಾಬಜಾರ್‌ನಲ್ಲಿ (Khwaja Bazar) ಭದ್ರತಾ ಪಡೆಗಳ (Security Forces) ಜಂಟಿ ತಂಡದ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದಿದ್ದಾರೆ. ಪರಿಣಾಮ ಗ್ರೆನೇಡ್ ಸ್ಫೋಟದಿಂದ ಅಕ್ಕಪಕ್ಕದ ಅಂಗಡಿಗಳ ಗಾಜುಗಳು ಪುಡಿಪುಡಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಈ ಘಟನೆ ವರದಿ ಆಗುತ್ತಿದ್ದಂತೆ ಹೆಚ್ಚಿನ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು. ಉಗ್ರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮೂಲಗಳ ಪ್ರಕಾರ, ಮಾರುಕಟ್ಟೆಯಲ್ಲಿ ಜನಸಂದಣಿ ನಡುವೆಯೇ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಅಧಿಕ ಸಂಖ್ಯೆಯ ಜನರು ಇಲ್ಲಿ ಸೇರುತ್ತಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿಯೇ ಈ ದಾಳಿ ನಡೆದಿದೆ. ಭದ್ರತಾ ಪಡೆಗಳ ಮೇಲೆ ಎಸೆದ ಗ್ರೆನೇಡ್ ನಿಂದಾಗಿ ಮೂರು ಅಂಗಡಿಗಳ ಗಾಜುಗಳು ಒಡೆದಿವೆ.
2/ 7
ಏಕಾಏಕಿ ಸ್ಫೋಟ ಸಂಭವಿಸಿದ ಪರಿಣಾಮ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
3/ 7
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಒಂದು ದಿನ ಮೊದಲು, ಗುರುವಾರ ಸಂಜೆ ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ಎಸೆದಿದ್ದರು.
4/ 7
ಘಟನೆಯಲ್ಲಿ ಭದ್ರತಾ ಪಡೆಗಳ ವಾಹನಕ್ಕೆ ಸ್ವಲ್ಪ ಹಾನಿಯಾಗಿದೆ. ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
5/ 7
ಬಾರಾಮುಲ್ಲಾ ಜಿಲ್ಲೆಯ ಝಂಡಾಫರಾನ್ ಶಿರಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ. ಈ ವೇಳೆ ಚರಂಡಿಯಲ್ಲಿ ಭಯೋತ್ಪಾದಕರ ಅಡಗುತಾಣ ಪತ್ತೆಯಾಗಿದೆ.
6/ 7
ಅಲ್ಲಿಂದ 11 ಹ್ಯಾಂಡ್ ಗ್ರೆನೇಡ್ ಮತ್ತು 11 ಯುಬಿಜಿಎಲ್ ಗ್ರೆನೇಡ್ ಮತ್ತು ಒಂದು ಕಚ್ಚಾ ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ.
7/ 7
ಯಾವ ಭಯೋತ್ಪಾದಕ ತಂಡ ಗ್ರೆನೇಡ್‌ಗಳನ್ನು ಇಲ್ಲಿ ಬಚ್ಚಿಟ್ಟಿದ್ದಾರೆ ಎಂಬುದನ್ನು ಭದ್ರತಾ ಪಡೆಗಳು ಈಗ ಪತ್ತೆ ಹಚ್ಚುತ್ತಿವೆ..
First published:
17