15 ಎಕರೆಗಳಷ್ಟು ವಿಶಾಲವಾದ ವಿಸ್ತಾರದಲ್ಲಿ ಹರಡಿರುವ ಅಮೃತ್ ಉದ್ಯಾನವನ್ನು ರಾಷ್ಟ್ರಪತಿ ಭವನದ ಆತ್ಮ ಎಂದು ಆಗಾಗ ಹೇಳಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಮೊಘಲ್ ಉದ್ಯಾನವನಗಳು, ತಾಜ್ ಮಹಲ್ ಸುತ್ತಲಿನ ಉದ್ಯಾನವನಗಳಿಂದ ಸ್ಫೂರ್ತಿ ಪಡೆದು ಭಾರತ ಮತ್ತು ಪರ್ಷಿಯಾದ ಚಿಕಣಿ ವರ್ಣಚಿತ್ರಗಳನ್ನು ಹೊಂದಿದ್ದ ಅಮೃತ್ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿತ್ತು ಎಂದು ರಾಷ್ಟ್ರಪತಿ ಭವನದ ಅಧಿಕೃತ ವೆಬ್ಸೈಟ್ ತಿಳಿಸಲಾಗಿದೆ.
ರಾಷ್ಟ್ರಪತಿ ಭವನದಲ್ಲಿ 3 ಉದ್ಯಾನವನವಿದ್ದು, ಇದು ಮೊಘಲ್ ಮತ್ತು ಪರ್ಷಿಯನ್ ಉದ್ಯಾನವನಗಳಿಂದ ಪ್ರೇರಿತವಾಗಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಇದೇ ಹೆಸರಿನ ಉದ್ಯಾನವನ ಇದ್ದು, ಅದನ್ನು ಮೊಘಲ್ ಗಾರ್ಡನ್ಸ್ ಎಂದು ಅಲ್ಲಿನ ಸಾರ್ವಜನಿಕರು ಮತ್ತು ಅಧಿಕಾರಿಗಳು ಕರೆಯಲು ಆರಂಭಿಸಿದ್ದಾರೆ. ಆದರೆ ಇದಕ್ಕೆ ಅಧಿಕೃತವಾಗಿ "ಮೊಘಲ್ ಗಾರ್ಡನ್ಸ್" ಎಂದು ಹೆಸರಿಟ್ಟಿಲ್ಲ.