Teachers Fight: ಕಿಟಕಿ ವಿಚಾರಕ್ಕೆ ನೆಲದಲ್ಲಿ ಉರುಳಾಡಿ ಹೊಡೆದಾಡಿಕೊಂಡ ಶಿಕ್ಷಕಿಯರು! ವಿಡಿಯೋ ವೈರಲ್
ಪಾಟ್ನಾ: ಶಾಲೆಯ ಕಿಟಕಿಗಳನ್ನು ಮುಚ್ಚುವ ವಿಚಾರಕ್ಕೆ ಶಿಕ್ಷಕಿಯರ ಮಧ್ಯೆ ಆರಂಭವಾದ ಸಣ್ಣ ತಗಾದೆ ಚಪ್ಪಲಿಯಲ್ಲಿ ಹೊಡೆದಾಡಿಕೊಂಡು ಪರಸ್ಪರ ಥಳಿಸಿಕೊಳ್ಳುವ ಹಂತಕ್ಕೆ ತಲುಪಿದ ಘಟನೆ ಪಾಟ್ನಾದಲ್ಲಿ ನಡೆದಿದೆ.
ಬಿಹಾರದ ಪಾಟ್ನಾದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮೂವರು ಶಿಕ್ಷಕಿಯರು ನೆಲದಲ್ಲಿ ಉರುಳಾಡಿಕೊಂಡು ಹೊಡೆದಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2/ 7
ಮುಖ್ಯೋಪಾದ್ಯಾಯಿನಿ ಮತ್ತು ಇಬ್ಬರು ಶಿಕ್ಷಕಿಯರ ಮಧ್ಯೆ ಈ ಜಗಳ ಉಂಟಾಗಿದ್ದು, ಶಾಲೆಯ ಮಕ್ಕಳು ಕೂಡ ಕಿಟಕಿಯಲ್ಲಿ ನಿಂತುಕೊಂಡು ಪಾಠ ಮಾಡುವ ಗುರುಗಳ ಕಿತ್ತಾಟವನ್ನು ನೋಡುತ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ.
3/ 7
ತರಗತಿಯ ಕಿಟಕಿಗಳನ್ನು ಮುಚ್ಚಲು ಒಬ್ಬರು ಹೇಳಿದರೆ, ಇನ್ನೊಬ್ಬರು ಕಿಟಕಿ ಮುಚ್ಚಲು ನಿರಾಕರಿಸಿದ್ದಾರೆ. ಈ ವಿಚಾರದಲ್ಲಿ ಆರಂಭವಾದ ವಾಗ್ವಾದ ಮಾತಿಗೆ ಮಾತು ಬೆಳೆದು ಹೊಡೆದಾಡುವ ಹಂತಕ್ಕೆ ಹೋಗಿದೆ.
4/ 7
ಮೊದಲು ತರಗತಿಯ ಒಳಗೆ ಆರಂಭವಾದ ಜಗಳ ನಂತರ ಶಾಲೆಯ ಅಂಗಳದಲ್ಲಿ ನೆಲದಲ್ಲಿ ಉರುಳಾಡಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಲ್ಲೇ ಇದ್ದವರು ಯಾರೋ ಈ ಜಗಳದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ.
5/ 7
ಮುಖ್ಯೋಪಾಧ್ಯಾಯಿನಿ ಕಾಂತಿ ಕುಮಾರಿ ಮತ್ತು ಶಿಕ್ಷಕಿ ಅನಿತಾ ಕುಮಾರಿ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಈ ವೇಳೆ ಮುಖ್ಯ ಶಿಕ್ಷಕಿಯ ಮೇಲೆ ಮತ್ತೊಬ್ಬ ಶಿಕ್ಷಕಿ ಚಪ್ಪಲಿಯಿಂದ ಹೊಡೆದಿದ್ದಾಳೆ. ಆಗ ಮತ್ತೊಬ್ಬಳು ಕೂಡ ಬಂದು ಮುಖ್ಯಶಿಕ್ಷಕಿ ಮೇಲೆ ಕೋಲಿನಿಂದ ಬಾರಿಸಿದ್ದಾಳೆ.
6/ 7
ವೈರಲ್ ಆದ ಜಗಳದ ವಿಡಿಯೋವನ್ನು ಗಮನಿಸಿರುವ ಬ್ಲಾಕ್ ಶಿಕ್ಷಣಾಧಿಕಾರಿ ನರೇಶ್, ಇಬ್ಬರು ಶಿಕ್ಷಕರ ನಡುವೆ ವೈಯುಕ್ತಿಕ ಜಗಳ ನಡೆದಿದ್ದು, ಶಾಲೆಯಲ್ಲಿ ಘರ್ಷಣೆ ನಡೆದಿರುವುದರಿಂದ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
7/ 7
ಸದ್ಯ ಈ ವಿಡಿಯೋ ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡಿ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಕ್ಕಳಿಗೆ ಪಾಠ, ನೈತಿಕ ಶಿಕ್ಷಣ ಹೇಳಿಕೊಡಬೇಕಾದ ಶಿಕ್ಷಕರೇ ಈ ರೀತಿ ಕಿತ್ತಾಡಿಕೊಂಡರೆ ಮಕ್ಕಳ ಪರಿಸ್ಥಿತಿ ಏನು ಎಂದು ಪೋಷಕರು ಪ್ರಶ್ನಿಸಿದ್ದಾರೆ.
First published:
17