ದೇಶಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
2/ 6
ಸರ್ಕಾರವು ಚಾಲಕರ ಚಾಲನಾ ಪರವಾನಗಿ, ವಾಹನ ಪರವಾನಗಿ ಮತ್ತು ನೋಂದಣಿಯಂತಹ ದಾಖಲೆಗಳ ಮಾನ್ಯತೆಯನ್ನು ಜೂನ್ 30 ರವರೆಗೆ ವಿಸ್ತರಿಸಿದೆ.
3/ 6
ಫೆಬ್ರವರಿ 1 ರಂದು ಅವಧಿ ಪೂರ್ಣಗೊಂಡ ವಾಹನ ಚಾಲನಾ ಪರವಾನಗಿ ಮತ್ತು ಇತರೆ ವಾಹನ ದಾಖಲೆಗಳನ್ನು ಜೂ. 1 ರಿಂದ 30 ರೊಳಗೆ ನವೀಕರಣ ಮಾಡಿಕೊಳ್ಳಬಹುದು.
4/ 6
ಕೊರೋನಾ ವೈರಸ್ ಹರಡದಂತೆ ತಡೆಯಲು ಸರ್ಕಾರ 21 ದಿನಗಳ ದೇಶಾದ್ಯಂತ ಲಾಕ್ಡೌನ್ ಘೋಷಿಸಿದೆ. ಇಂತಹ ಸಮಯದಲ್ಲಿ ಜನರಿಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
5/ 6
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ನೊಟೀಸು ಕಳುಹಿಸಿದ್ದು, ಚಾಲನಾ ಪರವಾನಗಿ ಮತ್ತು ವಾಹನ ದಾಖಲೆಗಳನ್ನು ಜೂನ್ 30 ರವರೆಗೆ ಮಾನ್ಯವೆಂದು ಪರಿಗಣಿಸುವಂತೆ ಕೇಳಿಕೊಂಡಿದೆ.
6/ 6
ವಾಹನಗಳ ಫಿಟ್ನೆಸ್ ಪ್ರಮಾಣಪತ್ರಗಳು, ಹಾಗೂ ಎಲ್ಲಾ ರೀತಿಯ ಪರವಾನಗಿಗಳು, ಚಾಲನಾ ಪರವಾನಗಿಗಳು, ನೋಂದಣಿ ಅಥವಾ ಮೋಟಾರು ವಾಹನ ಕಾಯ್ದೆಯಡಿ ಇತರ ಸಂಬಂಧಿತ ದಾಖಲೆಗಳನ್ನು ಒಳಗೊಂಡಿರುವ ಮಾನ್ಯತೆಯನ್ನು ವಿಸ್ತರಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.