Good News: ಕೆಳವರ್ಗದ ಮಹಿಳೆಯರಿಗಷ್ಟೇ ಅಲ್ಲ, ಮೇಲ್ವರ್ಗದ ಮಹಿಳೆಯರಿಗೂ ಸಿಗುತ್ತೆ 15 ಸಾವಿರ ರೂಪಾಯಿ! ನಿಮ್ಮ ಹೆಸರು ಇದೆಯಾ ಚೆಕ್​ ಮಾಡಿಕೊಳ್ಳಿ!

ಬ್ರಾಹ್ಮಣ, ವೇಲಮ, ಆರ್ಯ ವೈಶ್ಯರೆಡ್ಡಿ, ಕಮ್ಮ, ಜಾತಿಗೆ ಸೇರಿದ 45 ರಿಂದ 60 ವರ್ಷದೊಳಗಿನ ಬಡ ಮಹಿಳೆಯರು ಈ ಯೋಜನೆಯ ಮೂಲಕ ಪ್ರಯೋಜನ ಪಡೆಯಲಿದ್ದಾರೆ.

  • Local18
  • |
  •   | Andhra Pradesh, India
First published:

  • 18

    Good News: ಕೆಳವರ್ಗದ ಮಹಿಳೆಯರಿಗಷ್ಟೇ ಅಲ್ಲ, ಮೇಲ್ವರ್ಗದ ಮಹಿಳೆಯರಿಗೂ ಸಿಗುತ್ತೆ 15 ಸಾವಿರ ರೂಪಾಯಿ! ನಿಮ್ಮ ಹೆಸರು ಇದೆಯಾ ಚೆಕ್​ ಮಾಡಿಕೊಳ್ಳಿ!

    ಆಂಧ್ರಪ್ರದೇಶದ ಮಹಿಳೆಯರಿಗೆ ಸಿಎಂ ಜಗನ್ಮೋಹನ್ ರೆಡ್ಡಿ ಶುಭ ಸುದ್ದಿ ನೀಡಿದ್ದಾರೆ. ಸಿಎಂ ಜಗನ್ಮೋಹನ್ ರೆಡ್ಡಿ ಅವರು ವೈಎಸ್‌ಆರ್ ಇಬಿಸಿ ನೇಸ್ತಂ ಯೋಜನೆಯ ಎರಡನೇ ಹಂತದ ಭಾಗವಾಗಿ ಈ ತಿಂಗಳ 12 ರಂದು ಅಂದರೆ ಬುಧವಾರ ಮಹಿಳಾ ಫಲಾನುಭವಿಗಳ ಖಾತೆಗೆ ತಲಾ 15,000 ಜಮಾ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಬಂದು ವಾಸಿಸುತ್ತಿರುವ ಆಂಧ್ರ ಪ್ರದೇಶದ ಮಹಿಳೆಯರು ತಮ್ಮ ಹೆಸರು ಇದಿಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.

    MORE
    GALLERIES

  • 28

    Good News: ಕೆಳವರ್ಗದ ಮಹಿಳೆಯರಿಗಷ್ಟೇ ಅಲ್ಲ, ಮೇಲ್ವರ್ಗದ ಮಹಿಳೆಯರಿಗೂ ಸಿಗುತ್ತೆ 15 ಸಾವಿರ ರೂಪಾಯಿ! ನಿಮ್ಮ ಹೆಸರು ಇದೆಯಾ ಚೆಕ್​ ಮಾಡಿಕೊಳ್ಳಿ!

    ಬ್ರಾಹ್ಮಣ, ವೇಲಮ, ಆರ್ಯ ವೈಶ್ಯರೆಡ್ಡಿ, ಕಮ್ಮ, ಜಾತಿಗೆ ಸೇರಿದ 45 ರಿಂದ 60 ವರ್ಷದೊಳಗಿನ ಬಡ ಮಹಿಳೆಯರು ಈ ಯೋಜನೆಯ ಮೂಲಕ ಪ್ರಯೋಜನ ಪಡೆಯಲಿದ್ದಾರೆ. ಈ ಕಾರ್ಯಕ್ರಮವು ಪ್ರಕಾಶಂ ಜಿಲ್ಲೆಯ ಮಾರ್ಕಪುರಂನಲ್ಲಿ ನಡೆಯಲಿದೆ. ಕಳೆದ ವರ್ಷ, ಜಗನ್ಮೋಹನ್ ರೆಡ್ಡಿ ಸರ್ಕಾರವು ಈ ಯೋಜನೆಯಡಿ ಸುಮಾರು 4 ಲಕ್ಷ ಮಹಿಳೆಯರ ಖಾತೆಗಳಿಗೆ  590 ಕೋಟಿಗಳನ್ನು ಜಮಾ ಮಾಡಿತ್ತು.

    MORE
    GALLERIES

  • 38

    Good News: ಕೆಳವರ್ಗದ ಮಹಿಳೆಯರಿಗಷ್ಟೇ ಅಲ್ಲ, ಮೇಲ್ವರ್ಗದ ಮಹಿಳೆಯರಿಗೂ ಸಿಗುತ್ತೆ 15 ಸಾವಿರ ರೂಪಾಯಿ! ನಿಮ್ಮ ಹೆಸರು ಇದೆಯಾ ಚೆಕ್​ ಮಾಡಿಕೊಳ್ಳಿ!

    ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಫಲಾನುಭವಿಗಳ ಸಂಖ್ಯೆ ಹೆಚ್ಚಿದೆ ಎಂದು ಜಗನ್ಮೋಹನ್ ರೆಡ್ಡಿ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಾರಿ ಹೆಚ್ಚಿದ ಫಲಾನುಭವಿಗಳಿಗೆ ಹಣ ಜಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ಎಷ್ಟೇ ಆರ್ಥಿಕ ತೊಂದರೆಗಳಿದ್ದರೂ ನಿಯಮಿತವಾಗಿ ನಗದು ಜಮಾ ಮಾಡುತ್ತಿದ್ದಾರೆ. ಇದರ ಭಾಗವಾಗಿ ಈ ಬುಧವಾರ ಸಿಎಂ ಬಟನ್ ಒತ್ತುವ ಮೂಲಕ ಮಹಿಳೆಯರ ಖಾತೆಗೆ ಹಣ ಮಾಡಲಿದ್ದಾರೆ.

    MORE
    GALLERIES

  • 48

    Good News: ಕೆಳವರ್ಗದ ಮಹಿಳೆಯರಿಗಷ್ಟೇ ಅಲ್ಲ, ಮೇಲ್ವರ್ಗದ ಮಹಿಳೆಯರಿಗೂ ಸಿಗುತ್ತೆ 15 ಸಾವಿರ ರೂಪಾಯಿ! ನಿಮ್ಮ ಹೆಸರು ಇದೆಯಾ ಚೆಕ್​ ಮಾಡಿಕೊಳ್ಳಿ!

    ಈಗಾಗಲೇ ಜಗನಣ್ಣ ಅಮ್ಮವೋಡಿ, ವೈ.ಎಸ್.ಆರ್ ಪಿಂಚಣಿ ಕಾನುಕ, ವೈ.ಎಸ್.ಆರ್ ಆಸರಾ, ವೈ.ಎಸ್.ಆರ್ ಶೂನ್ಯ ಬಡ್ಡಿ, ವೈ.ಎಸ್.ಆರ್ ಚೆಯುತ, ವೈ.ಎಸ್.ಆರ್ ಕಾಪು ನೇಸ್ತಂ, ಮಹಿಳೆಯರಿಗೆ ಉಚಿತ ವಸತಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಸರಕಾರ ಮತ್ತೊಂದು ಯೋಜನೆಯನ್ನು ಆರಂಭಿಸಲಿದೆ. ಎಪಿ ಸಿಎಂ ಜಗನ್ ಅವರು ಆರ್ಥಿಕವಾಗಿ ಹಿಂದುಳಿದ ಓಸಿ ಸಮುದಾಯಗಳಿಗಾಗಿ ವೈಎಸ್ಆರ್ ಇಸಿಬಿ ನೇಸ್ತಮ್​ ಯೋಜನೆಯ ಮೊದಲ ಹಂತವನ್ನು ಪ್ರಾರಂಭಿಸಲಿದ್ದಾರೆ.

    MORE
    GALLERIES

  • 58

    Good News: ಕೆಳವರ್ಗದ ಮಹಿಳೆಯರಿಗಷ್ಟೇ ಅಲ್ಲ, ಮೇಲ್ವರ್ಗದ ಮಹಿಳೆಯರಿಗೂ ಸಿಗುತ್ತೆ 15 ಸಾವಿರ ರೂಪಾಯಿ! ನಿಮ್ಮ ಹೆಸರು ಇದೆಯಾ ಚೆಕ್​ ಮಾಡಿಕೊಳ್ಳಿ!

    ಮೇಲ್ವರ್ಗದ ಮಹಿಳೆಯರ ಖಾತೆಗೆ ಪ್ರತಿ ವರ್ಷ 15 ಸಾವಿರ ರೂಪಾಯಿಯಂತೆ ನಗದು ಜಮಾ ಮಾಡಲಾಗುವುದು. ಎಲ್ಲಾ ಮೂರು ವರ್ಷಗಳಲ್ಲಿ 45 ಸಾವಿರ ಠೇವಣಿ ಮಾಡಲಾಗುತ್ತದೆ. ಎಬಿಸಿ ನೆಟ್‌ವರ್ಕ್ ಅಡಿಯಲ್ಲಿ ಯಾರು ಅರ್ಹರು ಎಂದು ಸರ್ಕಾರ ಈಗಾಗಲೇ ಘೋಷಿಸಿದೆ. ಕ್ಷತ್ರಿಯ, ರೆಡ್ಡಿ, ಕಮ್ಮ, ವೇಲಮ, ಬ್ರಾಹ್ಮಣ, ಆರ್ಯ ವೈಶ್ಯ ಮತ್ತಿತರ ಮಹಿಳೆಯರಿಗೆ ಸರಕಾರ ಆರ್ಥಿಕ ನೆರವು ನೀಡಲಿದೆ.

    MORE
    GALLERIES

  • 68

    Good News: ಕೆಳವರ್ಗದ ಮಹಿಳೆಯರಿಗಷ್ಟೇ ಅಲ್ಲ, ಮೇಲ್ವರ್ಗದ ಮಹಿಳೆಯರಿಗೂ ಸಿಗುತ್ತೆ 15 ಸಾವಿರ ರೂಪಾಯಿ! ನಿಮ್ಮ ಹೆಸರು ಇದೆಯಾ ಚೆಕ್​ ಮಾಡಿಕೊಳ್ಳಿ!

    ಅರ್ಹತೆ ಇಂತಿದೆ: ಮೇಲ್ವರ್ಗಕ್ಕೆ ಸೇರಿದ ಬಡ ಮಹಿಳೆಯರು ಈ ಯೋಜನೆಗೆ ಅರ್ಹರಾಗಿದ್ದಾರೆ. ಆದರೆ ಮಹಿಳೆಯರು 45 ವರ್ಷದಿಂದ 60 ವರ್ಷದೊಳಗಿನವರಾಗಿದ್ದರೆ ಮಾತ್ರ ಈ ಯೋಜನೆಗೆ ಅರ್ಹರು. ಇದರೊಂದಿಗೆ ವೈಎಸ್‌ಆರ್‌ ಚೆಯುತ, ಕಾಪು ನೇಸ್ತಂ ಯೋಜನೆ ಪಡೆಯುವ ಫಲಾನುಭವಿಗಳು ಹಾಗೂ ಎಸ್‌ಸಿ, ಎಸ್‌ಟಿ, ಬಿಸಿ ಅಲ್ಪಸಂಖ್ಯಾತ ಮಹಿಳೆಯರು ಈ ಯೋಜನೆಗೆ ಅರ್ಹರಾಗುವುದಿಲ್ಲ. ಇಬಿಸಿ ಮಹಿಳೆಯರು ಮಾತ್ರ ಪ್ರಯೋಜನ ಪಡೆಯಬಹುದು. ಆದರೆ ಈ ಫಲಾನುಭವಿಗಳು ತಮ್ಮ ಹೆಸರಿನಲ್ಲಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪುಸ್ತಕವನ್ನು ಹೊಂದಿರಬೇಕು. ಇಲ್ಲದಿದ್ದರೆ ಅವರನ್ನು ಅರ್ಹರೆಂದು ಪರಿಗಣಿಸಲಾಗುವುದಿಲ್ಲ.

    MORE
    GALLERIES

  • 78

    Good News: ಕೆಳವರ್ಗದ ಮಹಿಳೆಯರಿಗಷ್ಟೇ ಅಲ್ಲ, ಮೇಲ್ವರ್ಗದ ಮಹಿಳೆಯರಿಗೂ ಸಿಗುತ್ತೆ 15 ಸಾವಿರ ರೂಪಾಯಿ! ನಿಮ್ಮ ಹೆಸರು ಇದೆಯಾ ಚೆಕ್​ ಮಾಡಿಕೊಳ್ಳಿ!

    ನಿಬಂಧನೆಗಳು: ಕುಟುಂಬದ ವಾರ್ಷಿಕ ಆದಾಯವು ಹಳ್ಳಿಗಳಲ್ಲಿ ತಿಂಗಳಿಗೆ 10 ಸಾವಿರ ರೂಪಾಯಿ ಮತ್ತು ನಗರ ಪ್ರದೇಶಗಳಲ್ಲಿ ತಿಂಗಳಿಗೆ 12 ಸಾವಿರ ರೂಪಾಯಿ ಮೀರಬಾರದು. ಕುಟುಂಬದಲ್ಲಿ ಆದಾಯ ತೆರಿಗೆ ಪಾವತಿಸುವವರು ಇರಬಾರದು. ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರ ಅಥವಾ ಪಿಂಚಣಿದಾರರಾಗಿರಬಾರದು. ಕುಟುಂಬದ ಯಾರ ಹೆಸರಿನಲ್ಲಿಯೂ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರಬಾರದು. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪುಸ್ತಕ ಫಲಾನುಭವಿಯ ಹೆಸರಿನಲ್ಲಿರಬೇಕು.

    MORE
    GALLERIES

  • 88

    Good News: ಕೆಳವರ್ಗದ ಮಹಿಳೆಯರಿಗಷ್ಟೇ ಅಲ್ಲ, ಮೇಲ್ವರ್ಗದ ಮಹಿಳೆಯರಿಗೂ ಸಿಗುತ್ತೆ 15 ಸಾವಿರ ರೂಪಾಯಿ! ನಿಮ್ಮ ಹೆಸರು ಇದೆಯಾ ಚೆಕ್​ ಮಾಡಿಕೊಳ್ಳಿ!

    45 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 60 ವರ್ಷದೊಳಗಿನವರು ಮೇಲ್ಜಾತಿ ಮಹಿಳೆಯರಾಗಿರಬೇಕು. ಆದರೆ ಅರ್ಹತೆ ಇದ್ದೂ ಅರ್ಜಿ ಸಲ್ಲಿಸದಿದ್ದರೂ, ಅವರ ಹೆಸರು ಅರ್ಹತೆ ಪಟ್ಟಿಯಲ್ಲಿದ್ದರೆ ಸಾಕು ಅವರ ಖಾತೆಗೆ ನಗದು ಜಮೆಯಾಗುತ್ತದೆ. ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ  ಸಲ್ಲಿಸಬೇಕು. ಅರ್ಹ ಇಬಿಸಿ ಮಹಿಳಾ ಫಲಾನುಭವಿಗಳಿಗೆ 15,000 ರೂಪಾಯಿಗಳನ್ನು ನೀಡಲಾಗುತ್ತದೆ.

    MORE
    GALLERIES