ಇನ್ನು, ದೇವರ ದರ್ಶನಕ್ಕೆ ಆಗಮಿಸುವ ಭಕ್ತರು ಉಳಿದುಕೊಳ್ಳಲು ಟಿಟಿಡಿಗೆ ಸಂಬಂಧಿಸಿದ ಬಾಡಿಗೆ ರೂಮ್ಗಳು ತಿರುಪತಿ ಮತ್ತು ತಿರುಮಲದಲ್ಲಿ ಲಭ್ಯವಿದ್ದು, ಕಡಿಮೆ ದರಕ್ಕೆ ರೂಮ್ಗಳು ಭಕ್ತರಿಗೆ ಸಿಗುತ್ತೆ. ಉತ್ತಮ ಸೌಲಭ್ಯಗಳು ಹೊಂದಿರುವ ಕಾರಣ ಭಕ್ತರು ಕೂಡ ರೂಮ್ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಾರೆ. ರೂಮ್ಗಳನ್ನು ಆನ್ಲೈನ್ನಲ್ಲಿ ಬುಕ್ ಮಾಡಿಕೊಳ್ಳಲ ಅವಕಾಶವಿದ್ದು, 300 ರೂಪಾಯಿ ಟಿಕೆಟ್ ಬಿಡುಗಡೆ ಮಾಡಿದ ಮರುದಿನ ರೂಮ್ಗಳ ಬುಕಿಂಗ್ ಆರಂಭವಾಗುತ್ತದೆ.
ಮೇ ಮತ್ತು ಜೂನ್ ತಿಂಗಳಿಗೆ ಸಂಬಂಧಿಸಿದ ತಿರುಮಲ ವಸತಿ ಕೋಟಾವನ್ನು ಏಪ್ರಿಲ್ 26ರ ಬೆಳಗ್ಗೆ 10 ಗಂಟೆಗೆ ಆನ್ಲೈನ್ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದನ್ನು ನಾವು ತಿರುಪತಿ ಅಧಿಕೃತ ವೆಬ್ಸೈಟ್, ಆ್ಯಪ್ನಲ್ಲಿ ಬುಕ್ ಮಾಡಬಹುದಾಗಿದೆ. ಇವುಗಳಿಗೆ ಭಕ್ತರಿಂದ ಸದಾ ಡಿಮ್ಯಾಂಡ್ ಹೆಚ್ಚಿರುತ್ತದೆ. ಆದ್ದರಿಂದ ಬೇಗ ಬುಕ್ ಮಾಡಿಕೊಂದರೆ ವಸತಿ ರೂಮ್ಗಳು ಸುಲಭವಾಗಿ ಪಡೆದುಕೊಳ್ಳಬಹುದು.