ವಿಮಾನ ರದ್ದುಗೊಂಡಿರುವ ಬಗ್ಗೆ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದ್ದು, ‘ಮೇ 3, 4 ಮತ್ತು 5 ನೇ ರಂದು ನಿಗದಿಪಡಿಸಲಾದ ಗೋ ಫಸ್ಟ್ ಫ್ಲೈಟ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ. ವಿಮಾನ ರದ್ದತಿಯಿಂದ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ವಿಮಾನ ರದ್ದತಿಯಿಂದ ನಿಮ್ಮ ಪ್ರಯಾಣದ ಯೋಜನೆಗಳನ್ನು ಅಡ್ಡಿಪಡಿಸಿರಬಹುದು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನಿಮ್ಮ ತಾಳ್ಮೆಗಾಗಿ ನಾವು ಧನ್ಯವಾದಗಳು’ ಎಂದು ಸಂಸ್ಥೆ ಹೇಳಿದೆ.