Plane Crash: ನಿಯಂತ್ರಣ ಕಳೆದುಕೊಂಡು ಮನೆಯ ಮೇಲೆ ಉರುಳಿಬಿದ್ದ ಲಘು ವಿಮಾನ! ವಿಡಿಯೋ ವೈರಲ್‌!

ಜಾರ್ಖಂಡ್‌: ಖಾಸಗಿ ಲಘು ವಿಮಾನವೊಂದು ನಿಯಂತ್ರಣ ಕಳೆದುಕೊಂಡು ಮನೆಯೊಂದರ ಮೇಲೆ ಬಿದ್ದ ಆಘಾತಕಾರಿ ಘಟನೆ ಜಾರ್ಖಂಡ್‌ ರಾಜ್ಯದಲ್ಲಿ ನಡೆದಿದೆ.

First published:

  • 17

    Plane Crash: ನಿಯಂತ್ರಣ ಕಳೆದುಕೊಂಡು ಮನೆಯ ಮೇಲೆ ಉರುಳಿಬಿದ್ದ ಲಘು ವಿಮಾನ! ವಿಡಿಯೋ ವೈರಲ್‌!

    ಇಲ್ಲಿನ ಧನ್ಬಾದ್‌ ಪ್ರದೇಶದ ಬಿರ್ಸಾ ಮುಂಡಾ ಪಾರ್ಕ್‌ ಬಳಿ ಈ ದುರ್ಘಟನೆ ಸಂಭವಿಸಿದ್ದು, ಲಘು ವಿಮಾನ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿ ಇದ್ದ ಬಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    Plane Crash: ನಿಯಂತ್ರಣ ಕಳೆದುಕೊಂಡು ಮನೆಯ ಮೇಲೆ ಉರುಳಿಬಿದ್ದ ಲಘು ವಿಮಾನ! ವಿಡಿಯೋ ವೈರಲ್‌!

    ನಿಲೇಶ್ ಕುಮಾರ್ ಎಂಬವರ ಮನೆ ಮೇಲೆ ಈ ಖಾಸಗಿ ಲಘು ವಿಮಾನ ನಿಯಂತ್ರಣ ತಪ್ಪಿ ಬಿದ್ದಿದ್ದು, ಈ ಸಂದರ್ಭದಲ್ಲಿ ಅವರ ಇಬ್ಬರು ಮಕ್ಕಳು ಆಟವಾಡುತ್ತಿದ್ದರು. ಆದರೆ ಪವಾಡ ಸದೃಶವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    MORE
    GALLERIES

  • 37

    Plane Crash: ನಿಯಂತ್ರಣ ಕಳೆದುಕೊಂಡು ಮನೆಯ ಮೇಲೆ ಉರುಳಿಬಿದ್ದ ಲಘು ವಿಮಾನ! ವಿಡಿಯೋ ವೈರಲ್‌!

    ಬಾರ್ವಡ್ಡಾ ಏರ್‌ ಸ್ಟ್ರಿಪ್‌ನಿಂದ ಸಂಜೆ 4.50 ರ ಸುಮಾರಿಗೆ ವಿಮಾನ ಟೇಕಾಫ್ ಆದ ನಂತರ ಜಾಯ್‌ರೈಡ್ ಗ್ಲೈಡರ್ ವಿಮಾನ ಟೇಕಾಫ್ ಆದ ಕೂಡಲೇ ಕಟ್ಟಡದ ಮೇಲೆ ಬಿದ್ದಿದೆ.

    MORE
    GALLERIES

  • 47

    Plane Crash: ನಿಯಂತ್ರಣ ಕಳೆದುಕೊಂಡು ಮನೆಯ ಮೇಲೆ ಉರುಳಿಬಿದ್ದ ಲಘು ವಿಮಾನ! ವಿಡಿಯೋ ವೈರಲ್‌!

    ಇನ್ನು ನಿಲೇಶ್ ಕುಮಾರ್ ಎಂಬವರ ಮಕ್ಕಳು ಮಾತ್ರವಲ್ಲದೇ, ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಮತ್ತು ಬಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    MORE
    GALLERIES

  • 57

    Plane Crash: ನಿಯಂತ್ರಣ ಕಳೆದುಕೊಂಡು ಮನೆಯ ಮೇಲೆ ಉರುಳಿಬಿದ್ದ ಲಘು ವಿಮಾನ! ವಿಡಿಯೋ ವೈರಲ್‌!

    14 ವರ್ಷದ ಬಾಲಕ ಕುಶ್ ಸಿಂಗ್ ಎಂಬಾತ ಪಾಟ್ನಾದಿಂದ ಧನ್ಬಾದ್‌ನಲ್ಲಿ ಇರುವ ತನ್ನ ಚಿಕ್ಕಪ್ಪ ಪವನ್ ಸಿಂಗ್ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಖಾಸಗಿ ಏಜೆನ್ಸಿಯನ್ನು ಸಂಪರ್ಕಿಸಿ, ಲಘು ವಿಮಾನದಲ್ಲಿ ಜಾಲಿ ರೈಡ್ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    MORE
    GALLERIES

  • 67

    Plane Crash: ನಿಯಂತ್ರಣ ಕಳೆದುಕೊಂಡು ಮನೆಯ ಮೇಲೆ ಉರುಳಿಬಿದ್ದ ಲಘು ವಿಮಾನ! ವಿಡಿಯೋ ವೈರಲ್‌!

    ಸದ್ಯ ಗಾಯಗೊಂಡಿರುವ ಪೈಲಟ್ ಮತ್ತು ಕುಶ್ ಸಿಂಗ್‌ನನ್ನು ಜಾರ್ಖಂಡ್ ನ ಅಸರ್ಫಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    MORE
    GALLERIES

  • 77

    Plane Crash: ನಿಯಂತ್ರಣ ಕಳೆದುಕೊಂಡು ಮನೆಯ ಮೇಲೆ ಉರುಳಿಬಿದ್ದ ಲಘು ವಿಮಾನ! ವಿಡಿಯೋ ವೈರಲ್‌!

    ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಈ ಖಾಸಗಿ ಲಘು ವಿಮಾನ ನಿಯಂತ್ರಣ ತಪ್ಪಿ ಬೀಳಲು ಕಾರಣ ಏನು ಎಂಬುದರ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸುತ್ತಿದ್ದಾರೆ.

    MORE
    GALLERIES