Inspiration Story: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ, ಕುಟುಂಬಕ್ಕಾಗಿ ಟೊಟೊ ಓಡಿಸುವ ಬಾಲಕಿ

ಕೈಯಲ್ಲಿ ವಾಚ್, ಶಾಲಾ ಸಮವಸ್ತ್ರ ಧರಿಸಿ, ಉದ್ದನೆಯ ಜಡೆ ಹಾಕಿರುವ ಹುಡುಗಿ ಹಲವಾರು ದಿನಗಳಿಂದ ಟೊಟೊ ಓಡಿಸುತ್ತಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಅರೇ, ಇದೇನಿದು ಎಂದು ಹಲವಾರು ಜನ ಹುಬ್ಬೇರಿಸಿದ್ದರು. ಏನಿದು ಇಂಟ್ರೆಸ್ಟಿಂಗ್ ಸ್ಟೋರಿ ಅನ್ನೋದು ಇಲ್ಲಿದೆ.

  • Local18
  • |
  •   | Bangalore [Bangalore], India
First published:

  • 18

    Inspiration Story: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ, ಕುಟುಂಬಕ್ಕಾಗಿ ಟೊಟೊ ಓಡಿಸುವ ಬಾಲಕಿ

    ಡ್ರೈವರ್ ಸೀಟಿನಲ್ಲಿ ಈ ಹದಿಹರೆಯದ ಹುಡುಗಿ ಮತ್ತು ಪ್ರಯಾಣಿಕರ ಸೀಟಿನಲ್ಲಿ ಅವಳ ಹೆತ್ತವರನ್ನು ನೋಡಿ ಅನೇಕರು ಶಾಕ್ ಆಗಿದ್ದಾರೆ. ಆದರೆ ಇದಕ್ಕೂ ಒಂದು ಕಾರಣವಿದೆ

    MORE
    GALLERIES

  • 28

    Inspiration Story: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ, ಕುಟುಂಬಕ್ಕಾಗಿ ಟೊಟೊ ಓಡಿಸುವ ಬಾಲಕಿ

    ಮನೆಯಲ್ಲಿ ಕಡುಬಡತನ, ಅನಾರೋಗ್ಯದಿಂದ ಬಳಲುತ್ತಿರುವ ತಂದೆ ಇವೆಲ್ಲಾವೂ ಈ ಬಾಲಕಿಯನ್ನು ಮನೆಯ ಜವಾಬ್ದಾರಿ ಹೊರುವಂತೆ ಮಾಡಿತ್ತು. ಈಕೆ ಪಶ್ಚಿಮ ಬಂಗಾಲದ ಪೂರ್ವ ಮೇದಿನಿಪುರ ಜಿಲ್ಲೆಯ ಕೋಲಘಟ್ಟ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ದೇಬಶ್ರೀ ಖಾನರಾ.

    MORE
    GALLERIES

  • 38

    Inspiration Story: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ, ಕುಟುಂಬಕ್ಕಾಗಿ ಟೊಟೊ ಓಡಿಸುವ ಬಾಲಕಿ

    ಈಕೆ ವಿದ್ಯಾರ್ಥಿನಿ, ಆದರೆ ಮನೆಯ ಪರಿಸ್ಥಿಯ ಕಾರಣದಿಂದ ಶಿಕ್ಷಣದ ಜೊತೆಗೆ ಆಟೋ ರಿಕ್ಷಾ ಓಡಿಸುವ ಕೆಲಸ ಸಹ ಮಾಡುತ್ತಾಳೆ. ಮನೆಯ ಯಾವುದೇ ಸಮಸ್ಯೆ ಈಕೆ ಶಿಕ್ಷಣ ಮುಂದುವರೆಸುವುದನ್ನ ತಡೆಯಲು ಸಾಧ್ಯವಾಗಲಿಲ್ಲ ಎಂಬುದು ಬಹಳ ಮುಖ್ಯ.

    MORE
    GALLERIES

  • 48

    Inspiration Story: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ, ಕುಟುಂಬಕ್ಕಾಗಿ ಟೊಟೊ ಓಡಿಸುವ ಬಾಲಕಿ

    ಇನ್ನು ಈ ದೇಬಶ್ರೀ ತಂದೆ ಕೆಲವು ವರ್ಷಗಳ ಹಿಂದೆ ಓಡಿಸುವಾಗ ಅಪಘಾತದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದ ಅವರು ಟೊಟೊ ಓಡಿಸುವುದನ್ನ ನಿಲ್ಲಿಸುವ ಪರಿಸ್ಥಿತಿ ಬಂತು. ಆದರೆ ಜೀವನ ನಡೆಸಲು ಹಣ ಅನಿವಾರ್ಯ. ಈ ಕಾರಣದಿಂದ ದೇಬಶ್ರೀ ಸಂಜೆ ಶಾಲೆ ಮುಗಿಸಿ ಬಂದು ಟೊಟೊ ಓಡಿಸುತ್ತಾಳೆ.

    MORE
    GALLERIES

  • 58

    Inspiration Story: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ, ಕುಟುಂಬಕ್ಕಾಗಿ ಟೊಟೊ ಓಡಿಸುವ ಬಾಲಕಿ

    ಇನ್ನು ಸದ್ಯ ದೇಬಶ್ರೀ ದ್ವಿತೀಯ ಪಿಯುಸಿ ಓದುತ್ತಿದ್ದು, ಅದರ ಪರೀಕ್ಷೆ ಬರೆಯುವ ಸಲುವಾಗಿ ತಂದೆ-ತಾಯಿಯ ಜೊತೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ತಂದೆ ಕೂಡ ಈಗ ಸಣ್ಣ ಕೆಲಸವೊಂದನ್ನು ಮಾಡುತ್ತಿದ್ದು, ಆ ಕೆಲಸದ ಕಾರಣದಿಂದ ಪ್ರತಿದಿನ ಮಗಳ ಜೊತೆ ಪರೀಕ್ಷಾ ಕೇಂದ್ರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ತಾಯಿ ಮಗಳಿಗೆ ಪ್ರತಿದಿನ ಸಾಥ್ ನೀಡಿದ್ದಾರೆ.

    MORE
    GALLERIES

  • 68

    Inspiration Story: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ, ಕುಟುಂಬಕ್ಕಾಗಿ ಟೊಟೊ ಓಡಿಸುವ ಬಾಲಕಿ

    ಇನ್ನು ದೇಬಶ್ರೀ ಕೋಲಘಟ್ಟ ನಿಲ್ದಾಣದಿಂದ ಮಾರುಕಟ್ಟೆಗೆ ಟೊಟೊ ಓಡಿಸುತ್ತಿದ್ದು, ಸಂಬಂಧಿಕರು ಮತ್ತು ಶಿಕ್ಷಕರು ಕೂಡ ಆಕೆಯ ಶ್ರಮವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 78

    Inspiration Story: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ, ಕುಟುಂಬಕ್ಕಾಗಿ ಟೊಟೊ ಓಡಿಸುವ ಬಾಲಕಿ

    ಇನ್ನು ನಾನು ಹಗಲಿನಲ್ಲಿ ಟೊಟೊ ಓಡಿಸುತ್ತೇನೆ ಹಾಗೂ ರಾತ್ರಿ ವಿದ್ಯಾಭ್ಯಾಸ ಮಾಡುತ್ತೇನೆ ಎಂದು ದೇಬಶ್ರೀ ಹೇಳಿದ್ದು, ಈ ಚಿಕ್ಕ ವಯಸ್ಸಿನಲ್ಲಿ ದೇಬಶ್ರೀ ಅವರ ಕಠಿಣ ಪರಿಶ್ರಮ ಹಳ್ಳಿಯ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಆಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

    MORE
    GALLERIES

  • 88

    Inspiration Story: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ, ಕುಟುಂಬಕ್ಕಾಗಿ ಟೊಟೊ ಓಡಿಸುವ ಬಾಲಕಿ

    ಮುಂದೇ ಸಹ ದೇಬಶ್ರೀ ತನ್ನ ಶಿಕ್ಷಣದ ಜೊತೆಗೆ ಕುಟುಂಬದ ಜವಾಬ್ದಾರಿಯನ್ನೂ ಸಹ ನಿಭಾಯಿಸುವ ನಿರ್ಧಾರ ಮಾಡಿದ್ದು, ನಾನು ನನ್ನ ತಂದೆಯಿಂದ ಕಲಿತಿದ್ದೇನೆ, ನೀವು ಸಾಧನೆ ಮಾಡಲು ಬಯಸಿದರೆ ಎಲ್ಲವೂ ಸಾಧ್ಯ ಎಂದು ಅವರು ಹೇಳುತ್ತಾರೆ.

    MORE
    GALLERIES