ಈ ದೇವಾಲಯವು ಜಾರ್ಖಂಡ್ ರಾಜ್ಯದ ಹೆಮ್ಮೆ ಮತ್ತು ಪರಂಪರೆಯಾಗಿದೆ. ಸುಮಾರು 500 ಕೋಟಿ ವೆಚ್ಚದಲ್ಲಿ ಈ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯದಲ್ಲಿ ಪುರಾತನ ವಾಸ್ತುಕಲೆಯನ್ನು ಬಳಸಲಾಗುತ್ತಿದೆ ಎಂದು ದೇಗುಲ ನಿರ್ಮಾಣದ ಉಸ್ತುವಾರಿ ಸುರೇಂದ್ರ ಕುಮಾರ್ ತಿಳಿಸಿದ್ದಾರೆ. ಈ ದೇವಾಲಯವನ್ನು ಕಳೆದ 10 ವರ್ಷಗಳಿಂದ ನಿರ್ಮಿಸಲಾಗುತ್ತಿದೆ. ಆದರೆ ಇನ್ನೂ ಕೆಲಸ ಪೂರ್ಣಗೊಂಡಿಲ್ಲ. ಇನ್ನೂ ಹಲವು ವರ್ಷಗಳ ಕೆಲಸದ ನಂತರ ಈ ದೇಗುಲ ನಿರ್ಮಾಣ ಪೂರ್ಣಗೊಳ್ಳಬಹುದು ಎಂದು ಹೇಳಲಾಗಿದೆ.