ನವದೆಹಲಿ(ಜ.15): ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ದುರಂತಕ್ಕೆ ಕಾರಣವೇನು ಎಂಬುದು ತನಿಖಾ ವರದಿಯಿಂದ ಕೊನೆಗೂ ಬಹಿರಂಗಗೊಂಡಿದೆ. ಇಂದು ಈ ತನಿಖಾ ವರದಿ ರಕ್ಷಣಾ ಸಚಿವರ ಕೈ ಸೇರಲಿದೆ. ಘಟನೆ ನಡೆದಾಗಿನಿಂದಲೇ ಈ ಬಗ್ಗೆ ತನಿಖೆ ಆರಂಭಗೊಂಡಿತ್ತು. ಒಂದು ತಿಂಗಳ ಬಳಿಕ ತನಿಖೆ ಮುಗಿದಿದ್ದು, ಹೆಲಿಕಾಪ್ಟರ್ ಪತನಕ್ಕೆ ಕಾರಣವೇನು ಎಂಬುದು ಈಗ ಬಹಿರಂಗಗೊಂಡಿದೆ.