Private Schools: 100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ತಲಾ 1 ಲಕ್ಷ ದಂಡ! ಹೈಕೋರ್ಟ್ ಸೂಚನೆ ಪಾಲಿಸದ್ದಕ್ಕಾಗಿ ಕ್ರಮ

ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಆನ್​ಲೈನ್​ನಲ್ಲಿ ತರಗತಿಗಳು ನಡೆಯುತ್ತಿದ್ದದ್ದು ಗೊತ್ತೇ ಇದೆ. ಈ ಸಂದರ್ಭದಲ್ಲಿ ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳುತ್ತಿಲ್ಲವಾದ್ದರಿಂದ ಪೋಷಕರು ಶಾಲಾ ಶುಲ್ಕವನ್ನು ಕಡಿಮೆ ಮಾಡುವುದಕ್ಕೆ ಶಾಲೆಗಳಿಗೆ ಮನವಿ ಮಾಡಿದ್ದವು.

First published:

  • 17

    Private Schools: 100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ತಲಾ 1 ಲಕ್ಷ ದಂಡ! ಹೈಕೋರ್ಟ್ ಸೂಚನೆ ಪಾಲಿಸದ್ದಕ್ಕಾಗಿ ಕ್ರಮ

    ನೋಯ್ಡಾ-ಗ್ರೇಟರ್ ನೋಯ್ಡಾ ಪ್ರದೇಶದ 100 ಕ್ಕೂ ಹೆಚ್ಚು ಶಾಲೆಗಳ ಮೇಲೆ ಗೌತಮ್ ಬುದ್ಧ ನಗರ ಜಿಲ್ಲಾಡಳಿತವು ಕ್ರಮ ಕೈಗೊಂಡಿದ್ದು, ಹೈಕೋರ್ಟ್​ ಆದೇಶವನ್ನು ಪಾಲಿಸದಿದ್ದಕ್ಕೆ ತಲಾ ಒಂದು ಲಕ್ಷ ದಂಡ ವಿಧಿಸಿದೆ.

    MORE
    GALLERIES

  • 27

    Private Schools: 100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ತಲಾ 1 ಲಕ್ಷ ದಂಡ! ಹೈಕೋರ್ಟ್ ಸೂಚನೆ ಪಾಲಿಸದ್ದಕ್ಕಾಗಿ ಕ್ರಮ

    ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಆನ್​ಲೈನ್​ನಲ್ಲಿ ತರಗತಿಗಳು ನಡೆಯುತ್ತಿದ್ದದ್ದು ಗೊತ್ತೇ ಇದೆ. ಈ ಸಂದರ್ಭದಲ್ಲಿ ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳುತ್ತಿಲ್ಲವಾದ್ದರಿಂದ ಪೋಷಕರು ಶಾಲಾ ಶುಲ್ಕವನ್ನು ಕಡಿಮೆ ಮಾಡುವುದಕ್ಕೆ ಶಾಲೆಗಳಿಗೆ ಮನವಿ ಮಾಡಿದ್ದವು.

    MORE
    GALLERIES

  • 37

    Private Schools: 100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ತಲಾ 1 ಲಕ್ಷ ದಂಡ! ಹೈಕೋರ್ಟ್ ಸೂಚನೆ ಪಾಲಿಸದ್ದಕ್ಕಾಗಿ ಕ್ರಮ

    ನಂತರ ಈ ಬಗ್ಗೆ ಹಲವು ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದು, ಪರಿಸ್ಥಿತಿಯನ್ನು ಅರಿತು ಶುಲ್ಕವನ್ನು ಕಡಿತ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದವು. ಪೋಷಕರ ಮನವಿಯನ್ನು ಆಲಿಸಿದ ಅಲಹಾಬಾದ್​ ಹೈಕೋರ್ಟ್​ ಶೇ.15 ಶುಲ್ಕವನ್ನು ಪೋಷಕರಿಗೆ ಹಿಂತಿರುಗಿಸಬೇಕೆಂದು ಆದೇಶಿಸಿತ್ತು.

    MORE
    GALLERIES

  • 47

    Private Schools: 100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ತಲಾ 1 ಲಕ್ಷ ದಂಡ! ಹೈಕೋರ್ಟ್ ಸೂಚನೆ ಪಾಲಿಸದ್ದಕ್ಕಾಗಿ ಕ್ರಮ

    ಆದರೆ ಅಲಹಾಬಾದ್ ಹೈಕೋರ್ಟ್ ಆದೇಶದ ಹೊರತಾಗಿಯೂ, ಕೊರೊನಾ ಅವಧಿಯ ಶೇ. 15ರಷ್ಟು ಶುಲ್ಕವನ್ನು ಹಿಂತಿರುಗಿಸದ 100 ಕ್ಕೂ ಹೆಚ್ಚು ಶಾಲೆಗಳಿಗೆ ಗೌತಮ ಬುದ್ಧ ನಗರ ಜಿಲ್ಲಾಡಳಿತ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

    MORE
    GALLERIES

  • 57

    Private Schools: 100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ತಲಾ 1 ಲಕ್ಷ ದಂಡ! ಹೈಕೋರ್ಟ್ ಸೂಚನೆ ಪಾಲಿಸದ್ದಕ್ಕಾಗಿ ಕ್ರಮ

    ಶಾಲೆಗಳಿಗೆ ಶೇ. 15 ರಷ್ಟು ಕೊರೊನಾ ಕಾಲದ ಶುಲ್ಕವನ್ನು ಹಿಂದಿರುಗಿಸಲು 10 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​ ಮನೀಶ್ ಕುಮಾರ್ ವರ್ಮಾ ತಿಳಿಸಿದ್ದಾರೆ. ಶುಲ್ಕವನ್ನು ಪೋಷಕರಿಗೆ ಹಿಂತಿರುಗಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು. ನಿಗದಿತ ಸಮಯದಲ್ಲಿ ದಂಡ ಠೇವಣಿ ಮಾಡದಿದ್ದಲ್ಲಿ 5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    MORE
    GALLERIES

  • 67

    Private Schools: 100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ತಲಾ 1 ಲಕ್ಷ ದಂಡ! ಹೈಕೋರ್ಟ್ ಸೂಚನೆ ಪಾಲಿಸದ್ದಕ್ಕಾಗಿ ಕ್ರಮ

    ಈ ಖಾಸಗಿ ಶಾಲೆಗಳು ಹೈಕೋರ್ಟ್‌ನ ಆದೇಶವನ್ನು ನಿರ್ಲಕ್ಷಿಸುತ್ತಿವೆ. ಪದೇ ಪದೇ ಗಮನಕ್ಕೆ ತಂದರೂ ಸಹ ಶಾಲೆಗಳು ಶುಲ್ಕವನ್ನು ಪೋಷಕರಿಗೆ ಹಿಂತಿರುಗಿಸಿಲ್ಲ. ಹಾಗಾಗಿ ನೂರಕ್ಕೂ ಹೆಚ್ಚು ಶಾಲೆಗಳ ಮೇಲೆ ಕ್ರಮ ಕೈಗೊಂಡು ಒಂದು ಲಕ್ಷ ದಂಡ ವಿಧಿಸಲಾಗಿದೆ ಎಂದು ಮನೀಶ್ ಕುಮಾರ್ ತಿಳಿಸಿದ್ದಾರೆ.

    MORE
    GALLERIES

  • 77

    Private Schools: 100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ತಲಾ 1 ಲಕ್ಷ ದಂಡ! ಹೈಕೋರ್ಟ್ ಸೂಚನೆ ಪಾಲಿಸದ್ದಕ್ಕಾಗಿ ಕ್ರಮ

    ಒಂದು ವೇಳೆ ಆ ಸಂದರ್ಭದಲ್ಲಿ ವಿದ್ಯಾಭ್ಯಾಸ ಮಾಡಿದ್ದ ವಿದ್ಯಾರ್ಥಿಗಳು ಪಾಸ್ ಔಟ್ ಆಗಿದ್ದರೆ ಅಥವಾ ಶಾಲೆಯನ್ನು ತೊರೆದಿದ್ದರೆ, ಅವರ ಮೊತ್ತವನ್ನು ಲೆಕ್ಕಹಾಕಿ ವಿದ್ಯಾರ್ಥಿಗಳಿಗೆ ಹಿಂತಿರುಗಿಸಬೇಕು. ನೋಟಿಸ್​ ನೀಡಿರುವ ದಿನಾಂಕದಿಂದ ಎರಡು ತಿಂಗಳೊಳಗೆ ಸಂಪೂರ್ಣ ಕೆಲಸವನ್ನು ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

    MORE
    GALLERIES