ಬೇಸಿಗೆ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣುಗಳು ಯಥೇಚ್ಛವಾಗಿ ಕಾಣ ಸಿಗುತ್ತವೆ. ಅನೇಕ ಜನರು ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ಬಹುಪಾಲು ಜನರು ಹೆಚ್ಚಾಗಿ ಕೆಂಪು ಕಲ್ಲಂಗಡಿಗನ್ನ ನೋಡಿರುತ್ತಾರೆ, ಆದರೆ ಹಳದಿಯಲ್ಲೂ ಇದೆ ಎಂಬುದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಬಹುಶಃ ಅದರ ರುಚಿ ನೋಡುವುದಕ್ಕಾಗಿ ಖರೀಸುವವರು ಇದ್ದಾರೆ. ಇದೀಗ ಗುಜರಾತ್ನ ಜಾಮ್‌ನಗರದಲ್ಲಿ ಹಳದಿ ಕಲ್ಲಂಗಡಿಗಳು ರಾರಾಜಿಸುತ್ತಿವೆ.