ಸಂಜಯ್ ಗಾಂಧಿ to ನಟಿ ಸೌಂದರ್ಯ.. ವೈಮಾನಿಕ ಅಪಘಾತಗಳಲ್ಲಿ ಮೃತರಾದ ಖ್ಯಾತನಾಮರು ಇವರೆಲ್ಲಾ..
Famous Personalities Who died in Chopper Crashes: ತಮಿಳುನಾಡಿನ ಊಟಿ ಬಳಿ ಇಂದು ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಈವರೆಗೆ 4 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ವಿಮಾನ ದುರಂತದಲ್ಲಿ ಮೃತಪಟ್ಟ ಖ್ಯಾತನಾಮರು ಕಣ್ಮುಂದೆ ಸುಳಿಯುತ್ತಿದ್ದಾರೆ. ಭಾರತೀಯ ರಾಜಕಾರಣಿಗಳಾದ ವೈ ಎಸ್ ರಾಜಶೇಖರ ರೆಡ್ಡಿ, ಸಂಜಯ್ ಗಾಂಧಿ, ಮಾಧವರಾವ್ ಸಿಂಧಿಯಾ, ಜಿ ಎಂ ಸಿ ಬಾಲಯೋಗಿ, ಎಸ್ ಮೋಹನ್ ಕುಮಾರಮಂಗಲಂ, ಓ ಪಿ ಜಿಂದಾಲ್, ಸುರೇಂದ್ರ ಸಿಂಗ್, ಡೇರಾ ನಟುಂಗ್ ಸೇರಿದಂತೆ ಹಲವರು ವೈಮಾನಿಕ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಕಳೆದ ಹಲವು ದಶಕಗಳಲ್ಲಿ ದೇಶದಲ್ಲಿ ಹೆಲಿಕಾಪ್ಟರ್ ಮತ್ತು ವಿಮಾನ ಅಪಘಾತಗಳಲ್ಲಿ ಸಾವನ್ನಪ್ಪಿದ ಖ್ಯಾತನಾಮರ ದುರಂತ ಕಥೆ ಇಲ್ಲಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿಯಿಂದ ಹಿಡಿದು ಕನ್ನಡದ ನಟಿ ಸೌಂದರ್ಯವರೆಗೆ ಹಲವು ರಾಜಕಾರಣಿಗಳು, ಸೆಲೆಬ್ರೆಟಿಗಳು ವಿಮಾನ-ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದ್ದಾರೆ. ಯಾರೆಲ್ಲಾ ಆಗಸದಲ್ಲಿ ಉಸಿರು ಚೆಲ್ಲಿದ್ದಾರೆ ಅಂತ ನೋಡೋದಾದರೆ.
2/ 9
ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಮೊದಲ ಭಾರತೀಯ ರಾಜಕೀಯ ನಾಯಕರಲ್ಲಿ ಒಬ್ಬರು ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್. 1945 ರ ಆಗಸ್ಟ್ 18 ರಂದು ಇಂದಿನ ತೈವಾನ್ನಲ್ಲಿ ವಿಮಾನ ದುರಂತ ಸಂಭವಿಸಿತ್ತು.
3/ 9
ಜೂನ್ 23, 1980 ರಂದು ದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿದ್ದ ಗ್ಲೈಡರ್ ಅಪಘಾತಕ್ಕೀಡಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಕಿರಿಯ ಪುತ್ರ ಸಂಜಯ್ ಗಾಂಧಿ ಸಾವನ್ನಪ್ಪಿದರು.
4/ 9
ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾಕ್ಕೀಡಾಗಿತ್ತು. ಸೆಪ್ಟೆಂಬರ್ 3, 2009 ರಂದು ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಕಾಣೆಯಾದ 27 ಗಂಟೆಗಳ ನಂತರ ಅವರ ದೇಹವನ್ನು ಪತ್ತೆಹಚ್ಚಲಾಯಿತು.
5/ 9
ಇನ್ನು ನಟಿ ಸೌಂದರ್ಯ ಕರ್ನಾಟಕದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಬಳಿಕ ಹೈದ್ರಾಬಾದ್ ತೆರಳುವಾಗ 2004ರ ಏ.18ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. ಈ ದುರಂತದಲ್ಲಿ ಸೌಂದರ್ಯ ಹಾಗೂ ಅವರ ಸೋದರ ಸೇರಿದಂತೆ ನಾಲ್ವರು ಮೃತಪಟ್ಟರು.
6/ 9
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಂಪುಟ ಸಚಿವ ಮಾಧವರಾವ್ ಸಿಂಧಿಯಾ ಸೆಪ್ಟೆಂಬರ್ 30, 2001 ರಂದು ಉತ್ತರ ಪ್ರದೇಶದ ಕಾನ್ಪುರಕ್ಕೆ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಯಾಣಿಸುತ್ತಿದ್ದಾಗ ಸೆಸ್ನಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು.
7/ 9
ಲೋಕಸಭೆ ಸ್ಪೀಕರ್ ಮತ್ತು ತೆಲುಗು ದೇಶಂ ನಾಯಕ ಜಿಎಂಸಿ ಬಾಲಯೋಗಿ ಆಂಧ್ರಪ್ರದೇಶದಲ್ಲಿ ಮಾರ್ಚ್ 3, 2002 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.
8/ 9
ಕಾಂಗ್ರೆಸ್ನ ಮೋಹನ್ ಕುಮಾರಮಂಗಲಂ ಅವರು 1973 ರಲ್ಲಿ ನವದೆಹಲಿ ಬಳಿ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಘಾತದಲ್ಲಿ ನಿಧನರಾದರು.
9/ 9
ಹರಿಯಾಣದ ಆಗಿನ ವಿದ್ಯುತ್ ಮಂತ್ರಿ ಮತ್ತು ಹೆಸರಾಂತ ಕೈಗಾರಿಕೋದ್ಯಮಿ ಓ ಪಿ ಜಿಂದಾಲ್ ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಮಾರ್ಚ್ 31, 2005 ರಂದು ಉತ್ತರ ಪ್ರದೇಶದ ಸಹರಾನ್ಪುರ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು.