ಪ್ರತಿಯೊಂದು ದೇಶವು ಧ್ವಜವನ್ನು ಹೊಂದಿದೆ. ಮಾತ್ರವಲ್ಲದೆ ಆಯಾಯ ದೇಶದ ಧ್ವಜಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಇಂತಹ ಪರಿಸ್ಥಿತಿಯಲ್ಲಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಫ್ರಾನ್ಸ್ ಧ್ವಜದ ಬಣ್ಣವನ್ನು ಸುಲಭವಾಗಿ ಬದಲಾಯಿಸಿದ್ದಾರೆ. ಮ್ಯಾಕ್ರನ್ ಅಧಿಕೃತ ಫ್ರೆಂಚ್ ಧ್ವಜದಲ್ಲಿ ಹಿಂದಿನ ಪ್ರಕಾಶಮಾನವಾದ ಬಣ್ಣವನ್ನು ಬದಲಿಸಿ ಗಾಢ ನೀಲಿ ಬಣ್ಣವನ್ನು ಬಳಸಲು ಮುಂದಾಗಿದ್ದಾರೆ.
1792 ರಲ್ಲಿ ಮೊದಲ ಫ್ರೆಂಚ್ ಗಣರಾಜ್ಯವನ್ನು ಮತ್ತು 1790 ರ ದಶಕದಲ್ಲಿ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಈ ಧ್ವಜವನ್ನು ಮೊದಲು ಬಳಸಲಾಯಿತು. ಜಾಕ್ವೆಸ್-ಲೂಯಿಸ್ ಡೇವಿಡ್ ವಿನ್ಯಾಸಗೊಳಿಸಿದ ಈ ತ್ರಿವರ್ಣ ಧ್ವಜವನ್ನು ಅಧಿಕೃತವಾಗಿ 1794 ರಲ್ಲಿ ರಾಷ್ಟ್ರೀಯ ಧ್ವಜವಾಗಿ ಅಳವಡಿಸಲಾಯಿತು. ಈ ಧ್ವಜವನ್ನು 1976 ರಲ್ಲಿ ಅಧ್ಯಕ್ಷ ವ್ಯಾಲೆರಿ ಗಿಸ್ಕಾರ್ಡ್ ಡಿ ಎಸ್ಟೇಂಗ್ ಅವರು ದೂರದರ್ಶನದಲ್ಲಿ ಮತ್ತು ಭಾಷಣಗಳ ಮೂಲಕ ಅದರ ವಿಶೇಷತೆ ಸಾರುತ್ತಾ ದೇಶದ ಸಂಕೇತವೆಂದು ಹೇಳಿದರು.
ನೀಲಿ ಮತ್ತು ಕೆಂಪು ಪ್ಯಾರಿಸ್ನ ಸಾಂಪ್ರದಾಯಿಕ ಬಣ್ಣಗಳು ಮತ್ತು ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಮಿಲಿಷಿಯಾ ಬಳಸಿದವು. ದೇಶದ ರಚನೆಯ ನಂತರ, ಲಾಂಛನವನ್ನು ರಾಷ್ಟ್ರೀಕರಣಗೊಳಿಸಲು ಬಿಳಿ ಬಣ್ಣವನ್ನು ಸೇರಿಸಲಾಯಿತು. ಇದನ್ನು ಕ್ರಾಂತಿಕಾರಿ ಧ್ಯೇಯವಾಕ್ಯದ ಮೂರು ಅಂಶಗಳನ್ನು ಪ್ರತಿನಿಧಿಸುವ ಬಣ್ಣಗಳು ಎಂದು ಹೇಳಲಾಗುತ್ತದೆ. ಫ್ರಾನ್ಸ್ ಧ್ವಜದಲ್ಲಿರುವ ಲಿಬರ್ಟೆ (ಸ್ವಾತಂತ್ರ್ಯ: ನೀಲಿ), ಎಗ್ಲಿಯೆಟ್ (ಹೋಲಿಕೆ: ಬಿಳಿ), Fraternity (ಭ್ರಾತೃತ್ವ: ಕೆಂಪು) ಎಂಬ ಅರ್ಥವನ್ನು ನೀಡುತ್ತದೆ.