ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಕಾಂಡೋಮ್ ಬಳಕೆ ಮಾಡಲು ವೈದ್ಯರು ಸಲಹೆ ನೀಡುತ್ತಾರೆ. ಕಾಂಡೋಮ್ ಬಳಕೆ ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಗರ್ಭಧಾರಣೆಯನ್ನ ತಡೆಯಬಹುದು. ಈ ಸಂಬಂಧ ಜಾಗೃತಿ ಮೂಡಿಸಿದರೂ ಜನರು ಕಾಂಡೋಮ್ ಬಳಕೆಗೆ ಹಿಂದೇಟು ಹಾಕುತ್ತಾರೆ. ಇದೀಗ ಈ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದೆ. (ಸಾಂದರ್ಭಿಕ ಚಿತ್ರ)
2/ 7
25 ವರ್ಷದೊಳಗಿನ ಯುವಕರಿಗೆ ಉಚಿತ ಕಾಂಡೋಮ್ ನೀಡಲು ಫ್ರೆಂಚ್ ಸರ್ಕಾರ ಮುಂದಾಗಿದೆ. ಅನಗತ್ಯ ಗರ್ಭಧಾರಣೆಯನ್ನು ನಿಯಂತ್ರಿಸೋದು ಸರ್ಕಾರದ ಉದ್ದೇಶವಾಗಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇದನ್ನು ಗರ್ಭನಿರೋಧಕದ ಕಡೆಗೆ ಒಂದು ಸಣ್ಣ ಕ್ರಾಂತಿ ಎಂದು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಧ್ಯಕ್ಷ ಮ್ಯಾಕ್ರನ್, ತಮ್ಮ ಸರ್ಕಾರವು 18-25 ವರ್ಷ ವಯಸ್ಸಿನ ಯುವಕರಿಗೆ ವೈದ್ಯಕೀಯ ಯೋಜನೆಯಡಿಯಲ್ಲಿ ಉಚಿತ ಕಾಂಡೋಮ್ಗಳನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ಈ ವರ್ಷದ ಆರಂಭದಲ್ಲಿ ಮ್ಯಾಕ್ರನ್ ಸರ್ಕಾರ 25 ವರ್ಷದೊಳಗಿನ ಯುವತಿಯರಿಗೆ ಉಚಿತ ಕಾಂಡೋಮ್ ಯೋಜನೆಗೆ ಚಾಲನೆ ನೀಡಿತ್ತು. ಇದೀಗ ಎಲ್ಲಾ ಯುವಕರಿಗೆ ಉಚಿತ ಕಾಂಡೋಮ್ಗಳು ಸಿಗಲಿವೆ ಎಂದು ಮ್ಯಾಕ್ರನ್ ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)
5/ 7
ಮಾಧ್ಯಮ ವರದಿಗಳ ಪ್ರಕಾರ, 2020 ಮತ್ತು 2021 ರ ನಡುವೆ ಫ್ರಾನ್ಸ್ನಲ್ಲಿ ಲೈಂಗಿಕವಾಗಿ ಹರಡುವ ರೋಗಗಳ (STD) ಸಂಭವ ಸುಮಾರು 30% ರಷ್ಟು ಹೆಚ್ಚಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ. (ಸಾಂದರ್ಭಿಕ ಚಿತ್ರ
6/ 7
ಫ್ರಾನ್ಸ್ನಲ್ಲಿ, ಏಡ್ಸ್ ಮತ್ತು ಇತರ ಲೈಂಗಿಕವಾಗಿ ಹರಡುವ ಸೋಂಕುಗಳ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಈಗಾಗಲೇ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯಿಂದ ಕಾಂಡೋಮ್ಗಳನ್ನು ಸರಬರಾಜು ಮಾಡಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
7/ 7
ಕೆಲವೇ ದಿನಗಳಲ್ಲಿ ಕಾಂಡೋಮ್ ಉಚಿತ ವಿತರಣೆ ನಡೆಯಲಿದೆ. ಇದರ ಜೊತೆಗೆ ಯುವ ಪೀಳಿಗೆಗೆ ಲೈಂಗಿಕ ಶಿಕ್ಷಣ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. (ಸಾಂದರ್ಭಿಕ ಚಿತ್ರ)