2023ರಿಂದ ಯುವಜನರಿಗೆ ಕಾಂಡೋಮ್ಗಳು ಉಚಿತವಾಗಿ ಸಿಗಲಿದೆ! ಹೌದು, ಮುಂದಿನ ವರ್ಷದಿಂದಲೇ ಈ ವಿಶೇಷ ಯೋಜನೆ ಆರಂಭವಾಗಲಿದೆ. (ಸಾಂದರ್ಭಿಕ ಚಿತ್ರ)
2/ 8
ಆದರೆ ಇದು ಭಾರತದಲ್ಲಲ್ಲ, ಫ್ರಾನ್ಸ್ ದೇಶದಲ್ಲಿ 2023ರಿಂದ ಯುವಜನರಿಗೆ ಕಾಂಡೋಮ್ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ. (ಸಾಂದರ್ಭಿಕ ಚಿತ್ರ)
3/ 8
ಮುಂದಿನ ವರ್ಷದಿಂದ ಫ್ರಾನ್ಸ್ನ ಯುವಜನರು ಕಾಂಡೋಮ್ಗಳನ್ನು ಉಚಿತವಾಗಿ ಪಡೆಯಬಹುದು ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
4/ 8
ಲೈಂಗಿಕವಾಗಿ ಹರಡುವ ರೋಗಗಳನ್ನು (STD) ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಘೋಷಣೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
5/ 8
ಸಾರ್ವಜನಿಕ ಔಷಧ ಅಂಗಡಿಗಳಲ್ಲಿ 2023ರ ಜನವರಿ 1 ರಿಂದ 18 ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್ಗಳನ್ನು ಉಚಿತವಾಗಿ ನೀಡಲಾಗುವುದುಎಂದು ಮ್ಯಾಕ್ರನ್ ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಫ್ರಾನ್ಸ್ನಲ್ಲಿ 2020 ಮತ್ತು 2021 ರಲ್ಲಿ ಲೈಂಗಿಕವಾಗಿ ಹರಡುವ ರೋಗಗಳ ಪ್ರಮಾಣವು ಸುಮಾರು 30% ಹೆಚ್ಚಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ. (ಸಾಂದರ್ಭಿಕ ಚಿತ್ರ)
7/ 8
ಯುವ ಜನರಿಗೆ ಉಚಿತವಾಗಿ ಕಾಂಡೋಮ್ ವಿತರಿಸುವ ಮೂಲಕ ಲೈಂಗಿಕ ರೋಗಗಳನ್ನು ತಡೆಯುವ ಮಹತ್ವದ ಉದ್ದೇಶ ಈ ಯೋಜನೆಯದ್ದಾಗಿದೆ.
8/ 8
ಆದರೆ ಈ ಯೋಜನೆಗೆ ಫ್ರಾನ್ಸ್ನಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತೆ ಎಂದು ಕಾದು ನೋಡಬೇಕಿದೆ.