ಆದರೆ ಗುಜರಾತಿನ ಭುಜ್ಗೆ ಸೇರಿದ ಒಂದು ಜೈನ ಕುಟುಂಬ ಸಾಕಷ್ಟು ಸಿರಿ ಸಂಪತ್ತನ್ನು ಹೊಂದಿದೆ. ಹಲವು ಮನೆಗಳು ಸೇರಿದಂತೆ ಒಳ್ಳೆಯ ವ್ಯಾಪಾರ ನಡೆಸುತ್ತಿದ್ದಾರೆ. ಸಾಕಷ್ಟು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಕೂಡ ಸಂಪಾದಿಸಿದೆ. ಇಡೀ ಕುಟುಂಬ ಸಂತೋಷವಾಗಿದೆ. ಆದರೆ ಇದ್ಯಾವುದೂ ಅವರಿಗೆ ತೃಪ್ತಿ ನೀಡುತ್ತಿಲ್ಲವಂತೆ. ಆದ್ದರಿಂದಲೇ ತಮ್ಮ ಆಸ್ತಿ-ಪಾಸ್ತಿಯನ್ನೆಲ್ಲಾ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ.
ಪೂರ್ವಿಬೆನ್ ಅವರ ಸಹೋದರನ ಮಗ ಕೃಷ್ಣಕುಮಾರ್ ಕೂಡ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ನಾಲ್ವರೂ ಶೀಘ್ರದಲ್ಲೇ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಸನ್ಯಾಸತ್ವ ಬಯಸುವ ವ್ಯಕ್ತಿಗಳು ತಮ್ಮ ಎಲ್ಲಾ ಆಸ್ತಿಯನ್ನು ತ್ಯಜಿಸಬೇಕು. ಎಲ್ಲವನ್ನೂ ದಾನ ಮಾಡಬೇಕು. ಇವರೆಲ್ಲರೂ ಔಪಚಾರಿಕವಾಗಿ ಶ್ರೀ ಕೋಟಿ ಸ್ಥಾನವಾಸಿ ಜೈನ ಸಂಘದ ಆಶ್ರಯದಲ್ಲಿ ಭಗವತಿ ದೀಕ್ಷೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.