ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಏಪ್ರಿಲ್‌ನಿಂದ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿವೆ. ಒಂದು ತಿಂಗಳಲ್ಲಿ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈ ಹೊಸ ರೈಲುಗಳಿಗೆ ಸಂಚಾರಕ್ಕೆ ಇಲಾಖೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ನಾಲ್ಕು ರೈಲುಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಾಚರಣೆಯ ನಂತರ, ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಒಟ್ಟು ಸಂಖ್ಯೆ 14ಕ್ಕೆ ಏರಲಿದೆ. (ಸಂಗ್ರಹ ಚಿತ್ರ)
ಭಾರತೀಯ ರೈಲ್ವೇ ಪ್ರಕಾರ, ನಾಲ್ಕು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಹಳಿಗೆ ಇಳಿಯಲು ಸಿದ್ಧವಾಗಿವೆ. ಈ ರೈಲುಗಳು ದೇಶದ ವಿವಿಧ ಸ್ಥಳಗಳಿಂದ ಸಂಚರಿಸಲಿವೆ. ಇದರಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ ಎರಡು ರೈಲುಗಳು ಸಂಚರಿಸಲಿವೆ. ಆ ಮಾರ್ಗಗಳು ಮತ್ತು ವೇಳಾಪಟ್ಟಿಯನ್ನು ಸಹ ನಿಗದಿಪಡಿಸಲಾಗಿದೆ. ಏತನ್ಮಧ್ಯೆ, ಉಳಿದ ಎರಡೂ ಮಾರ್ಗಗಳನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ತಿಳಿಸಿದೆ.
ರಾಣಿ ಕಮಲಾಪತಿ ನಿಲ್ದಾಣದಿಂದ 5.55 AM ಹೊರಟು ಆಗ್ರಾ ನಿಲ್ದಾಣಕ್ಕೆ 11.40 AMಗೆ ಬಂದು ಸೇರಲಿದೆ. ಮತ್ತೆ ಬೆಳಗ್ಗೆ 11.45ಕ್ಕೆ ನಿರ್ಗಮಿಸುತ್ತದೆ. ಮಧ್ಯಾಹ್ನ 1.45 ಕ್ಕೆ ನವದೆಹಲಿ ನಿಲ್ದಾಣ ತಲುಪುತ್ತದೆ. ನವದೆಹಲಿ ನಿಲ್ದಾಣದಿಂದ ಮಧ್ಯಾಹ್ನ 2.45ಕ್ಕೆ ಹೊರಡಲಿದೆ. ಆಗ್ರಾ ನಿಲ್ದಾಣಕ್ಕೆ ಸಂಜೆ 4.45 ಕ್ಕೆ ತಲುಪುತ್ತದೆ ಮತ್ತು 4.40ಕ್ಕೆ ಅಲ್ಲಿಂದ ನಿರ್ಗಮಿಸಿ,ರಾತ್ರಿ 10.35ಕ್ಕೆ ರಾಣಿ ಕಮಲಾಪತಿ ನಿಲ್ದಾಣ ತಲುಪಲಿಸದೆ.
ಮತ್ತೊಂದು ರೈಲು ಬೆಳಗ್ಗೆ 6.10ಕ್ಕೆ ಅಜ್ಮೀರ್‌ನಿಂದ ಹೊರಟು 7.55ಕ್ಕೆ ಜೈಪುರ ತಲುಪುತ್ತದೆ. ಐದು ನಿಮಿಷಗಳ ಕಾಲ ಅಲ್ಲಿ ನಿಂತು, ಮತ್ತೆ 8 ಗಂಟೆಗೆ ಹೊರಡುತ್ತದೆ ಮತ್ತು 9.41 ಕ್ಕೆ ಅಲ್ವಾರ್ ತಲುಪುತ್ತದೆ ಮತ್ತು ಎರಡು ನಿಮಿಷಗಳ ಕಾಲ ನಿಲ್ಲಿಸಿ, 9.43ಕ್ಕೆ ಹೊರಡುತ್ತದೆ. 10.50ಕ್ಕೆ ರೇವಾರಿ ತಲುಪುತ್ತದೆ. 11.25 ಕ್ಕೆ ಗುರಗಾಂವ್ ಮತ್ತು 12.15ಕ್ಕೆ ದೆಹಲಿ ತಲುಪುತ್ತದೆ.
ದೇಶದ ಮೊದಲ ವಂದೇ ಭಾರತ್ ರೈಲು ನವದೆಹಲಿಯಿಂದ ಶಿವನ ನಗರವಾದ ಕಾಶಿಗೆ ಸಂಚರಿಸಿತ್ತು. ಈ ರೈಲನ್ನು ಫೆಬ್ರವರಿ 2019 ರಲ್ಲಿ ಆರಂಭಿಸಲಾಗಿತ್ತು. ಅದೇ ಸಮಯದಲ್ಲಿ ಶ್ರೀ ವೈಷ್ಣೋ ದೇವಿ ಕತ್ರಾದಿಂದ ನವದೆಹಲಿಗೆ ಮತ್ತೊಂದು ರೈಲು ಸಂಚಾರ ಆರಂಭಿಸಿತ್ತು. ಗಾಂಧಿನಗರದಿಂದ ಮುಂಬೈ ನಡುವೆ ಮೂರನೆಯದು, ನವದೆಹಲಿ ಮತ್ತು ಹಿಮಾಚಲದ ಅಂಬ್ ಅಂದೌರಾ ನಿಲ್ದಾಣದ ನಡುವೆ ನಾಲ್ಕನೆಯ ವಂದೇ ಭಾರತ್ ರೈಲು ಸಂಚಾರ ಆರಂಭಿಸಿತ್ತು.
ಚೆನ್ನೈನಿಂದ ಮೈಸೂರಿನವರೆಗೆ ಐದನೇ ವಂದೇ ಭಾರತ್ , ಆರನೇ ವಂದೇ ಭಾರತ್ ನಾಗ್ಪುರ ಮತ್ತು ಬಿಲಾಸ್ಪುರ್ ನಡುವೆ ಸಂಚಾರ ಆರಂಭಿಸಿತ್ತು. ಅದೇ ರೀತಿ, ಹೌರಾದಿಂದ ನ್ಯೂ ಜಲ್ಪೈಗುರಿಗೆ ಏಳನೇ ವಂದೇ ಭಾರತ್ ರೈಲು ಮತ್ತು ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಕ್ಕೆ ಎಂಟನೇ ವಂದೇ ಭಾರತ್ ರೈಲು ಪ್ರಾರಂಭಿಸಲಾಯಿತು. ನವ ಮುಂಬೈನಿಂದ ಸೋಲ್ಲಾಪುರ ನಡುವೆ 9 ಮತ್ತು 10 ನೇ ರೈಲು ಮುಂಬೈನಿಂದ ಶಿರಡಿ ನಡುವೆ ಸಂಚಾರ ನಡೆಸುತ್ತಿವೆ.