ಈಗ, ಆಕೆಯನ್ನು ಫಾರೆಸ್ಟ್ ಎಸೆನ್ಷಿಯಲ್ಸ್‌ನ ಹೊಸ ಅಭಿಯಾನದ 'ದ ಯುವತಿ ಸೆಲೆಕ್ಸನ್' ತನ್ನ ಬ್ರ್ಯಾಂಡ್ನ ಅಂಬಾಸಿಟರ್ ಆಗಿ ಮಾಡಿಕೊಂಡಿದೆ. ಏಪ್ರಿಲ್‌ನಲ್ಲಿ, ಬ್ರ್ಯಾಂಡ್ ತನ್ನ Instagram ನಲ್ಲಿ ವೀಡಿಯೊವನ್ನು ಹಂಚಿಕೊಂಡಿತ್ತು. " ಅವಳ ಮುಖವು ಶುದ್ಧ ಸಂತೋಷದಿಂದ ಬೆಳಗುತ್ತಿದೆ, ಅವಳು ಕನಸುಗಳು ಕಣ್ಣೆದುರೆ ನನಸಾಗಿದ ಖಷಿ ಆಕೆಯ ಕಣ್ಣುಗಳಲ್ಲಿ ಕಾಣುತ್ತಿದೆ. ಕನಸುಗಳನ್ನು ನನಸಾಗಿಸಿಕೊಳ್ಳಲು ಮಲೀಶಾ ಅವರ ಕಥೆ ಒಂದು ಸುಂದರವಾದ ಸ್ಪೂರ್ತಿಯಾಗಲಿದೆ " ಎಂದು ಫಾರೆಸ್ಟ್ ಎಸೆನ್ಷಿಯಲ್ಸ್ ತನ್ನ ಶೀರ್ಷಿಕೆಯಲ್ಲಿ ಬರೆದಿದುಕೊಂಡಿತ್ತು.