Sudan Crisis: ಸುಡಾನ್‌ನಿಂದ ತಾಯ್ನೆಲಕ್ಕೆ ತಲುಪಿದ 360 ಭಾರತೀಯರು; ಮುಂದುವರಿದ ‘ಆಪರೇಷನ್ ಕಾವೇರಿ’ ಕಾರ್ಯ
ನವದೆಹಲಿ: ಆಂತರಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಸುಡಾನ್‌ನಿಂದ ಭಾರತೀಯರನ್ನು ರಕ್ಷಣೆ ಮಾಡುವ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆಯ ಅಡಿಯಲ್ಲಿ 360 ಭಾರತೀಯರು ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ.
ಯುದ್ಧ ಪೀಡಿತ ಸುಡಾನ್‌ನಿಂದ 360 ಮಂದಿಯ ಮೊದಲ ಬ್ಯಾಚ್ ನವದೆಹಲಿಗೆ ಗುರುವಾರ ಸಂಜೆ ತಲುಪಿದ್ದು, ತಾಯ್ನಾಡಿನಲ್ಲಿ ಹೆಜ್ಜೆ ಇಡುತ್ತಿದ್ದಂತೆ ಎಲ್ಲರ ಮುಖದಲ್ಲಿ ಹರ್ಷೋದ್ಗಾರ ಕಂಡು ಬಂದಿದೆ.
2/ 8
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೌದಿ ಅರೇಬಿಯಾದ ಅಧಿಕಾರಿಗಳೊಂದಿಗೆ ರಕ್ಷಣಾ ಕಾರ್ಯದ ಕುರಿತು ಮಾತುಕತೆ ನಡೆಸಿದ ನಂತರ ಭಾರತೀಯರ ಸ್ಥಳಾಂತರ ಕಾರ್ಯ ಆರಂಭವಾಗಿದೆ.
3/ 8
ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಎಸ್ ಜೈ ಶಂಕರ್, ಭಾರತ ನಿಮ್ಮನ್ನು ಮರಳಿ ಸ್ವಾಗತಿಸುತ್ತಿದೆ. ಆಪರೇಷನ್ ಕಾವೇರಿ ಅಡಿಯಲ್ಲಿ 360 ಮಂದಿ ಭಾರತೀಯ ಪ್ರಜೆಗಳನ್ನು ಹೊತ್ತು ಮೊದಲ ವಿಮಾನ ಭಾರತಕ್ಕೆ ಬರುತ್ತಿದೆ’ ಎಂದು ಟ್ವೀಟ್ ಮಾಡಿದ್ದರು.
4/ 8
ಸುಡಾನ್‌ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನು ಹಂತ ಹಂತವಾಗಿ ಸ್ಥಳಾಂತರ ಮಾಡುವ ಪ್ರಕ್ರಿಯೆ ಮುಂದುವರಿದಿದ್ದು, 128 ಭಾರತೀಯರನ್ನು ಹೊತ್ತ ಐಎಫ್‌ನ ಸಿ-130ಜೆ ವಿಮಾನ (ನಾಲ್ಕನೇ ಬ್ಯಾಚ್) ಸುಡಾನ್‌ನಿಂದ ಜೆಡ್ಡಾಕ್ಕೆ ಬಂದು ತಲುಪಿದೆ. ಅಲ್ಲಿಂದ ಶೀಘ್ರದಲ್ಲೇ ಭಾರತಕ್ಕೆ ಪ್ರಯಾಣ ಬೆಳೆಸಲಿದೆ.
5/ 8
‘ಆಪರೇಷನ್ ಕಾವೇರಿ’ ಎಂಬುದು ಸುಡಾನ್ ಸೇನೆ ಮತ್ತು ಅರೆಸೈನಿಕ ಗುಂಪುಗಳ ಮಧ್ಯೆ ನಡೆಯುತ್ತಿರುವ ಆಂತರಿಕ ಯುದ್ಧದಲ್ಲಿ ಸಿಲುಕಿ ಆಪತ್ತಿನಲ್ಲಿರುವ ಭಾರತೀಯ ಪ್ರಜೆಗಳನ್ನು ರಕ್ಷಣೆ ಮಾಡುವ ಕಾರ್ಯಾಚರಣೆಗೆ ಇಟ್ಟ ಹೆಸರಾಗಿದೆ.
6/ 8
ವಿವಿಧ ದೇಶಗಳು ತಮ್ಮ ನಾಗರಿಕರನ್ನು ಸುಡಾನ್‌ನಿಂದ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿರುವ ಹಿನ್ನೆಲೆ ಯುಎಸ್ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಿದ ನಂತರ ಸುಡಾನ್‌ನ ಉಭಯ ಬಣಗಳು 72 ಗಂಟೆಗಳ ಕಾಲ ಕದನ ವಿರಾಮ ಘೋಷಿಸಿದೆ.
7/ 8
ಎರಡು ದಿನಗಳ ಹಿಂದೆ ಫ್ರಾನ್ಸ್ ಸರ್ಕಾರ ತಮ್ಮ ಪ್ರಜೆಗಳನ್ನು ಸುಡಾನ್‌ನಿಂದ ರಕ್ಷಣೆ ಮಾಡುವ ವೇಳೆ ಐವರು ಭಾರತೀಯರನ್ನೂ ರಕ್ಷಣೆ ಮಾಡಿತ್ತು. ಇದಕ್ಕೂ ಮೊದಲು ಸೌದಿ ಅರೇಬಿಯಾ ಕೂಡ ತನ್ನ ಸ್ನೇಹಪರ ರಾಷ್ಟ್ರಗಳ 66 ಮಂದಿಯನ್ನು ರಕ್ಷಿಸಿತ್ತು. ಅದರಲ್ಲಿ ಭಾರತೀಯರೂ ಸೇರಿದ್ದರು.
8/ 8
ಈಗಾಗಲೇ ಸುಡಾನ್‌ನಲ್ಲಿ ನಡೆದಿರುವ ಆಂತರಿಕ ಯುದ್ಧದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡು ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಆದರೂ ಸಂಘರ್ಷ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
First published:
18