ಗೂಗಲ್ ಸಿಇಒ Sundar Pichai ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲು
ಕೃತಿಸ್ವಾಮ್ಯ ಕಾಯ್ದೆ (Copy Right violation) ಉಲ್ಲಂಘನೆ ಆರೋಪದ ಮೇಲೆ ಮುಂಬೈ ಪೊಲೀಸರು ಗೂಗಲ್ ಸಿಇಒ ಸುಂದರ್ ಪಿಚೈ (Google CEO Sundar Pichai) ಮತ್ತು ಇತರ ಐವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ, ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಲಾಗಿದೆ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಇತರ ಐವರು ಕಂಪನಿ ಅಧಿಕಾರಿಗಳ ವಿರುದ್ಧ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಏಕ್ ಹಸೀನಾ ಥಿ ಏಕ್ ದೀವಾನಾ ಥಾ’ ಚಿತ್ರವನ್ನು ಯೂಟ್ಯೂಬ್ನಲ್ಲಿ ಅನುಮತಿ ಇಲ್ಲದೇ ಗೂಗಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಆರೋಪಿಸಿ ನಿರ್ದೇಶಕ ಸುನೀಲ್ ದರ್ಶನ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
2/ 5
ಯೂಟ್ಯೂಬ್ನಲ್ಲಿ ತಮ್ಮ ಚಲನಚಿತ್ರ 'ಏಕ್ ಹಸೀನಾ ಥಿ ಏಕ್ ದೀವಾನಾ ಥಾ' ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪದ ಮೇಲೆ ಗೂಗಲ್ ಸಿಇಒ ಸುಂದರ್ ಪಿಚೈ ಅಪ್ಲೋಡ್ ಮಾಡಿದ್ಧಾರೆ ಎಂದು ಬಾಲಿವುಡ್ ಚಲನಚಿತ್ರ ನಿರ್ಮಾಪಕ ಸುನೀಲ್ ದರ್ಶನ್ ದೂರಿನಲ್ಲಿ ದಾಖಲಿಸಿದ್ದಾರೆ.
3/ 5
ಇನ್ನು ಈ ಸಂಬಂಧ ಮಾತನಾಡಿರುವ ನಿರ್ಮಾಪಕ ಸುನೀಲ್ ದರ್ಶನ್, ನಾನು ಪ್ರಚಾರ ಪಡೆಯಲು ಪ್ರಯತ್ನಿಸುತ್ತಿಲ್ಲ. ನಾನು ದಾಖಲೆ ಸಮೇತ ಸತ್ಯಗಳನ್ನು ಹಾಕಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕಿಂತ ಹೊರತಾಗಿ ಬೇರೆ ಯಾವುದೇ ಉದ್ದೇಶ ಹೊಂದಿಲ್ಲ.
4/ 5
ಚಲನಚಿತ್ರ ನಿರ್ಮಾಪಕ ಮತ್ತು ಹಕ್ಕುಸ್ವಾಮ್ಯ ಮಾಲೀಕರಾಗಿ, ನಾನು ಕೆಲವು ಹಕ್ಕುಗಳನ್ನು ಹೊಂದಿದ್ದೇನೆ. ಅವುಗಳನ್ನು ನಿರ್ದಯವಾಗಿ ಉಲ್ಲಂಘಿಸಿದಾಗ, ನಾನು ಏನು ಮಾಡಬೇಕು? ನಾನೊಬ್ಬ ಅಸಹಾಯಕ ಎಂದು ತಿಳಿಸಿದ್ದಾರೆ
5/ 5
ಭಾರತದ ಮೂಲದ ಸುಂದರ್ ಪಿಚ್ಚೈ 2022ರ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿನ್ನೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ಪ್ರಕಟಿಸಿದ್ದು, ಇದರಲ್ಲಿ ಗೂಗಲ್ ಸಿಇಒ ಕೂಡ ಪ್ರಶಸ್ತಿಗೆ ಭಾಜನರಾಗಿದ್ದಾರೆ