ಸೋಂಪಿನ ಪುಡಿ: ಒಂದು ಹಿಡಿ ಸೋಂಪು ತೆಗೆದುಕೊಂಡು ಅದನ್ನು ಪುಡಿ ಮಾಡಿ. ನಂತರ ಈ ಪುಡಿಯನ್ನು ಮೊಸರು, ಸಕ್ಕರೆ ಪಾಕ, ಚಹಾ ಅಥವಾ ಕಾಫಿಯಂತಹ ಯಾವುದೇ ಪಾನೀಯಗಳಿಗೆ ಮಿಶ್ರಣ ಮಾಡಿ ಕುಡಿಯಬಹುದು. ಸೋಂಪು ಕಾಳಿನೊಂದಿಗೆ ಮೆಂತ್ಯ ಕಾಳುಗಳು, ಕಪ್ಪು ಉಪ್ಪು, ಇಂಗು ಮತ್ತು ಸಕ್ಕರೆ ಮಿಠಾಯಿಗಳಂತಹ ಪದಾರ್ಥಗಳನ್ನು ಮಿಕ್ಸ್ ಮಾಡುವ ಮೂಲಕ ರುಚಿಯನ್ನು ಹೆಚ್ಚಿಸಬಹುದು. ಈ ಪುಡಿಯ ನಿಯಮಿತ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಸೋಂಪು ಕಾಳುಗಳು: ನೀರಿನೊಂದಿಗೆ ಸೋಂಪು ಕಾಳನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ ಹೊಟ್ಟೆ ಸೆಳೆತ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆ ಆಗುತ್ತದೆ. ಒಂದು ಹಿಡಿ ಸೋಂಪನ್ನು ತೆಗೆದುಕೊಂಡು ಅವುಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿ. ರಾತ್ರಿ ಇಡಿ ಬಿಟ್ಟು ಬೆಳಗ್ಗೆ ಕುಡಿಯಿರಿ. ಇದು ದೇಹದಲ್ಲಿ ಜೀವಸತ್ವಗಳು ಮತ್ತು ಖನಿಜಗಳನ್ನು ಗರಿಷ್ಠವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ತೂಕ ನಷ್ಟಕ್ಕೆ ಸಹಾಯಕವಾಗಿದೆ. ಎರಡು ಲೋಟ ಸೋಂಪು ನೀರನ್ನು ಸೇವಿಸುವುದು ಉತ್ತಮ ಪರಿಹಾರವಾಗಿದೆ. ಅದರಲ್ಲಿಯೂ ತೂಕ ಕಡಿಮೆ ಮಾಡಲು ಬೆಳಗ್ಗೆ ಒಂದು ಲೋಟ ಮತ್ತು ಇನ್ನೊಂದು ಸಂಜೆ ಸೋಂಪಿನ ನೀರನ್ನು ಕುಡಿಯಿರಿ.
ಚಹಾ: ಸೋಂಪು ಕಾಳಿನಿಂದ ಚಹಾವನ್ನು ತಯಾರಿಸುವುದು ತುಂಬಾ ಸರಳವಾದ ಕೆಲಸವಾಗಿದೆ. ಉತ್ತಮ ಪ್ರಯೋಜನಗಳನ್ನು ಪಡೆಯಲು ಪ್ರತಿದಿನ ಸೋಂಪು ಕಾಳನ್ನು ಸೇವಿಸಬಹುದು. ನೀವು ಸಂಜೆ ಚಹಾ ಮಾಡುವ ವೇಳೆ, ನೀರು ಕುದಿಯುವಾಗ ಒಂದು ಚಮಚ ಸೋಂಪನ್ನು ಹಾಕಿ. ಇದಲ್ಲದೇ, ಸೋಂಪಿನೊಂದಿಗೆ ಅರ್ಧ ಚಮಚ ಬೆಲ್ಲವನ್ನು ಸೇರಿಸಿ ಕೂಡ ನೀವು ಅದ್ಭುತ ಚಹಾವನ್ನು ಕುಡಿಯಬಹುದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು, ಹೊಟ್ಟೆ ನೋವನ್ನು ಕಡಿಮೆ ಮಾಡಲು, ಬಾಯಿಯ ರುಚಿಯನ್ನು ಹೆಚ್ಚಿಸಲು ಮತ್ತು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.