ಕಳೆದ ವರ್ಷ ನಮೀಬಿಯಾದಿಂದ ಭಾರತಕ್ಕೆ ಒಟ್ಟು 8 ಚೀತಾಗಳನ್ನು ಕರೆ ತರಲಾಗಿತ್ತು. ಆ ಪೈಕಿ ಒಂದು ಚಿರತೆಗೆ ಭಾರತಕ್ಕೆ ಕರೆತಂದ ಬಳಿಕ ಕಿಡ್ನಿ ಸೋಂಕು ಇರುವುದು ಕಂಡುಬಂದಿತ್ತು.
2/ 7
ಇದೀಗ ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಸಾಶಾ ಹೆಸರಿನ 3 ವರ್ಷದ ಚೀತಾ ಸೋಮವಾರ ಮೃತಪಟ್ಟಿದ್ದು, ಈ ಚೀತಾ ಭಾರತಕ್ಕೆ ಕರೆತರುವ ಮುನ್ನವೇ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ಹೇಳಲಾಗಿದೆ.
3/ 7
ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು.
4/ 7
ನಮೀಬಿಯಾದಿಂದ ಭಾರತಕ್ಕೆ ಒಟ್ಟು 8 ಅಪರೂಪದ ಚೀತಾಗಳನ್ನು ಕರೆತಂದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಗೊಳಿಸಿದ್ದರು.
5/ 7
ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆಗೊಳಿಸಿದ ನಂತರ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಚೀತಾಗಳು ಬೇಟೆಯಾಡಲು ಆರಂಭಿಸಿದ್ದವು. ದಿನಕಳೆದಂತೆ ಒಂದು ಚೀತಾ ಅಸ್ವಸ್ಥಗೊಂಡು ಇತರ ಚೀತಾಗಳೊಂದಿಗೆ ಬೆರೆಯುವುದನ್ನು ಕಡಿಮೆ ಮಾಡಿತ್ತು.
6/ 7
ಆದರೆ ಕಳೆದ ಜನವರಿ ತಿಂಗಳ 23ನೇ ತಾರೀಕಿನಂದು ಸಾಶಾ ಚೀತಾದಲ್ಲಿ ಅನಾರೋಗ್ಯ ಲಕ್ಷಣಗಳು ಕಂಡುಬಂದ ಪರಿಣಾಮ ನಂತರ ಆ ಚೀತಾವನ್ನು ಚಿಕಿತ್ಸೆಗಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಇದೀಗ ಅದು ಮೃತಪಟ್ಟಿದೆ.
7/ 7
75 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಚೀತಾಗಳಿಗೆ ಕುನೊ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ.
First published:
17
Cheetah Dies: ನಮೀಬಿಯಾದಿಂದ ಕರೆತಂದಿದ್ದ 8ರ ಪೈಕಿ ಒಂದು ಚೀತಾ ಕಿಡ್ನಿ ಸೋಂಕಿನಿಂದ ಸಾವು!