Cheetah: ದಕ್ಷಿಣ ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು! 40 ದಿನಗಳ ಅಂತರದಲ್ಲಿ 3 ಚೀತಾಗಳ ಮರಣ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾ ಮಂಗಳವಾರ ಸಾವನ್ನಪ್ಪಿದೆ. ಗಾಯಗೊಂಡ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. ಈ ಮೂಲಕ ಕಳೆದ 40 ದಿನಗಳಲ್ಲಿ ಸಾವುಕಂಡ ಮೂರನೇ ಚೀತಾ ಇದಾಗಿದೆ.

First published:

 • 17

  MORE
  GALLERIES

 • 27

  ದಕ್ಷಾ ಎಂಬ ಹೆಣ್ಣು ಚೀತಾ ಎರಡು ಗಂಡು ಚೀತಾಗಳೊಡನೆ ನಡೆದ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದೆ. ಗಂಭೀರವಾಗಿ ಗಾಯಗೊಂಡಿದ್ದ ದಕ್ಷಾ ಚೀತೆಯನ್ನು ತಕ್ಷಣ ಅಗತ್ಯ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಾವನ್ನಪ್ಪಿದೆ.

  MORE
  GALLERIES

 • 37

  Cheetah: ದಕ್ಷಿಣ ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು! 40 ದಿನಗಳ ಅಂತರದಲ್ಲಿ 3 ಚೀತಾಗಳ ಮರಣ

  ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಇದರಲ್ಲಿ ಈಗಾಗಲೇ 3 ಚೀತಾಗಳು ಸಾವನ್ನಪ್ಪಿದಂತಾಗಿದೆ. ಈಗಾಗಲೇ ಎರಡು ಚೀತಾಗಳು ಅನಾರೋಗ್ಯದಿಂದ ಸಾವನ್ನಪ್ಪಿದ್ದವು.

  MORE
  GALLERIES

 • 47

  Cheetah: ದಕ್ಷಿಣ ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು! 40 ದಿನಗಳ ಅಂತರದಲ್ಲಿ 3 ಚೀತಾಗಳ ಮರಣ

  ದಕ್ಷಾ ಚೀತಾವನ್ನು ಅಗ್ನಿ ಮತ್ತು ವಾಯು ಎಂಬ ಎರಡು ಗಂಡು ಚೀತಾಗಳನ್ನು ಉದ್ಯಾನವನದ ಆವರಣದಲ್ಲಿ ಬಿಡಲಾಗಿತ್ತು. ಈ ವೇಳೆ ಗಂಡು ಚೀತಾಗಳು ಅದರೊಂದಿಗೆ ಕಾಳಗ ನಡೆಸಿರುವ ಸಾಧ್ಯತೆಯಿದೆ. ಈ ವೇಳೆ ದಕ್ಷಾ ಸಾವನ್ನಪ್ಪಿರಬಹುದು ಎಂದು ತಿಳಿಸಿರುವ ಅಧಿಕಾರಿಗಳು ವಿಷಾಧ ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ.

  MORE
  GALLERIES

 • 57

  Cheetah: ದಕ್ಷಿಣ ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು! 40 ದಿನಗಳ ಅಂತರದಲ್ಲಿ 3 ಚೀತಾಗಳ ಮರಣ

  ಗಂಡು ಚೀತಾಗಳು ಹೆಣ್ಣು ಚೀತಾಗಳೊಂದಿಗೆ ಆಕ್ರಮಣಕ್ಕೆ ಇಳಿಯುವುದು ಅಸಾಮಾನ್ಯವೇನಲ್ಲ. ಆಫ್ರಿಕಾದಲ್ಲೂ ಸಾವನ್ನಪ್ಪುವ 8ರಷ್ಟು ಚೀತಾಗಳು ಇದೇ ರೀತಿ ಕಾದಾಟದಲ್ಲಿ ಮೃತಪಟ್ಟಿದೆ ಎಂದು ಚೀತಾ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

  MORE
  GALLERIES

 • 67

  Cheetah: ದಕ್ಷಿಣ ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು! 40 ದಿನಗಳ ಅಂತರದಲ್ಲಿ 3 ಚೀತಾಗಳ ಮರಣ

  70 ವರ್ಷಗಳ ಹಿಂದೆ ದೇಶದಲ್ಲಿ ಕಣ್ಮರೆಯಾಗಿದ್ದ ಚೀತಾ ಪ್ರಭೇದವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಪ್ರಾಜೆಕ್ಟ್ ಚೀತಾ ಯೋಜನೆ ಅಡಿಯಲ್ಲಿ ದಕ್ಷಿಣಾ ಆಫ್ರಿಕಾ ಮತ್ತು ನಮೀಬಿಯಾದಿಂದ ಒಟ್ಟು 20 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಎಲ್ಲಾ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು.

  MORE
  GALLERIES

 • 77

  Cheetah: ದಕ್ಷಿಣ ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು! 40 ದಿನಗಳ ಅಂತರದಲ್ಲಿ 3 ಚೀತಾಗಳ ಮರಣ

  ಅಧಿಕಾರಿಗಳ ಪ್ರಕಾರ ಉದ್ಯಾನದಲ್ಲಿರುವ ಇತರ ಚೀತಾಗಳು ಸಂಪೂರ್ಣವಾಗಿ ಆರೋಗ್ಯವಂತವಾಗಿವೆ. ಅವುಗಳು ಬೇಟೆಯಲ್ಲಿ ತೊಡಗಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  MORE
  GALLERIES