Farmer Success Story: ಇಸ್ರೇಲ್​ ಮಾದರಿ ಕೃಷಿ, ಒಂದು ಗುಂಟೆ ಜಮೀನಿನಲ್ಲಿ ಒಂದು ಬೆಳೆಗೆ ಲಕ್ಷ ರೂಪಾಯಿ ಸಂಪಾದಿಸುತ್ತಿರುವ ರೈತ!

ಇತ್ತೀಚೆಗೆ ಕೆಲವು ರೈತರು ಸುಧಾರಿತ ತಂತ್ರಜ್ಞಾನ ಬಳಸಿ ವಾಣಿಜ್ಯ ಬೆಳೆಗಳನ್ನು ಬೆಳೆದು ಕಡಿಮೆ ವೆಚ್ಚದಲ್ಲಿ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಇಲ್ಲೊಬ್ಬ ರೈತ ಕೇವಲ ಒಂದು ಗುಂಟೆ ಭೂಮಿಯಲ್ಲಿ ಒಂದು ಒಂದು ಬೆಳೆಗೆ ಒಂದು ಲಕ್ಷ ಸಂಪಾದಿಸಿ ಅಚ್ಚರಿ ಮೂಡಿಸಿದ್ದಾರೆ.

  • Local18
  • |
  •   | Bihar, India
First published:

  • 17

    Farmer Success Story: ಇಸ್ರೇಲ್​ ಮಾದರಿ ಕೃಷಿ, ಒಂದು ಗುಂಟೆ ಜಮೀನಿನಲ್ಲಿ ಒಂದು ಬೆಳೆಗೆ ಲಕ್ಷ ರೂಪಾಯಿ ಸಂಪಾದಿಸುತ್ತಿರುವ ರೈತ!

    ನಮ್ಮ ದೇಶದ ರೈತರ ಸ್ಥಿತಿ ತೀರಾ ಹದಗೆಟ್ಟಿದೆ. ಮಾರುಕಟ್ಟೆಯಲ್ಲಿ ಉತ್ತಮ ದರ ಇದ್ದಾಗ ಇಳುವರಿ ಬರುವುದಿಲ್ಲ. ಇಳುವರಿ ಹೆಚ್ಚಾದಾಗ ಬೆಲೆ ಇರುವುವಿಲ್ಲ. ಇದರಿಂದ ಅನೇಕ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

    MORE
    GALLERIES

  • 27

    Farmer Success Story: ಇಸ್ರೇಲ್​ ಮಾದರಿ ಕೃಷಿ, ಒಂದು ಗುಂಟೆ ಜಮೀನಿನಲ್ಲಿ ಒಂದು ಬೆಳೆಗೆ ಲಕ್ಷ ರೂಪಾಯಿ ಸಂಪಾದಿಸುತ್ತಿರುವ ರೈತ!

    ಆದರೆ ಇತ್ತೀಚೆಗೆ ಕೆಲವು ರೈತರು ಸುಧಾರಿತ ತಂತ್ರಜ್ಞಾನ ಬಳಸಿ ವಾಣಿಜ್ಯ ಬೆಳೆಗಳನ್ನು ಬೆಳೆದು ಕಡಿಮೆ ವೆಚ್ಚದಲ್ಲಿ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಬಿಹಾರದ ಸುರೇಶ್ ಪ್ರಸಾದ್ ಕೂಡ ಈ ವಿಭಾಗಕ್ಕೆ ಸೇರುತ್ತಾರೆ. ಅವರು ಕೇವಲ ಒಂದು ಗುಂಟೆ ಭೂಮಿಯಲ್ಲಿ ಪವಾಡವನ್ನೇ ಸೃಷ್ಟಿಸಿದ್ದಾರೆ.

    MORE
    GALLERIES

  • 37

    Farmer Success Story: ಇಸ್ರೇಲ್​ ಮಾದರಿ ಕೃಷಿ, ಒಂದು ಗುಂಟೆ ಜಮೀನಿನಲ್ಲಿ ಒಂದು ಬೆಳೆಗೆ ಲಕ್ಷ ರೂಪಾಯಿ ಸಂಪಾದಿಸುತ್ತಿರುವ ರೈತ!

    ಸುರೇಶ್​ ಪ್ರತಿ ತಿಂಗಳು ಒಂದು ಗುಂಟೆ ಜಮೀನಿನಲ್ಲಿ 1 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ. ಇಷ್ಟು ಚಿಕ್ಕ ಭೂಮಿಯಲ್ಲಿ ಇಷ್ಟು ಆದಾಯ ಹೇಗೆ ಸಾಧ್ಯ ಅನ್ನಿಸಬಹುದು? ಆಶ್ಚರ್ಯವೂ ಆಗಬಹುದುದು. ಆದರೆ ಇದು ನಿಜ..!

    MORE
    GALLERIES

  • 47

    Farmer Success Story: ಇಸ್ರೇಲ್​ ಮಾದರಿ ಕೃಷಿ, ಒಂದು ಗುಂಟೆ ಜಮೀನಿನಲ್ಲಿ ಒಂದು ಬೆಳೆಗೆ ಲಕ್ಷ ರೂಪಾಯಿ ಸಂಪಾದಿಸುತ್ತಿರುವ ರೈತ!

    ಬಿಹಾರದ ಸಿವಾನ್ ಜಿಲ್ಲೆಯ ಗೋರಿಯಾಕೋಠಿ ಮಂಡಲದ ರೈತ ಸುರೇಶ್ ಪ್ರಸಾದ್ ಅವರು ತಮ್ಮ ಗ್ರಾಮದಲ್ಲಿ ಒಂದು ಗುಂಟೆ ಜಮೀನು ಹೊಂದಿದ್ದಾರೆ. ಕಡಿಮೆ ಜಮೀನಿದ್ದರೂ ಅದರಲ್ಲಿ ಹಲವು ಬಗೆಯ ಗಿಡಗಳನ್ನು ಬೆಳೆಸುತ್ತಾರೆ. ಅವರು ಇಸ್ರೇಲ್ ತಂತ್ರಜ್ಞಾನವನ್ನು ಬಳಸಿಕೊಂಡು ಸಸ್ಯಗಳನ್ನು ಬೆಳೆಸುತ್ತಿದ್ದಾರೆ

    MORE
    GALLERIES

  • 57

    Farmer Success Story: ಇಸ್ರೇಲ್​ ಮಾದರಿ ಕೃಷಿ, ಒಂದು ಗುಂಟೆ ಜಮೀನಿನಲ್ಲಿ ಒಂದು ಬೆಳೆಗೆ ಲಕ್ಷ ರೂಪಾಯಿ ಸಂಪಾದಿಸುತ್ತಿರುವ ರೈತ!

    ಸುರೇಶ್ ಪ್ರಸಾದ್ ತಮ್ಮ ಜಮೀನಿನಲ್ಲಿ ಪಾಲಿ ಹೌಸ್ ಸ್ಥಾಪಿಸಿ ಇಸ್ರೇಲ್ ತಂತ್ರಜ್ಞಾನದೊಂದಿಗೆ ನರ್ಸರಿ ನಡೆಸುತ್ತಿದ್ದಾರೆ. ಅವರು ತಮ್ಮ ನರ್ಸರಿಯಲ್ಲಿ ಬೀಜಗಳ ಮೂಲಕ ವಿವಿಧ ರೀತಿಯ ಹೂವುಗಳು ಮತ್ತು ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. ಕೇವಲ ಒಂದೇ ತಿಂಗಳಲ್ಲಿ 20 ಸಾವಿರ ಗಿಡಗಳನ್ನು ಸಿದ್ಧಪಡಿಸುತ್ತಾರೆ. ಪ್ರತಿ ಗಿಡವನ್ನು 5 ರೂ.ಗೆ ಮಾರಾಟ ಮಾಡಿ ಒಂದು ಲಕ್ಷ ರೂಪಾಯಿವರೆಗೆ ಆದಾಯ ಗಳಿಸುತ್ತಾರೆ.

    MORE
    GALLERIES

  • 67

    Farmer Success Story: ಇಸ್ರೇಲ್​ ಮಾದರಿ ಕೃಷಿ, ಒಂದು ಗುಂಟೆ ಜಮೀನಿನಲ್ಲಿ ಒಂದು ಬೆಳೆಗೆ ಲಕ್ಷ ರೂಪಾಯಿ ಸಂಪಾದಿಸುತ್ತಿರುವ ರೈತ!

    ನರ್ಸರಿಯಲ್ಲಿ ಸಸ್ಯಗಳನ್ನು ಬೆಳೆಸಲು 200 ಟ್ರೇಗಳನ್ನು ಬಳಸಲಾಗುತ್ತದೆ. ಒಂದು ಟ್ರೇ  98 ರಿಂದ 100 ಸಸ್ಯಗಳನ್ನು ಉತ್ಪಾದಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಗೆ ಅವರಿಗೆ ಕೇವಲ 20-25 ಸಾವಿರ ರೂ ಖರ್ಚು ಮಾಡುತ್ತಾರೆ. ಒಮ್ಮೆ ಗಿಡಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದರೆ ಒಂದು ಲಕ್ಷ ರೂಪಾಯಿವರೆಗೆ ಸಿಗುತ್ತದೆ. ಇದರಲ್ಲಿ ಖರ್ಚು ಹೋಗಿ 80 ಸಾವಿರದವರೆಗೂ ನಿವ್ವಳ ಲಾಭ ಬರಲಿದೆ.

    MORE
    GALLERIES

  • 77

    Farmer Success Story: ಇಸ್ರೇಲ್​ ಮಾದರಿ ಕೃಷಿ, ಒಂದು ಗುಂಟೆ ಜಮೀನಿನಲ್ಲಿ ಒಂದು ಬೆಳೆಗೆ ಲಕ್ಷ ರೂಪಾಯಿ ಸಂಪಾದಿಸುತ್ತಿರುವ ರೈತ!

    ಸುರೇಶ್ ಪ್ರಸಾದ್ ಇಸ್ರೇಲ್ ತಂತ್ರಜ್ಞಾನದಲ್ಲಿ ತರಬೇತಿ ಪಡೆದಿದ್ದಾರೆ. ನಂತರ ಈ ವಿಧಾನವನ್ನು ಅನುಸರಿಸಿ ಕೃಷಿ ಆರಂಭಿಸಿದ್ದಾರೆ. ಇಸ್ರೇಲ್ ತಂತ್ರಗಾರಿಕೆ ತುಂಬಾ ಚೆನ್ನಾಗಿದೆ ಎನ್ನುತ್ತಾರೆ ಸುರೇಶ್ ಪ್ರಸಾದ್. ವರ್ಷದಲ್ಲಿ ಮೂರು ತಿಂಗಳು ಗಿಡಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ. ಈ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ಸುತ್ತಮುತ್ತಲಿನ ಅನೇಕ ರೈತರು ಅವರ ಬಳಿಗೆ ಬರುತ್ತಾರೆ. ಸುರೇಶ್ ಪ್ರಸಾದ್ ಅವರು ಬಹಳ ತಾಳ್ಮೆಯಿಂದ ತಂತ್ರಜ್ಞಾನದ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿಸಿಕೊಡುತ್ತಿದ್ದಾರೆ

    MORE
    GALLERIES