ನಾಮದೇವ್ ಕೈಯಲ್ಲಿ ದೊಡ್ಡ ಪ್ಲಾಸ್ಟಿಕ್ ಬಾಣಲಿ ಹಿಡಿದು 100 , 200, ಮತ್ತು ಹತ್ತು ಐವತ್ತು ರೂಪಾಯಿ ನೋಟುಗಳನ್ನು ರಸ್ತೆಯ ತುಂಬೆಲ್ಲಾ ಎಸೆದು ಪ್ರತಿಭಟನೆ ನಡೆಸಿದರು. ಕಳಪೆ ಔಷಧ ನೀಡುವ ಕೀಟನಾಶಕ ಕಂಪನಿಗಳ ವಿರುದ್ಧ ಘೋಷಣೆ ಕೂಗಿದರು. ರಸ್ತೆಗಳ ಮೇಲೆ ಹಣ ಎಸೆದಿದ್ದರಿಂದ ಅನೇಕರು ನೋಟುಗಳನ್ನು ಆರಿಸಿಕೊಳ್ಳಲು ಪೈಪೋಟಿ ನಡೆಸಿದ್ದು ಕಂಡು ಬಂತು.