ಜೋನ್ಸ್ , ಲೀಡ್ಸ್ ಮೂಲದ ಟ್ಯಾಂಗೋ ನೆಟ್ವರ್ಕ್ ಕಂಪನಿಯಲ್ಲಿ ವರ್ಷಕ್ಕೆ 60,000 ಯೂರೋ ವೇತನ ಪ್ಯಾಕೇಜ್ ಹೊಂದಿದ್ದ ಸೇಲ್ಸ್ ಡೈರೆಕ್ಟರ್ ಅಗಿ ಕೆಲಸ ಮಾಡುತ್ತಿದ್ದರು. ಆದರೆ ಆತನ ಬಾಸ್ ತನ್ನಂತೆ ಬೋಳುತಲೆಯ ಮತ್ತೊಬ್ಬ ವ್ಯಕ್ತಿ ತಂಡದಲ್ಲಿ ಇರುವುದ ಇಷ್ಟವಿಲ್ಲ ಎಂದು ಜೋನ್ಸ್ರನ್ನು ಕೆಲಸದಿಂದ ಬಿಡಿಸಿದ್ದರೆಂದು ಕೋರ್ಟ್ ಮುಂದೆ ಆರೋಪಿಸಿದ್ದರು. (ಸಾಂದರ್ಭಿಕ ಚಿತ್ರ)
ಜೋನ್ಸ್ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಇನ್ನೂ ಪೂರ್ಣ ಪ್ರಮಾಣದ ಉದ್ಯೋಗದ ಹಕ್ಕನ್ನು ಹೊಂದಿರಲಿಲ್ಲ. ಹಾಗಾಗಿ ಈ ರೀತಿಯ ಅನ್ಯಾಯದ ಮಾರ್ಗದಲ್ಲಿ ಕೆಲಸದಿಂದ ವಜಾಗೊಳಿಸಲಾಗಿದೆ. ಇನ್ನು ಎರಡು ವರ್ಷ ಅದೇಶ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರೆ ಅವರು ಇಂತಹ ಅನ್ಯಾಯದ ವಜಾಗೊಳಿಸುವಿಕೆಯ ವಿರುದ್ಧ ಹೋರಾಡುವ ಹಕ್ಕನ್ನು ಪಡೆಯುತ್ತಿದ್ದರು. ಆ ಹಕ್ಕಗಳನ್ನು ಅವರ ಪಡೆಯದಿರುವ ಕಾರಣ ಸುಲಭವಾಗಿ ಕೆಲಸದಿಂದ ಬಿಡಿಸಲಾಗಿತ್ತು. (ಸಾಂದರ್ಭಿಕ ಚಿತ್ರ)
ವಿಚಾರಣೆ ನಡೆಸಿದ ಕೋರ್ಟ್, ಬೋಳು ತಲೆ ಆಗಿರುವುದು ಅಥವಾ ಆಗದಿರುವುದು ಕೆಲಸದಿಂದ ವಜಾಗೊಳಿಸಲು ನೀಡುವ ಅಧಾರವಲ್ಲ. ಮಿಸ್ಟರ್ ಜೋನ್ಸ್ ಅನ್ನು ಸಂಸ್ಥೆಯಿಂದ ವಜಾಗೊಳಿಸಲು ನಿರ್ಧರಿಸಲು ಮತ್ತು ಅವರ ಸಾಮರ್ಥ್ಯ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲು ಟ್ಯಾಂಗೋ ಕಂಪನಿ ಯಾವುದೇ ನಿರ್ಧಿಷ್ಟ ಆಧಾರವನ್ನು ನೀಡಿಲ್ಲ ಎಂದು ತೀರ್ಪು ನೀಡಿರುವ ಕೋರ್ಟ್, ಅನ್ಯಾಯ ಮಾರ್ಗದಲ್ಲಿ ಜೋನ್ಸ್ರನ್ನು ಕೆಲಸದಿಂದ ತೆಗೆದಿರುವುದಕ್ಕೆ 71 ಸಾವಿರ ಯೂರೋ( ಸುಮಾರು 71 ಲಕ್ಷ ರೂ) ಪರಿಹಾರ ನೀಡಬೇಕೆಂದು ಆದೇಶ ನೀಡಿದೆ. (ಸಾಂದರ್ಭಿಕ ಚಿತ್ರ)