Starship Rocket: ಉಡಾವಣೆಗೊಂಡ ಕೆಲವೇ ನಿಮಿಷದಲ್ಲಿ ಸ್ಟಾರ್‌ಶಿಪ್‌ ರಾಕೆಟ್ ಸ್ಫೋಟ; ಎಲಾನ್‌ ಮಸ್ಕ್ ಕನಸು ನುಚ್ಚುನೂರು!

ಟೆಕ್ಸಾಸ್‌: ಜಾಗತಿಕ ಉದ್ಯಮಿ ಎಲಾನ್ ಮಸ್ಕ್‌ ಅವರ ಒಡೆತನದ ಸ್ಪೇಸ್ ಎಕ್ಸ್ ನಿರ್ಮಾಣ ಮಾಡಿರುವ ಜಗತ್ತಿನ ಅತಿ ದೊಡ್ಡ ರಾಕೆಟ್‌ ಸ್ಟಾರ್‌ ಶಿಪ್‌ ರಾಕೆಟ್‌ ಉಡಾವಣೆಗೊಂಡ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿದೆ.

First published:

  • 17

    Starship Rocket: ಉಡಾವಣೆಗೊಂಡ ಕೆಲವೇ ನಿಮಿಷದಲ್ಲಿ ಸ್ಟಾರ್‌ಶಿಪ್‌ ರಾಕೆಟ್ ಸ್ಫೋಟ; ಎಲಾನ್‌ ಮಸ್ಕ್ ಕನಸು ನುಚ್ಚುನೂರು!

    ಟೆಕ್ಸಾಸ್‌ನ ಬೋಕಾ ಚಿಕಾದಲ್ಲಿರುವ ಸ್ಟಾರ್‌ಬೆಸ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಸ್ಟಾರ್‌ ಶಿಪ್‌ ರಾಕೆಟ್​ ಅನ್ನು ಪ್ರಾಯೋಗಿಕವಾಗಿ ಟೆಕ್ಸಾಸ್‌ ಕಾಲಮಾನ ಪ್ರಕಾರ ಗುರುವಾರ ಬೆಳಿಗ್ಗೆ 8.33ಕ್ಕೆ ಉಡಾವಣೆ ಮಾಡಲಾಯಿತು.

    MORE
    GALLERIES

  • 27

    Starship Rocket: ಉಡಾವಣೆಗೊಂಡ ಕೆಲವೇ ನಿಮಿಷದಲ್ಲಿ ಸ್ಟಾರ್‌ಶಿಪ್‌ ರಾಕೆಟ್ ಸ್ಫೋಟ; ಎಲಾನ್‌ ಮಸ್ಕ್ ಕನಸು ನುಚ್ಚುನೂರು!

    ಆದರೆ ವೇಗವಾಗಿ ಆಕಾಶದತ್ತ ಚಿಮ್ಮಿದ ಸ್ಟಾರ್‌ ಶಿಪ್‌ ರಾಕೆಟ್‌ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡು ಗಲ್ಫ್‌ ಆಫ್‌ ಮೆಕ್ಸಿಕೋಗೆ ಬಂದಪ್ಪಳಿಸಿದೆ.

    MORE
    GALLERIES

  • 37

    Starship Rocket: ಉಡಾವಣೆಗೊಂಡ ಕೆಲವೇ ನಿಮಿಷದಲ್ಲಿ ಸ್ಟಾರ್‌ಶಿಪ್‌ ರಾಕೆಟ್ ಸ್ಫೋಟ; ಎಲಾನ್‌ ಮಸ್ಕ್ ಕನಸು ನುಚ್ಚುನೂರು!

    ಸ್ಟಾರ್‌ ಶಿಪ್‌ ರಾಕೆಟ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಚಿಮ್ಮಿದ ನಂತರ ಸ್ಫೋಟಗೊಳ್ಳುವ ಮೊದಲು ಆಗಸದಲ್ಲಿ ಅಲುಗಾಡಲು ಮತ್ತು ತಿರುಗಲು ಪ್ರಾರಂಭಿಸಿದೆ. ಬಳಿಕ ಏಕಾಏಕಿ ಸ್ಫೋಟಗೊಂಡಿದೆ.

    MORE
    GALLERIES

  • 47

    Starship Rocket: ಉಡಾವಣೆಗೊಂಡ ಕೆಲವೇ ನಿಮಿಷದಲ್ಲಿ ಸ್ಟಾರ್‌ಶಿಪ್‌ ರಾಕೆಟ್ ಸ್ಫೋಟ; ಎಲಾನ್‌ ಮಸ್ಕ್ ಕನಸು ನುಚ್ಚುನೂರು!

    ಗಗನಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಗಿನ ಗ್ರಹಗಳಿಗೆ ಕಳುಹಿಸುವ ಉದ್ದೇಶದಿಂದ ಸ್ಟಾರ್‌ಶಿಪ್‌ ರಾಕೆಟ್‌ಅನ್ನು ಅಭಿವೃದ್ಧಿಪಡಿಸಲಾಗಿತ್ತು.

    MORE
    GALLERIES

  • 57

    Starship Rocket: ಉಡಾವಣೆಗೊಂಡ ಕೆಲವೇ ನಿಮಿಷದಲ್ಲಿ ಸ್ಟಾರ್‌ಶಿಪ್‌ ರಾಕೆಟ್ ಸ್ಫೋಟ; ಎಲಾನ್‌ ಮಸ್ಕ್ ಕನಸು ನುಚ್ಚುನೂರು!

    ರಾಕೆಟ್ ವ್ಯವಸ್ಥೆಯ ಎರಡು ವಿಭಾಗಗಳಾದ ಬೂಸ್ಟರ್ ಮತ್ತು ಕ್ರೂಸ್ ನೌಕೆ ಉಡ್ಡಯನದ ನಂತರ ಸರಿಯಾಗಿ ಬೇರ್ಪಡಲು ಸಾಧ್ಯವಾಗದಿರುವುದು ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ರಾಕೆಟ್‌ ಬೇರ್ಪಟ್ಟಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಸ್ಪೇಸ್ ಎಕ್ಸ್ ಟ್ವೀಟ್ ಮಾಡಿದೆ.

    MORE
    GALLERIES

  • 67

    Starship Rocket: ಉಡಾವಣೆಗೊಂಡ ಕೆಲವೇ ನಿಮಿಷದಲ್ಲಿ ಸ್ಟಾರ್‌ಶಿಪ್‌ ರಾಕೆಟ್ ಸ್ಫೋಟ; ಎಲಾನ್‌ ಮಸ್ಕ್ ಕನಸು ನುಚ್ಚುನೂರು!

    ಸ್ಟಾರ್​​ಶಿಪ್ ರಾಕೆಟ್‌ ಸ್ಫೋಟಗೊಂಡು ಛಿದ್ರಛಿದ್ರವಾಗಿ ಹೊಗೆಯಾಗುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟರ್‌ನಲ್ಲಿ ಈ ವಿಚಾರ ಟ್ರೆಂಡಿಂಗ್‌ನಲ್ಲಿ ಚರ್ಚೆಯಾಗುತ್ತಿದೆ.

    MORE
    GALLERIES

  • 77

    Starship Rocket: ಉಡಾವಣೆಗೊಂಡ ಕೆಲವೇ ನಿಮಿಷದಲ್ಲಿ ಸ್ಟಾರ್‌ಶಿಪ್‌ ರಾಕೆಟ್ ಸ್ಫೋಟ; ಎಲಾನ್‌ ಮಸ್ಕ್ ಕನಸು ನುಚ್ಚುನೂರು!

    ರಾಕೆಟ್​ನ ಪ್ರಾಯೋಗಿಕ ಉಡಾವಣೆ ಏಪ್ರಿಲ್ 18ರಂದು ನಡೆಯಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ 48 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. 390 ಅಡಿ ಎತ್ತರವಿದ್ದ ಸ್ಟಾರ್​ಶಿಪ್ಅನ್ನು ಭೂಮಿಗೆ ಸುತ್ತುವರಿದು, ಬಳಿಕ ಪೆಸಿಫಿಕ್‌ ಸಮುದ್ರಕ್ಕಿಳಿಯುವಂತೆ ಮಾಡುವ ಯೋಜನೆ ರೂಪಿಸಲಾಗಿತ್ತು.

    MORE
    GALLERIES