2023ರಲ್ಲಿ ಎಲಾನ್ ಮಸ್ಕ್ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ ಎಂದು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಭವಿಷ್ಯ ನುಡಿದಿದ್ದಾರೆ. (ಸಾಂದರ್ಭಿಕ ಚಿತ್ರ)
2/ 7
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತರು ಆಗಿರುವ ಡಿಮಿಟ್ರಿ ಮೆಡ್ವೆಡೆವ್ ಇನ್ನೊಂದು ಭವಿಷ್ಯವನ್ನೂ ನುಡಿದಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಮುಂದಿನ ವರ್ಷ ಅಂದರೆ 2023ರಲ್ಲಿ ಜರ್ಮನಿ ಮತ್ತು ಫ್ರಾನ್ಸ್ ನಡುವೆ ಯುದ್ಧ ನಡೆಯಲಿದೆ ಎಂದು ಅವರು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ಮುಂದಿನ ವರ್ಷ ಅಮೆರಿಕಾದಲ್ಲಿ ಅಂತರ್ಯುದ್ಧ ನಡೆಯಲಿದೆ. ಇದು ಎಲಾನ್ ಮಸ್ಕ್ ಅಮೆರಿಕಾ ಅಧ್ಯಕ್ಷರಾಗಲು ಕಾರಣವಾಗಲಿದೆ ಎಂದು ರಷ್ಯಾ ಮಾಜಿ ಅಧ್ಯಕ್ಷ ಭವಿಷ್ಯ ನುಡಿದಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ಸದ್ಯ ಪುಟಿನ್ ಅವರ ಸಲಹಾ ಭದ್ರತಾ ಮಂಡಳಿಯ ಉಪ ಮುಖ್ಯಸ್ಥರಾದ ಮೆಡ್ವೆಡೆವ್, ಪುಟಿನ್ ಪ್ರಧಾನಿ ಹುದ್ದೆಯಲ್ಲಿದ್ದಾಗ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. (ಸಾಂದರ್ಭಿಕ ಚಿತ್ರ)
6/ 7
ಎಲಾನ್ ಮಸ್ಕ್ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗುವುದರಿಂದ ಅಂತರ್ಯುದ್ಧ ಹೊತ್ತಿ ಉರಿಯಲಿದೆ ಎಂದು ಸಹ ಡಿಮಿಟ್ರಿ ಮೆಡ್ವೆಡೆವ್ ಭವಿಷ್ಯ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ರಷ್ಯಾದ ಮಾಜಿ ಪ್ರಧಾನಿಯ ಭವಿಷ್ಯದಂತೆ ಎಲಾನ್ ಮಸ್ಕ್ ಅಮೆರಿಕಾದ ಅಧ್ಯಕ್ಷರಾಗಿಯೂ ಆಯ್ಕೆ ಆಗ್ತಾರಾ ಎಂಬ ಕುತೂಹಲ ಹುಟ್ಟಿಕೊಂಡಿದೆ. (ಸಾಂದರ್ಭಿಕ ಚಿತ್ರ)