ರಿವಾಬಾ ಜಡೇಜಾ ಶಿಕ್ಷಣ: ರಿವಾಬಾ ಜಡೇಜಾ ಅವರನ್ನು ರಿವಾ ಸೋಲಂಕಿ ಎಂದೂ ಕರೆಯಲಾಗುತ್ತದೆ. ಅವರು ರಾಜ್‌ಕೋಟ್‌ನ ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. 2019ರಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರಾಗುವ ಮೊದಲು, ಅವರು ರಜಪೂತ ಸಂಘಟನೆಯಾದ ಕರ್ಣಿ ಸೇನೆಯ ಮಹಿಳಾ ವಿಭಾಗದ ಅಧ್ಯಕ್ಷರಾಗಿದ್ದರು. ರಿವಾಬಾ ಜಡೇಜಾ ಅವರ ಚಿಕ್ಕಪ್ಪ ಹರಿ ಸಿಂಗ್ ಸೋಲಂಕಿ ಗುಜರಾತ್‌ನ ಕಾಂಗ್ರೆಸ್ ನಾಯಕರಾಗಿದ್ದರು.
ರಿವಾಬಾ ಜಡೇಜಾ ಮಗಳು: ರಿವಾಬಾ ಜಡೇಜಾ 2017 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ರವೀಂದ್ರ ಮತ್ತು ರಿವಾಬಾ ಮಗಳಿಗೆ 'ನಿಧ್ಯಾನಾ' (ನಿಧ್ಯಾನಾ ಜಡೇಜಾ) ಎಂದು ಹೆಸರಿಟ್ಟಿದ್ದಾರೆ. 'ನಿಧ್ಯಾನ' ಎಂಬುದು ಹಿಂದೂ ಹೆಸರು ಮತ್ತು ಭಾರತೀಯ ಮೂಲದಲ್ಲಿ ಇದರ ಅರ್ಥ ಅಂತಃಪ್ರಜ್ಞೆ, ಸಹಜ ಜ್ಞಾನ ಮತ್ತು ಅರ್ಥಗರ್ಭಿತ ತಿಳುವಳಿಕೆ. ರವೀಂದ್ರ ಮತ್ತು ರಿವಾಬಾ ತಮ್ಮ ಮಗಳು ನಿಧ್ಯಾನಾಳನ್ನು ಮಾಧ್ಯಮದ ಪ್ರಚಾರದಿಂದ ದೂರವಿಟ್ಟಿದ್ದಾರೆ. ಜೊತೆಗೆ ಅವರ ಹೆಚ್ಚಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದಿಲ್ಲ.