PHOTOS: ಇಂದು ವಿಶ್ವದಾದ್ಯಂತ ರಂಜಾನ್ ಸಂಭ್ರಮ; ಶುಭಾಶಯ ವಿನಿಮಯ ಮಾಡಿಕೊಂಡ ಮುಸ್ಲಿಂ ಬಾಂಧವರು
ಇಂದು ವಿಶ್ವದಾದ್ಯಂತ ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ಸಂಭ್ರಮ. ಮೇ 6 ರಿಂದ ಆರಂಭಗೊಂಡಿದ್ದ ಉಪವಾಸ ಜೂನ್ 4ರ ಸಂಜೆ ಮುಕ್ತಾಯಗೊಂಡಿದೆ. ಬುಧವಾರ ಸೂರ್ಯೋದಯದೊಂದಿಗೆ ಹಬ್ಬದ ಆಚರಣೆ ಆರಂಭಗೊಂಡಿತ್ತು. ಇದಕ್ಕಾಗಿ ಮೊಹಲ್ಲಾ, ಅಂಗಡಿ, ಮನೆ, ಮಸೀದಿ, ದರ್ಗಾ, ಈದ್ಗಾಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಝಗಮಗಿಸುತ್ತಿವೆ. ಮುಸ್ಲಿಂ ಬಾಂಧವರು ಇಂದು ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡ ಸುಮಧುರ ಕ್ಷಣಗಳು ಇಲ್ಲಿವೆ.