Post Wedding ಫೋಟೋಶೂಟ್ ವೇಳೆ ನದಿಗೆ ಬಿದ್ದ ಜೋಡಿ.. ನವವಿವಾಹಿತನ ದುರಂತ ಅಂತ್ಯ!
ಕೋಝಿಕ್ಕೋಡ್: ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಕ್ರೇಜ್ ಎಂದಿಗಿಂತಲೂ ಹೆಚ್ಚಾಗಿದೆ. ಸುಂದರ ತಾಣಗಳಲ್ಲಿ ವಧು-ವರಗಳು ಕ್ಯಾಂಡಿಡ್ ಫೋಟೋಗಳನ್ನು ತೆಗೆಸಿಕೊಳ್ಳತ್ತಾರೆ. ಅದೇ ರೀತಿ ಪೋಸ್ಟ್ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡ ನವ ಜೋಡಿ ಅನಾಹುತಕ್ಕೀಡಾಗಿದೆ.
ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ಭಾರಿ ದುರಂತ ನಡೆದಿದೆ. ಫೋಟೋಶೂಟ್ ಸಮಯದಲ್ಲಿ ನದಿಯಲ್ಲಿ ಮುಳುಗಿ ಮದುಮಗ ಮೃತಪಟ್ಟಿದ್ದು, ಮದುಮಗಳು ಆಸ್ಪತ್ರೆಗೆ ದಾಖಲಾಗಿದ್ದಾಳೆ.
2/ 7
ಕೇರಳದ ಕೋಝಿಕ್ಕೋಡ್ ಸಮೀಪದ ಕುಟ್ಟಿಯಾಡಿಯಲ್ಲಿ ಮದುವೆಯ ನಂತರದ ಫೋಟೋ ಶೂಟ್ ವೇಳೆ ನವವಿವಾಹಿತ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ)
3/ 7
ಕಡಿಯಂಗಡ ಮೂಲದ ರೆಜಿಲ್ ಮತ್ತು ಅವರ ಪತ್ನಿ ಕಾರ್ತಿಕಾ ಫೋಟೋಗೆ ಪೋಸ್ ನೀಡುತ್ತಿದ್ದಾಗ ಕುಟ್ಟಿಯಾಡಿ ನದಿಯಲ್ಲಿ ಬಲವಾದ ಪ್ರವಾಹಕ್ಕೆ ಸಿಲುಕಿದ್ದಾರೆ.
4/ 7
ಮುಳುಗುತ್ತಿದ್ದ ದಂಪತಿಯ ಕೂಗು ಕೇಳಿದ ಸ್ಥಳೀಯರು ನದಿಗೆ ಹಾರಿ ಇಬ್ಬರನ್ನೂ ಹೊರ ತಂದಿದ್ದಾರೆ. ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರೆಜಿಲ್ ಜೀವ ಉಳಿಸಲು ಸಾಧ್ಯವಾಗಲಿಲ್ಲ. (ಸಾಂದರ್ಭಿಕ ಚಿತ್ರ)
5/ 7
ಮಹಿಳೆಯನ್ನು ಮಲಬಾರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಮಾರ್ಚ್ 14 ರಂದು ವಿವಾಹವಾದ ದಂಪತಿ ಮದುವೆಯ ನಂತರದ ಫೋಟೋ ಶೂಟ್ಗಾಗಿ ನದಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
7/ 7
ಮದುವೆಗೆ ಸಂಬಂಧಿಸಿದ ವೀಡಿಯೊವನ್ನು ಪೂರ್ಣಗೊಳಿಸಲು ದಂಪತಿ ಬಂದಾಗ ಅಪಘಾತ ಸಂಭವಿಸಿದೆ. ಸುರಕ್ಷಿತ ಕ್ರಮಗಳನ್ನು ನಿರ್ಲಕ್ಷಿಸಿ ಫೋಟೋಶೂಟ್ ಗೆ ಮುಂದಾಗಿದ್ದೇ ದುರಂತಕ್ಕೆ ಕಾರಣ ಎನ್ನಲಾಗ್ತಿದೆ. (ಸಾಂದರ್ಭಿಕ ಚಿತ್ರ)