TMC MLA: ಸಿಬಿಐ ತಂಡದಿಂದ ಹಗರಣದ ವಿಚಾರಣೆ, ಮೊಬೈಲ್ ಕೊಳಕ್ಕೆಸೆದ ತೃಣಮೂಲ ಶಾಸಕ!
ತೃಣಮೂಲ ಕಾಂಗ್ರೆಸ್ ಶಾಸಕ ಜೀವನ್ ಕೃಷ್ಣ ಸಹಾ ಅವರನ್ನೂ ಸಹ ಸಿಬಿಐ ವಿಚಾರಣೆ ನಡೆಸುತ್ತಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ಶಾಸಕ ಜೀವನ್ ಕೃಷ್ಣ ಸಹಾ ವಿಚಾರಣೆ ಆರಂಭವಾಗಿದೆ. ಸದ್ಯ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಕಾಂಗ್ರೆಸ್ ಶಾಸಕ ಜೀವನ್ ಕೃಷ್ಣ ಸಹಾ ಸಿಬಿಐ ಅಧಿಕಾರಿಗಳು ಬರುವುದನ್ನು ಕಾಣುತ್ತಲೇ ತಮ್ಮ ಮೊಬೈಲ್ ನ್ನು ಕಿಟಕಿಯಿಂದ ಕೆರೆಗೆ ಎಸೆದಿದ್ದಾರೆ.