ನವರಾತ್ರಿಯಲ್ಲಿ ದುಷ್ಟರ ಸಂಹರಣಿ ದುರ್ಗೆಯ ಆರಾಧನೆ ದೇಶದೆಲ್ಲೆಡೆ ನಡೆಯುತ್ತದೆ. ಅದರಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ದುರ್ಗೆಯ ಆರಾಧನೆ ವಿಶಿಷ್ಠ. ಸಾರ್ವಜನಿಕವಾಗಿ ದುರ್ಗೆಯ ಮೂರ್ತಿ ಪ್ರತಿಷ್ಟಾಪಿಸಿ ಇಲ್ಲಿ ಪೂಜೆ ಮಾಡಲಾಗುತ್ತದೆ. ಶಕ್ತಿ ಸ್ವರೂಪಿಣಿಯಾದ ದುರ್ಗೆಯ ವಿವಿಧ ಅವತಾರಗಳು ಇಲ್ಲಿ ಅನಾವರಣಗೊಳ್ಳುತ್ತದೆ. ಈ ಬಾರಿ ಕೊರೋನಾ ಮಹಾಮಾರಿ ಜಗತ್ತನ್ನೇ ಕಾಡುತ್ತಿರುವ ಹಿನ್ನಲೆ ಸೋಂಕನ್ನು ಹೊಡೆದೊಡಿಸುವ ಮಾದರಿ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿದೆ. ಈ ಮೂರ್ತಿ ಎಲ್ಲರ ಗಮನಸೆಳೆಯುತ್ತಿದೆ.