ಈ ಪ್ರದೇಶದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇದೇ ಹಿನ್ನಲೆ ಇದನ್ನೇ ಮೂಲ ಉತ್ಪನ್ನವಾಗಿ ಬಳಸಿ ಇಲ್ಲಿನ ಮಹಿಳಾ ಸ್ವ ಸಹಾಯ ಗುಂಪು ಉದ್ಯಮ ಶುರು ಮಾಡಿತು. ಪ್ರೇರಣಾ ಸ್ವಸಹಾಯ ಸಂಘದ ಬ್ಯಾನರ್ ಅಡಿ ಈ ಬೆಳ್ಳುಳ್ಳಿ ಬಳಸಿ, ಉದ್ದಿಮೆ ಶುರು ಮಾಡಿದರು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕೌಟುಂಬಿಕ ಜೀವನ ನಡೆಸುತ್ತಿದ್ದ 100 ಮಹಿಳೆಯರ ಬದುಕನ್ನು ಬೆಳ್ಳುಳ್ಳಿ ಬದಲಿಸಿದೆ.
ಮಹಿಳಾ ಸಂಘಟನೆಗಳು ಬೆಳ್ಳುಳ್ಳಿಯಿಂದ ತಯಾರಿಸಿದ ಉತ್ಪನ್ನಗಳೊಂದಿಗೆ ಇಡೀ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಬೇಡಿಕೆ ಪಡೆದಿದೆ. ಅದರಲ್ಲೂ ಮಹಿಳೆಯರು ತಯಾರಿಸುವ ಉಪ್ಪಿನಕಾಯಿಗೆ ಇಷ್ಟೊಂದು ಬೇಡಿಕೆ ಇದೆ. ಪ್ರಾರಂಭದಲ್ಲಿ 5 ಕೆಜಿ ಉಪ್ಪಿನಕಾಯಿ ತಯಾರಿಸುತ್ತಿದ್ದ ಮಹಿಳೆಯರು ಇದೀಗ 800 ಕೆಜಿ ಉಪ್ಪಿನಕಾಯಿ ತಯಾರಿಸುತ್ತಿದ್ದಾರೆ. ಸಾವಿರ ರೂಪಾಯಿಯಿಂದ ಆರಂಭವಾದ ಗಳಿಕೆ ಈಗ ಲಕ್ಷ ರೂಪಾಯಿ ತಲುಪಿದೆ. ಇದರಿಂದಾಗಿ ಆಡಳಿತದ ನೆರವಿನಿಂದ ಜಿಲ್ಲೆಯಲ್ಲಿ ಇನ್ನೂ ಐದು ಘಟಕಗಳನ್ನು ಹಾಕಲು ಯೋಜನೆ ರೂಪಿಸಲಾಗುತ್ತಿದೆ.
ರಾಜ್ಯ ಸರ್ಕಾರದ ಒಂದು ಜಿಲ್ಲೆಗೆ ಒಂದು ಉತ್ಪನ್ನ ಎಂಬ ಯೋಜನೆಗೆ ಮಂದಸೌರ್ನಲ್ಲಿ ಬೆಳ್ಳುಳ್ಳಿಯನ್ನು ಆಯ್ಕೆ ಮಾಡಿತ್ತು. ಕೇಂದ್ರದ ಸ್ವಾವಲಂಬಿ ಭಾರತ ಯೋಜನೆಯಡಿ ಜಿಲ್ಲೆಯ 100ಕ್ಕೂ ಹೆಚ್ಚು ಮಹಿಳೆಯರು ಬೆಳ್ಳುಳ್ಳಿಯ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಆರಂಭದಲ್ಲಿ 2ರಿಂದ 5 ಕೆ.ಜಿ ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡಲಾಗುತ್ತಿದ್ದು, ಈಗ 800 ಕೆ.ಜಿ.ಗೂ ಅಧಿಕ ಉಪ್ಪಿನಕಾಯಿ ತಯಾರಿಸುತ್ತಿರುವ ಈ ಮಹಿಳಾ ಬಳಗಕ್ಕೆ ಬೇಡಿಕೆ ಬಂದಿದೆ.
ಆರಂಭದಲ್ಲಿ 2ರಿಂದ 5 ಕೆಜಿ ಉಪ್ಪಿನಕಾಯಿ ತಯಾರಿಸಲಾಗುತ್ತಿತ್ತು. ಬೇಡಿಕೆ ಹೆಚ್ಚಾದಾಗ ಹೆಚ್ಚಿನ ಮಹಿಳೆಯರು ಗುಂಪಿಗೆ ಸೇರಿದರು. 28 ಸ್ವಸಹಾಯ ಗುಂಪುಗಳ 100 ಕ್ಕೂ ಹೆಚ್ಚು ಮಹಿಳೆಯರು ಈಗ ಬೆಳ್ಳುಳ್ಳಿ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಮಂದಸೌರ್ ಜಿಲ್ಲೆಯಲ್ಲಿ 2533 ಸ್ವಸಹಾಯ ಗುಂಪುಗಳಿವೆ. 29000 ಮಹಿಳೆಯರು ಇವುಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಹೆಚ್ಚು ಹೆಚ್ಚು ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಆಡಳಿತ ಮುನ್ನಡೆಯುತ್ತಿದೆ.