ದುಬೈ ಪ್ರವಾಸ ಹೋಗ್ಬೇಕು ಅಂದ್ಕೊಂಡಿದ್ದೀರಾ? ನಿಮಗೆಂದೇ ಸಖತ್ ಪ್ರವಾಸದ ಪ್ಯಾಕೇಜ್ ಒಂದನ್ನು IRCTC ಘೋಷಣೆ ಮಾಡಿದೆ. (ಸಾಂದರ್ಭಿಕ ಚಿತ್ರ)
2/ 7
5 ಹಗಲು 4 ರಾತ್ರಿಗಳ ಈ ಪ್ರವಾಸ ಫೆಬ್ರವರಿ 1 ರಿಂದಲೇ ಶುರುವಾಗಲಿದೆ. ಆದರೆ ಕರ್ನಾಟಕದ ಯಾವುದೇ ನಗರದಿಂದ ಈ ಪ್ರವಾಸ ಆರಂಭವಾಗುತ್ತಿಲ್ಲ. ಭೋಪಾಲ್ನಿಂದ ಈ ಪ್ಯಾಕೇಜ್ ಪ್ರವಾಸ ಆರಂಭವಾಗಲಿದೆ. (ಸಾಂದರ್ಭಿಕ ಚಿತ್ರ)
3/ 7
ಭೋಪಾಲ್ ವಿಮಾನ ನಿಲ್ದಾಣದಿಂದ ಮುಂಬೈ ಮೂಲಕ ದುಬೈಗೆ ಪ್ರವಾಸದ ಪ್ಯಾಕೇಜ್ ಆರಂಭವಾಗಲಿದೆ. (ಸಾಂದರ್ಭಿಕ ಚಿತ್ರ)
4/ 7
ಐದು ಹಗಲು ಮತ್ತು ನಾಲ್ಕು ರಾತ್ರಿಗಳ ಈ ಪ್ಯಾಕೇಜ್ ಅಡಿಯಲ್ಲಿ ನೀವು ಏಕಾಂಗಿಯಾಗಿ ಪ್ರವಾಸ ಮಾಡ್ತೀರಿ ಅಂತಾದ್ರೆ ನೀವು 1,08,100 ರೂ. ಪಾವತಿಸಬೇಕು. (ಸಾಂದರ್ಭಿಕ ಚಿತ್ರ)
5/ 7
ಆದರೆ ಇಬ್ಬರು ಪ್ರವಾಸ ಮಾಡೋದಿದ್ರೆ ನೀವು ಪ್ರತಿ ವ್ಯಕ್ತಿಗೆ 1,04,900 ರೂ, ಪಾವತಿಸಬೇಕು. ಮೂರು ಜನರಿಗೆ ಬುಕ್ ಮಾಡಲು, ನೀವು ಪ್ರತಿ ವ್ಯಕ್ತಿಗೆ 1,03,900 ರೂ. ಪಾವತಿಸಿಬೇಕು. (ಸಾಂದರ್ಭಿಕ ಚಿತ್ರ)
6/ 7
ದುಬೈದಿಂದ ವಾಪಸ್ ಆಗೋಕೆ ವಿಮಾನ ಟಿಕೆಟ್, ದುಬೈ ವೀಸಾ ಶುಲ್ಕಗಳು, ಡಿಲಕ್ಸ್ ಹೋಟೆಲ್ಗಳಲ್ಲಿ ವಸತಿ, ಊಟ, ಪ್ರಯಾಣದ ವಿಮೆ, ಇಂಗ್ಲೀಷ್ ಮಾತನಾಡುವ ಗೈಡ್ ಈ ಸೌಲಭ್ಯಗಳನ್ನು ಈ ಪ್ಯಾಕೇಜ್ ಒಳಗೊಂಡಿರುತ್ತದೆ. (ಸಾಂದರ್ಭಿಕ ಚಿತ್ರ)
7/ 7
ನೀವೂ ಈ ಪ್ರವಾಸ ಪ್ಯಾಕೇಜ್ನಡಿ ದುಬೈಗೆ ಹೋಗ್ಬೇಕಿದ್ರೆ IRCTC ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಸುಲಭವಾಗಿ ಬುಕ್ ಮಾಡಬಹುದು (ಸಾಂದರ್ಭಿಕ ಚಿತ್ರ)